ETV Bharat / business

ರಸ್ತೆ ನಿರ್ಮಾಣ ಕಂಪನಿಗಳ ಆದಾಯ ಶೇ 8-10 ರಷ್ಟು ಕುಸಿತ - ರಸ್ತೆ ನಿರ್ಮಾಣ ಎಂಜಿನಿಯರಿಂಗ್

ಕಳೆದ ಎರಡು ಆರ್ಥಿಕ ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಡಿಮೆ ಪ್ರಮಾಣದ ಕಾಮಗಾರಿಗಳನ್ನು ನೀಡುತ್ತಿರುವುದು ಕೂಡ ಆದಾಯ ಕಡಿಮೆಯಾಗಲು ಕಾರಣವಾಗಿದೆ. ಆದರೆ ಈ ವರ್ಷದಲ್ಲಿ ಲಾಕ್​ಡೌನ್​ ಕಾರಣದಿಂದ ಕೆಲಸ ಸ್ಥಗಿತವಾಗಿದ್ದರಿಂದ ಹಾಗೂ ಕಾರ್ಮಿಕರ ಕೊರತೆಯಿಂದ ಕೆಲಸ ಕುಂಠಿತಗೊಂಡಿದ್ದರಿಂದ ಬೆಳವಣಿಗೆ ದರ ಶೂನ್ಯಕ್ಕೂ ಕೆಳಗಿನ ಮಟ್ಟಕ್ಕೆ ಇಳಿದಿದೆ.

road EPC companies
road EPC companies
author img

By

Published : Jun 24, 2020, 3:44 PM IST

ರಸ್ತೆ ನಿರ್ಮಾಣ ಎಂಜಿನಿಯರಿಂಗ್ ಕಂಪನಿಗಳ ಆದಾಯ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 8 ರಿಂದ 10 ಕುಸಿತವಾಗುವ ಅಂದಾಜು ಮಾಡಲಾಗಿದೆ. ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದರಿಂದ ಈ ಕಂಪನಿಗಳ ಆದಾಯ ಕುಸಿತವಾಗಲು ಕಾರಣವೆನ್ನಲಾಗಿದೆ.

ಕ್ರಿಸಿಲ್​ನಿಂದ ಗುಣಮಟ್ಟದ ರೇಟಿಂಗ್ ಪಡೆದ ಸುಮಾರು 300 ಕಂಪನಿಗಳ ಬೆಳವಣಿಗೆ ದರ 2017 ರಿಂದ 2020 ರ ಅವಧಿಯಲ್ಲಿ ಶೇ 17 ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಬೆಳವಣಿಗೆ ಶೇ 8 ರಿಂದ 10 ಕುಸಿತವಾಗಲಿದೆ.

ಕಳೆದ ಎರಡು ಆರ್ಥಿಕ ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಡಿಮೆ ಪ್ರಮಾಣದ ಕಾಮಗಾರಿಗಳನ್ನು ನೀಡುತ್ತಿರುವುದು ಕೂಡ ಆದಾಯ ಕಡಿಮೆಯಾಗಲು ಕಾರಣವಾಗಿದೆ. ಆದರೆ ಈ ವರ್ಷದಲ್ಲಿ ಲಾಕ್​ಡೌನ್​ ಕಾರಣದಿಂದ ಕೆಲಸ ಸ್ಥಗಿತವಾಗಿದ್ದರಿಂದ ಹಾಗೂ ಕಾರ್ಮಿಕರ ಕೊರತೆಯಿಂದ ಕೆಲಸ ಕುಂಠಿತಗೊಂಡಿದ್ದರಿಂದ ಬೆಳವಣಿಗೆ ದರ ಶೂನ್ಯಕ್ಕೂ ಕೆಳಗಿನ ಮಟ್ಟಕ್ಕೆ ಇಳಿದಿದೆ.

"ರಸ್ತೆ ಕಾಮಗಾರಿ ಕಂಪನಿಗಳ ಬಿಲ್ಲಿಂಗ್ ಸಾಮಾನ್ಯವಾಗಿ ಮಾರ್ಚ್​ ತಿಂಗಳಲ್ಲಿ ಆಗುತ್ತದೆ. ಆದರೆ ಮಾರ್ಚ್​ 22 ರಂದು ಆರಂಭವಾದ ಲಾಕ್​ಡೌನ್​ನಿಂದ ವರ್ಷಾಂತ್ಯದ ಕೊನೆಯ ವಾರದಲ್ಲಿ ನಡೆಯಬೇಕಿದ್ದ ಪ್ರಮುಖ ಕೆಲಸಗಳು ನಿಂತವು. ಇನ್ನು ಈಗ ಲಾಕ್​ಡೌನ್​ ಮುಗಿದಿದ್ದರೂ ಮತ್ತೆ ಕೆಲಸಗಳು ಚುರುಕು ಪಡೆಯಲು ಸಮಯ ಹಿಡಿಯುತ್ತದೆ. ಹೀಗಾಗಿ ಒಟ್ಟಾರೆ ಶೇ 8 ರಿಂದ 10 ರಷ್ಟು ಆದಾಯ ಈ ಬಾರಿ ಕಡಿಮೆಯಾಗಲಿದೆ ಎನ್ನುತ್ತಾರೆ ಕ್ರಿಸಿಲ್ ರೇಟಿಂಗ್ಸ್​ನ ಸೀನಿಯರ್ ಡೈರೆಕ್ಟರ್ ಸಚಿನ ಗುಪ್ತಾ.

ಲಾಕ್​ಡೌನ್​ ಕಾರಣದಿಂದ ರಸ್ತೆ ನಿರ್ಮಾಣ ಕಂಪನಿಗಳು ಏಪ್ರಿಲ್​​ನಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಏಪ್ರಿಲ್​ನಲ್ಲಿ ಇವರಿಗೆ ಯಾವುದೇ ಆದಾಯವೂ ಬಂದಿಲ್ಲ. ಆದರೂ ನೌಕರರು ಹಾಗೂ ಇತರ ಆಫೀಸ್​ ವೆಚ್ಚಗಳನ್ನು ಎಂದಿನಂತೆ ಅವರು ನಿಭಾಯಿಸಬೇಕಾಗಿದೆ.

ಬಹುಶಃ ಮುಂಗಾರು ಹಂಗಾಮಿನ ನಂತರ ಕಾರ್ಮಿಕರು ಕೆಲಸಕ್ಕೆ ಮರಳುವ ಸಾಧ್ಯತೆಯಿದ್ದು, ಅಲ್ಲಿಂದ ಮುಂದೆ ಕೆಲಸಕ್ಕೆ ವೇಗ ಬರಬಹುದು. ಕೊರೊನಾ ವೈರಸ್​ ಎಷ್ಟು ಬೇಗ ನಿರ್ಮೂಲನೆಯಾಗುವುದೋ ಅಷ್ಟು ಬೇಗ ನಿರ್ಮಾಣ ವಲಯ ಅಭಿವೃದ್ಧಿ ಸಾಧಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.