ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ತನ್ನ ಪ್ರಯಾಣಿಕ ಟಿಕೆಟ್ ವಿತರಣಾ ವ್ಯವಸ್ಥೆಯಲ್ಲಿ ವಿಮಾನ ಮಾದರಿಯನ್ನು ಅನುಸರಿಸಲಿದೆ.
ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಮಾತನಾಡಿ, ಪ್ರಸ್ತುತ ಶೇ.85ರಷ್ಟು ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲಾಗುತ್ತಿದ್ದು, ಕೌಂಟರ್‌ಗಳಿಂದ ಟಿಕೆಟ್ ಖರೀದಿಸುವವರಿಗೆ ಕ್ಯೂಆರ್ ಕೋಡ್ ಸಹ ಲಭ್ಯವಿರುತ್ತದೆ ಎಂದರು.
ನಾವು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಿದ್ದೇವೆ. ಅದನ್ನು ಟಿಕೆಟ್‌ಗಳಲ್ಲಿ ನೀಡಲಾಗುವುದು. ಆನ್‌ಲೈನ್‌ನಲ್ಲಿ ಖರೀದಿಸಿದರೆ ಕೋಡ್ ಅನ್ನು ಟಿಕೆಟ್‌ನಲ್ಲಿ ಒದಗಿಸುತ್ತೇವೆ. ವಿಂಡೋ ಟಿಕೆಟ್‌ಗಳಲ್ಲಿ ಸಹ ಭೌತಿಕ ಟಿಕೆಟ್ ಪಡೆದರೆ, ಟೆಕ್ಸ್ ಸಂದೇಶ ಕಳುಹಿಸಲಾಗುತ್ತದೆ. ಪ್ರಯಾಣಿಕರು ಮೊಬೈಲ್ ಫೋನ್ನಲ್ಲಿನ ಲಿಂಕ್ಗೆ ಭೇಟಿ ನೀಡಿದರೇ ಕ್ಯೂಆರ್ ಕೋಡ್ ತೆರೆದುಕೊಳ್ಳುತ್ತದೆ.
ನಿಲ್ದಾಣ ಅಥವಾ ರೈಲುಗಳಲ್ಲಿ ಟಿಟಿಇ, ತಮ್ಮ ಕೈಯಲ್ಲಿರುವ ಉಪಕರಣಗಳೊಂದಿಗೆ ಅಥವಾ ಕ್ಯೂಆರ್ ಅಪ್ಲಿಕೇಷನ್ ಹೊಂದಿರುವ ಮೊಬೈಲ್ ಫೋನ್ ಮೂಲಕ ಕೋಡ್ ಸ್ಕ್ಯಾನ್ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರ ವಿವರಗಳನ್ನು ತಕ್ಷಣ ಸೆರೆಹಿಡಿಯಲು ಸಾಧ್ಯವಾಗುತ್ತದೆ. ಇದರಿಂದ ಟಿಕೆಟಿಂಗ್ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳಲಿದೆ ಎಂದು ಹೇಳಿದರು.
ರೈಲ್ವೆ ಈಗಿನಂತೆ ಸಂಪೂರ್ಣವಾಗಿ ಕಾಗದರಹಿತವಾಗಿ ಮುಂದುವರಿಯಲು ಯೋಜಿಸುತ್ತಿಲ್ಲ. ಕಾಯ್ದಿರಿಸಿದ, ಕಾಯ್ದಿರಿಸದ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಆನ್‌ಲೈನ್ ಬುಕಿಂಗ್‌ಗೆ ಅನುಕೂಲ ಆಗುವ ಮೂಲಕ ಅದರ ಬಳಕೆಯು ಗಣನೀಯವಾಗಿ ಕಡಿಮೆ ಮಾಡುತ್ತದೆ. ಉಪನಗರ ಕಾರ್ಡ್ ಮತ್ತು ಕೋಲ್ಕತ್ತಾ ಮೆಟ್ರೊಗಳಲ್ಲಿ ಆನ್‌ಲೈನ್ ರೀಚಾರ್ಜ್ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ ಎಂದರು.
ನಿಲ್ದಾಣಕ್ಕೆ ಪ್ರವೇಶಿಸುವ ಎಲ್ಲ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಂತಹ ಚೆಕ್ ಇನ್‌ನೊಂದಿಗೆ ಸಂಪರ್ಕವಿಲ್ಲದ ಟಿಕೆಟ್ ಪರಿಶೀಲನೆಯ ಪ್ರಾಯೋಗಿಕ ಯೋಜನೆಯನ್ನು ಪ್ರಯಾಗ್ರಾಜ್ ಜಂಕ್ಷನ್‌ನಲ್ಲಿ ಪರಿಚಯಿಸಲಾಗಿದೆ.