ನವದೆಹಲಿ: ಭಾನುವಾರ, ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಿಸಿದ್ದ ತೈಲ ಕಂಪನಿಗಳು ಇಂದೂ ಕೂಡ ಗ್ರಾಹಕರಿಗೆ ಶಾಕ್ ನೀಡಿದೆ.
ಇಂದು ಲೀಟರ್ ಪೆಟ್ರೋಲ್ಗೆ 54 ಪೈಸೆ ಹಾಗೂ ಡೀಸೆಲ್ಗೆ 58 ಪೈಸೆ ಹೆಚ್ಚಳವಾಗಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಪರಿಣಾಮ, 82 ದಿನಗಳ ಲಾಕ್ಡೌನ್ ವಿರಾಮದ ಬಳಿಕ ಭಾನುವಾರದಿಂದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಏರಿಕೆ ಮಾಡುತ್ತಾ ಬಂದಿವೆ.
ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 71.86 ರೂ. ಮತ್ತು 69.99 ರೂ, ಸೋಮವಾರ 72.46 ರೂ ಮತ್ತು 70.59 ರೂ ಇತ್ತು. ಇಂದು ಪೆಟ್ರೋಲ್ ದರ 73 ರೂ.ಗೆ ಹಾಗೂ ಡೀಸೆಲ್ ದರ 71.17 ರೂಪಾಯಿಗೆ ಏರಿಕೆಯಾಗಿದೆ. ದೆಹಲಿಯೊಂದಿಗೆ ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ಗೂ ಇದು ಅನ್ವಯವಾಗಲಿದೆ.
ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ಗೆ ಇಂದು 75.35 ರೂ. ದರವಿದೆ. ಇನ್ನು ಲೀಟರ್ ಡೀಸೆಲ್ಗೆ 67.66 ರೂ. ನಿಗದಿಯಾಗಿದೆ.