ETV Bharat / business

ಲಾಕ್​ಡೌನ್​ ವೇಳೆ $1.3 ಬಿಲಿಯನ್ ಆದಾಯ ಗಳಿಸಿದ PUBG; ಭಾರತದಲ್ಲೇ 175 ಮಿಲಿಯನ್​ ಡೌನ್​ಲೋಡ್​!!

ಇತ್ತೀಚೆಗೆ ಭಾರತದಲ್ಲಿ ಚೀನಾ ಮೂಲದ 59 ಆ್ಯಪ್​ಗಳನ್ನು ನಿಷೇಧಿಸಲಾಯ್ತು. ಈ ವೇಳೆ PUBG ಆ್ಯಪ್​ ನಿಷೇಧಿಸಿಲ್ಲ. ಇದು ಸಂಪೂರ್ಣ ಚೀನಾ ಮೂಲದ ಆ್ಯಪ್ ಅಲ್ಲ. ದಕ್ಷಿಣ ಕೊರಿಯಾದ ಸಂಸ್ಥೆಯಾದ ಬ್ಲೂಹೋಲ್, ಈ ಗೇಮ್‌ನ​ ರಚಿಸಿ ನಿರ್ವಹಿಸುತ್ತಿದೆ..

PUBG
ಪಬ್​ಜಿ
author img

By

Published : Jul 4, 2020, 6:48 PM IST

ನವದೆಹಲಿ : ಯುವಕರ ಫೇವರೆಟ್​ ಮೊಬೈಲ್ ಗೇಮ್​ ​PUBG ಈ ವರ್ಷದ ಪ್ರಥಮಾರ್ಧದಲ್ಲೇ $1.3 ಬಿಲಿಯನ್ (ಸರಿಸುಮಾರು 9,731 ಕೋಟಿ ರೂ.) ಆದಾಯ ಗಳಿಸಿದೆ.

ಇದು ತನ್ನ ಈವರೆಗಿನ ಗಳಿಕೆಯನ್ನು $3 ಬಿಲಿಯನ್ (ಸುಮಾರು 22,457 ಕೋಟಿ ರೂ.)ಗೆ ಏರಿಸಿಕೊಂಡಿದೆ. ವಿಶೇಷ ಅಂದರೆ ಭಾರತದಲ್ಲೇ ಈ ಆ್ಯಪ್​ ಅತಿ ಹೆಚ್ಚು ಡೌನ್‌ಲೋಡ್‌ ಆಗಿದ್ದು, ಹದಿನೇಳುವರೆ ಕೋಟಿ(17 ಕೋಟಿ 50 ಲಕ್ಷ) ಜನರು ಪಬ್​ಜಿ ಇನ್‌ಸ್ಟಾಲ್​ ಮಾಡಿಕೊಳ್ಳುವ ಮೂಲಕ ಆ್ಯಪ್​ ಅಗ್ರಸ್ಥಾನದಲ್ಲಿದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಜನರು ಮನೆಯಲ್ಲಿಯೇ ಇರುವುದರಿಂದ, PUBG ಇನ್‌ಸ್ಟಾಲ್​ ಮಾಡಿ ಗೇಮ್​ ಆಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪಬ್​ಜಿ ಆದಾಯವು ಮಾರ್ಚ್‌ನಲ್ಲಿ ದಾಖಲೆಯ ಮಟ್ಟ, ಅಂದರೆ $ 270 ಮಿಲಿಯನ್​ (ಸುಮಾರು 2,021 ಕೋಟಿ ರೂ.) ತಲುಪಿದೆ ಎಂದು ವಿಶ್ಲೇಷಣಾ ಸಂಸ್ಥೆ ಸೆನ್ಸಾರ್ ಟವರ್‌ ಬಹಿರಂಗಪಡಿಸಿದೆ.

ಇತ್ತೀಚೆಗೆ ಭಾರತದಲ್ಲಿ ಚೀನಾ ಮೂಲದ 59 ಆ್ಯಪ್​ಗಳನ್ನು ನಿಷೇಧಿಸಲಾಯ್ತು. ಈ ವೇಳೆ PUBG ಆ್ಯಪ್​ ನಿಷೇಧಿಸಿಲ್ಲ. ಇದು ಸಂಪೂರ್ಣ ಚೀನಾ ಮೂಲದ ಆ್ಯಪ್ ಅಲ್ಲ. ದಕ್ಷಿಣ ಕೊರಿಯಾದ ಸಂಸ್ಥೆಯಾದ ಬ್ಲೂಹೋಲ್, ಈ ಗೇಮ್‌ನ​ ರಚಿಸಿ ನಿರ್ವಹಿಸುತ್ತಿದೆ.

PUBG ಜನಪ್ರಿಯವಾದ ನಂತರ ಚೀನಾ ಸಂಸ್ಥೆಯಾದ ಟೆನ್ಸೆಂಟ್, ಚೀನಾದಲ್ಲಿ ಉತ್ಪನ್ನವನ್ನು ಮಾರುಕಟ್ಟೆಗೆ ತರಲು ಬ್ಲೂಹೋಲ್‌ನೊಂದಿಗೆ ಕೈಜೋಡಿಸಿತು. ಜೊತೆಗೆ ಅದರ ವಿತರಣೆಯ ಹೆಚ್ಚಿನ ಭಾಗವನ್ನು ನಿರ್ವಹಿಸಲು ಪ್ರಾರಂಭಿಸಿತು. ಈ ಗೇಮ್‌ನ ಟೆನ್ಸೆಂಟ್ ಹೋಲ್ಡಿಂಗ್ಸ್ ಭಾರತದಲ್ಲಿ ವಿತರಿಸಿದೆ. ಇದು ಸಂಪೂರ್ಣ ಚೀನಾ ಮೂಲದ ಕಂಪನಿ ಅಲ್ಲ. ಅದರ ಸಹ ಮಾಲೀಕತ್ವದ ಕಾರಣ ಭಾರತದಲ್ಲಿ ನಿಷೇಧಿತ ಆ್ಯಪ್​ಗಳ ಪಟ್ಟಿಯಲ್ಲಿ ಪಬ್​ಜಿ ಇಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.