ನವದೆಹಲಿ: ಈ ವರ್ಷದ ಅಕ್ಟೋಬರ್ನ ಅಂದರೆ ಹಬ್ಬದ ತಿಂಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳು ದಾಖಲೆ ಪ್ರಮಾಣದಲ್ಲಿ ಅಂದರೆ ಸರಿಸುಮಾರು 2. 52 ಲಕ್ಷ ಕೋಟಿ ರೂ.ನಷ್ಟು ಸಾಲ ವಿತರಿಸಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಈ ಒಂದು ಮಾಸಿಕದಲ್ಲಿ 1.05 ಲಕ್ಷ ಕೋಟಿ ರೂ. ಹೊಸ ಸಾಲ ನೀಡಲಾಗಿದೆ. 46,800 ಕೋಟಿ ರೂ. ವರ್ಕಿಂಗ್ ಕ್ಯಾಪಿಟಲ್ ಸಾಲ ವಿತರಣೆಯಾಗಿದೆ ಎಂದು ಇಲಾಖೆಯ ಹಣಕಾಸು ಸೇವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೃಷಿಕರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ತ್ವರಿತವಾಗಿ ಸಾಲ ನೀಡುವ ಉದ್ದೇಶದಿಂದ ದೇಶದ 400 ಜಿಲ್ಲೆಗಳಲ್ಲಿ ಸಾಲ ಮೇಳ ಆಯೋಜಿಸಲಾಗಿತ್ತು. ಇದರ ಪರಿಣಾಮವಾಗಿ ಸಾಲ ನೀಡಿಕೆಯ ಪ್ರಮಾಣವು ಹೆಚ್ಚಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ.