ನವದೆಹಲಿ: ದೀಪಾವಳಿ ಹಬ್ಬದ ವೇಳೆ ಸ್ಥಳೀಯರಿಗೆ ಧ್ವನಿಯಾಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವೋಕಲ್ ಫಾರ್ ಲೋಕಲ್ಗಾಗಿ ಉತ್ತೇಜನ ನೀಡಲು ದೇಶವಾಸಿಗರು ಸ್ಥಳೀಯ ಉತ್ಪನ್ನಗಳನ್ನು ಕೊಳ್ಳಲು ದೀಪಾವಳಿ ಹಬ್ಬ ಒಂದು ದೊಡ್ಡ ಸಮಯವಾಗಿದೆ. ಸ್ಥಳೀಯರೊಂದಿಗೆ ದೀಪಾವಳಿ ಆಚರಿಸುವುದರಿಂದ ಆರ್ಥಿಕತೆಗೆ ಹೊಸ ಉತ್ತೇಜನ ಸಿಗಲಿದೆ ಎಂದು ಹೇಳಿದರು.
ವಾರಾಣಸಿಯ ಯೋಜನೆಗಳು ವಿಡಿಯೋ ಕಾನ್ಫ್ರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಜನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸುವಾಗ ವೋಕಲ್ ಫಾರ್ ಲೋಕಲ್ ಜೊತೆಗೆ ದೀಪಾವಳಿಯ ಸ್ಥಳೀಯ ಮಂತ್ರವು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಇದನ್ನು ನೀವು ಇಂದು ನೋಡುತ್ತಿದ್ದೀರಿ. ವಾರಣಾಸಿಯ ಜನರಿಗೆ ಮತ್ತು ದೀಪಾವಳಿಗೆ ಸ್ಥಳೀಯವಾಗಿ ಉತ್ಪನ್ನಗಳನ್ನು ಉತ್ತೇಜಿಸುವ ದೊಡ್ಡ ಸಮಯ ಇದಾಗಿದೆ ಎಂದು ಎಲ್ಲ ದೇಶವಾಸಿಗಳಿಗೆ ನಾನು ಹೇಳಲು ಬಯಸುತ್ತೇನೆ ಎಂದರು.
ಪ್ರತಿಯೊಬ್ಬರೂ ಸ್ಥಳೀಯ ಉತ್ಪನ್ನಗಳನ್ನು ಹೆಮ್ಮೆಯಿಂದ ಖರೀದಿಸಿದಾಗ ಸ್ಥಳೀಯ ಉತ್ಪನ್ನಗಳ ಬಗ್ಗೆ ಮಾತನಾಡುತ್ತಾರೆ. ಅದು ನಮ್ಮ ಸ್ಥಳೀಯ ಉತ್ಪನ್ನಗಳು ತುಂಬಾ ಒಳ್ಳೆಯದು ಎಂಬ ಸಂದೇಶವನ್ನು ಇತರರಿಗೆ ಕೊಂಡೊಯ್ಯುತ್ತದೆ. ಈ ಸಂದೇಶವು ಬಹುದೂರ ಸಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯರನ್ನು ಬಲಪಡಿಸುವುದು ಮಾತ್ರವಲ್ಲ. ಈ ಸ್ಥಳೀಯ ಉತ್ಪನ್ನಗಳನ್ನು ತಯಾರಿಸುವ ಜನರು ಹಾಗೂ ದೀಪಾವಳಿ ಕೂಡ ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತದೆ. ಸ್ಥಳೀಯಕ್ಕೆ ಹೋಗುವುದು ಎಂದರೆ ಬರೀ 'ದಿಯಾ' (ಹಣತೆ) ಖರೀದಿಸುವುದು ಎಂದಲ್ಲ. ನೀವು ದೀಪಾವಳಿಯಲ್ಲಿ ಬಳಸುವ ಪ್ರತಿಯೊಂದೂ ಹಾಗೂ ಅವುಗಳನ್ನು ತಯಾರಿಸುವವರನ್ನು ನಿಮ್ಮ ಖರೀದಿ ಪ್ರೋತ್ಸಾಹಿಸುತ್ತದೆ ಎಂದು ಪ್ರಧಾನಿ ಹೇಳಿದರು.