ETV Bharat / business

ದೇಶದ ಕಲ್ಲಿದ್ದಲು ವಲಯ ದಶಕಗಳ 'ಲಾಕ್‌ಡೌನ್'‌ನಿಂದ ಮುಕ್ತವಾಗಿದೆ: ಪ್ರಧಾನಿ ಮೋದಿ

ವಾಣಿಜ್ಯೀಕರಣಗೊಳಿಸುವ ಕಲ್ಲಿದ್ದಲು ಗಣಿಗಾರಿಕೆಯ ಹರಾಜಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಪ್ರತಿಯೊಬ್ಬ ಪಾಲುದಾರನಿಗೂ ಉತ್ತಮ ಅವಕಾಶ ಮಾಡಿಕೊಡಲಿದೆ. ಕಲ್ಲಿದ್ದಲು ಮಾರುಕಟ್ಟೆ ಈಗ ಮುಕ್ತವಾಗಿದ್ದು, ದೇಶದ ಆರ್ಥಿಕತೆಯ ಪ್ರತಿಯೊಂದು ವಲಯಗಳಿಗೂ ಸಹಕಾರಿಯಾಗಲಿದೆ ಎಂದರು.

pm-modi-launches-auction-of-41-coal-mines-for-commercial-mining
ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಹಾರಾಜಿಗೆ ಪ್ರಧಾನಿ ಮೋದಿ ಚಾಲನೆ
author img

By

Published : Jun 18, 2020, 1:33 PM IST

ನವದೆಹಲಿ: ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ 41 ಘಟಕಗಳ ಹರಾಜಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು, ಕೋವಿಡ್‌ ಬಿಕ್ಕಟ್ಟನ್ನು ದೇಶ ಅವಕಾಶವನ್ನಾಗಿ ಸದುಪಯೋಗ ಮಾಡಿಕೊಳ್ಳಲಿದೆ. ಇದು ದೇಶವನ್ನು ಸ್ವಾವಲಂಬಿಯನ್ನಾಗಿಸಲು ಕಲಿಸಿಕೊಟ್ಟಿದ್ದು, ಇಂಧನದ ಆಮದು ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವತ್ತ ನಾವು ಸಾಗಬೇಕಿದೆ ಎಂದರು.

ದಶಕಗಳಿಂದ ದೇಶದಲ್ಲಿನ ಕಲ್ಲಿದ್ದಲು ವಲಯ ಕೆಲವರ ಕೈಯಲ್ಲಷ್ಟೇ ಉಳಿದುಕೊಂಡಿತ್ತು. ಇದರಿಂದ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ. ಇಂಧನ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಲು ಇದು ತುಂಬಾ ಅಡ್ಡಿಯಾಗಿತ್ತು. ಈ ನಿಟ್ಟಿನಲ್ಲಿ 2014ರ ನಂತರ ಹಲವು ನಿರ್ಧಾರಗಳನ್ನು ಕೈಗೊಂಡ ನಂತರ ಸಾಕಷ್ಟು ಬದಲಾವಣೆಯಾಗಿದೆ. ಕಲ್ಲಿದ್ದಲು ವಲಯಕ್ಕೆ ಸರ್ಕಾರದ ನಿರ್ಧಾರಗಳು ಶಕ್ತಿ ನೀಡಿದೆ. ಡಿಜಿಟಲ್‌ ಕಲ್ಲಿದ್ದಲು‌ ಹರಾಜಿನಿಂದ ಆತ್ಮನಿರ್ಭರ ಭಾರತ್‌‌ಗೆ ಹೊಸ ಭರವಸೆ ದೊರೆಯಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಲಿದ್ದಲು ಗಣಿಗಾರಿಕೆ ವಲಯವನ್ನು ವಾಣಿಜ್ಯೀಕರಣ ಮಾಡುತ್ತಿರುವುದರಿಂದ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ್‌ ಜೋಶಿ ಈ ಮೊದಲು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.