ನವದೆಹಲಿ: ಕಳೆದ ಐದು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಇದ್ದು, ಇಂದೂ ಕೂಡ ಲೀಟರ್ ಮೇಲೆ 60 ಪೈಸೆ ಏರಿಕೆಯಾಗಿದೆ.
ಲಾಕ್ಡೌನ್ ವಿರಾಮದ ಬಳಿಕ ಕಳೆದ ಭಾನುವಾರದಿಂದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಏರಿಕೆ ಮಾಡುತ್ತಾ ಬಂದಿವೆ. ಇದೀಗ ಪ್ರತಿ ಲೀಟರ್ ಪೆಟ್ರೋಲ್ಗೆ ಒಟ್ಟು 2.74 ರೂ ಹಾಗೂ ಡೀಸೆಲ್ಗೆ 2.83 ರೂ. ಹೆಚ್ಚಳವಾದಂತಾಗಿದೆ.
ದೇಶದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ಗಳಲ್ಲಿ ಬೆಲೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 74 ರೂ ಮತ್ತು 72.22 ರೂ.ಇದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಲೀಟರ್ ಪೆಟ್ರೋಲ್ಗೆ 76.39 ರೂ ಹಾಗೂ ಡೀಸೆಲ್ಗೆ 68.09 ರೂಪಾಯಿ ನಿಗದಿಯಾಗಿದೆ.