ಮುಂಬೈ: ಕೋವಿಡ್ ಎರಡನೇ ಅಲೆಯಲ್ಲಿ ಸಿಲುಕಿ ದೇಶದ ಜನರು ಪರದಾಡುತ್ತಿರುವ ವೇಳೆಯಲ್ಲಿಯೂ ದಿನದಿಂದ ದಿನಕ್ಕೆ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಬೆಲೆಯನ್ನು ಹೆಚ್ಚಿಸುತ್ತಲೇ ಇವೆ. ಮೇ 4ರಿಂದ ಒಟ್ಟು 12 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದೆ.
ಇಂದು ಮತ್ತೆ ಇಂದು ಲೀಟರ್ ಪೆಟ್ರೋಲ್ಗೆ 23 ಪೈಸೆ ಹಾಗೂ ಡೀಸೆಲ್ಗೆ 25 ಪೈಸೆ ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 93.44 ರೂ. ಹಾಗೂ ಡೀಸೆಲ್ ಬೆಲೆ 84.32 ರೂ.ಗೆ ಏರಿಕೆಯಾಗಿದೆ. ಈ ಬೆಲೆ ಏರಿಕೆ ಬೆಳವಣಿಗೆಯು ದೇಶದ ಮೆಟ್ರೋ ನಗರಗಳಿಗೆ ಅನ್ವಯವಾಗಲಿದೆ.
ಈಗಾಗಲೇ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ರೇಟ್ ನೂರರ ಗಡಿ ತಲುಪುತ್ತಿದೆ. ಬೆಂಗಳೂರು, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿನ ಇಂದಿನ ಇಂಧನ ಬೆಲೆ ಈ ಕೆಳಕಂಡಂತಿದೆ.
ನಗರ | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 96.55 ರೂ. | 89.45 ರೂ. |
ದೆಹಲಿ | 93.44 ರೂ. | 84.32 ರೂ. |
ಕೋಲ್ಕತ್ತಾ | 93.49 ರೂ. | 87.16 ರೂ. |
ಮುಂಬೈ | 99.71 ರೂ. | 91.57 ರೂ. |
ಚೆನ್ನೈ | 95.06 ರೂ. | 89.11 ರೂ. |