ETV Bharat / business

ಸೌದಿ - ರಷ್ಯಾ ನಡುವಿನ ಕಚ್ಚಾತೈಲ ಸಮರ : ಪೆಟ್ರೋಲ್,​ ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ - ಪೆಟ್ರೋಲ್​ ಡಿಸೇಲ್​ ಬೆಲೆಯಲ್ಲಿ ಭಾರಿ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ. 20 ರಷ್ಟು ದರ ಕಡಿತವಾಗಲಿದೆ ಎಂಬ ಸ್ಫೋಟಕ ಮಾಹಿತಿ ಗೊತ್ತಾಗಿದೆ. ಮುಂದಿನ ತಿಂಗಳಿಂದ ತೈಲ ಉತ್ಪಾದನೆಯನ್ನ ಹೆಚ್ಚಿಸಲು ಉತ್ಪಾದನಾ ರಾಷ್ಟ್ರಗಳು ನಿರ್ಧಾರ ಕೈಗೊಂಡಿರುವುದರಿಂದ ಈ ಬೆಳವಣಿಗೆ ಆಗಿದೆ ಎಂದು ಹೇಳಲಾಗುತ್ತಿದೆ.

Petrol, diesel prices cut for fourth straight day
ಪೆಟ್ರೋಲ್,​ ಡಿಸೇಲ್​ ಬೆಲೆಯಲ್ಲಿ ಭಾರಿ ಇಳಿಕೆ
author img

By

Published : Mar 9, 2020, 8:41 AM IST

Updated : Mar 9, 2020, 3:09 PM IST

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ. 20 ರಷ್ಟು ದರ ಕಡಿತವಾಗಲಿದೆ ಎಂಬ ಸ್ಫೋಟಕ ಮಾಹಿತಿ ಗೊತ್ತಾಗಿದೆ. ಮುಂದಿನ ತಿಂಗಳಿಂದ ತೈಲ ಉತ್ಪಾದನೆಯನ್ನ ಹೆಚ್ಚಿಸಲು ಉತ್ಪಾದನಾ ರಾಷ್ಟ್ರಗಳು ನಿರ್ಧಾರ ಕೈಗೊಂಡಿರುವುದರಿಂದ ಈ ಬೆಳವಣಿಗೆ ಆಗಿದೆ ಎಂದು ಹೇಳಲಾಗುತ್ತಿದೆ.

ಸೌದಿ-ರಷ್ಯಾ ನಡುವಿನ ಕಚ್ಚಾತೈಲ ಸಮರ :

ವಿಶ್ವದ ಅತ್ಯಂತ ಬೃಹತ್ ಕಚ್ಚಾತೈಲ ಉತ್ಪಾದಕ ಹಾಗೂ ಮಾರಾಟ ರಾಷ್ಟ್ರ ಸೌದಿ ಅರೇಬಿಯಾ ಹಾಗೂ ವಿಶ್ವದ ಎರಡನೇ ಬೃಹತ್ ಕಚ್ಚಾತೈಲ ಉತ್ಪಾದಕ ರಾಷ್ಟ್ರ ರಷ್ಯಾ ನಡುವೆ ಕಚ್ಚಾತೈಲ ಬೆಲೆಯ ಪೈಪೋಟಿ ಶುರುವಾಗಿದೆ.

ರಷ್ಯಾದೊಂದಿಗೆ ಪೈಪೋಟಿಗೆ ಇಳಿದಿರುವ ಸೌದಿ ಅರೇಬಿಯಾ, ಬ್ಯಾರೆಲ್ ಕಚ್ಚಾತೈಲದ ಬೆಲೆಯಲ್ಲಿ 14.25 ಡಾಲರ್ ನಷ್ಟು ಕಡಿತ ಮಾಡಿದೆ. ಅಂದರೆ ಪ್ರಸಕ್ತ ಕಚ್ಚಾತೈಲದ ಪ್ಯೂಚರ್​​​ ಬೆಲೆಯಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ.

ಸೌದಿ-ರಷ್ಯಾ ನಡುವಿನ ಈ ಕಚ್ಚಾತೈಲ ಸಮರ ಭಾರತದ ಮೇಲೆ ಅಂತಹ ವ್ಯತಿರಿಕ್ತ ಪರಿಣಾಮ ಬೀರದು ಎಂದು ಅಂದಾಜಿಸಲಾಗಿದೆ. ಆದರೂ ಕಡಿಮೆ ಬೆಲೆಗೆ ಕಚ್ಚಾತೈಲ ಪಡೆಯುವ ಭಾರತ ಆಮದು ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸೌದಿ ಪಟ್ಟು ಹಿಡಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

1991 ರ ಬಳಿಕ ಕಂಡ ಭಾರಿ ಕುಸಿತ : ಬ್ರೆಂಟ್​ ಕ್ರೂಡ್​​ ಪ್ಯೂಚರ್​​ ಷೇರುಗಳು ಶೇ. 30 ರಷ್ಟು ಕುಸಿತ ಕಾಣುವ ಮೂಲಕ ಬ್ಯಾರಲ್​ವೊಂದಕ್ಕೆ 31.02 ಡಾಲರ್​ ಆಗಿದೆ. ಇದು 1991 ರ ಬಳಿಕ ಕಂಡ ಭಾರಿ ಕುಸಿತ ಎನ್ನಲಾಗಿದೆ. ಪ್ರಸ್ತುತ ಕಚ್ಚಾ ತೈಲ ಬೆಲೆ ಬ್ಯಾರಲ್​ವೊಂದಕ್ಕೆ 66 ಡಾಲರ್​ ಇದ್ದು, ಇದರಲ್ಲಿ ಸುಮಾರ ಶೇ. 10 ರಷ್ಟು ಕುಸಿತ ಕಂಡಿದೆ. ಈ ಪರಿಣಾಮ 9 ತಿಂಗಳ ಪೆಟ್ರೋಲ್​ - ಡೀಸೆಲ್​ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ.

ತೈಲ ದರ ಇಳಿಕೆ, ಭಾರತಕ್ಕೆ ವರ :

ಅಲ್ಲದೇ ಕಚ್ಚಾತೈಲ ಬೆಲೆ ಕಡಿಮೆಯಾಗುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಅಂತಹ ಭಾರೀ ವ್ಯತ್ಯಾಸವೇನೂ ಆಗುವುದಿಲ್ಲ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ವಾರ್ಷಿಕ 30 ಬಿಲಿಯನ್ ಡಾಲರ್​ ಉಳಿತಾಯ : ಉದಯ್ ಕೊಟಕ್

  • Amidst turbulence and the virus, some good news - oil at $45/ barrel. Recent $20 drop saves India $30 billion per annum. Also global interest rates have collapsed making money cheap.
    Let’s leverage these for policy to boost growth.

    — Uday Kotak (@udaykotak) March 8, 2020 " class="align-text-top noRightClick twitterSection" data=" ">

ಕೊಟಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಉದಯ್ ಕೊಟಕ್, ಪ್ರಕ್ಷುಬ್ಧತೆ ಮತ್ತು ವೈರಸ್ ಮಧ್ಯೆ, ಕೆಲವು ಒಳ್ಳೆಯ ಸುದ್ದಿಗಳಿವೆ. ತೈಲ ಬ್ಯಾರಲ್​ವೊಂದಕ್ಕೆ 45 ಡಾಲರ್​ ಆಗಿದೆ. ಇತ್ತೀಚಿನ 20 ಡಾಲರ್​ ಕುಸಿತ ಭಾರತಕ್ಕೆ ವಾರ್ಷಿಕ 30 ಬಿಲಿಯನ್ ಡಾಲರ್​ನ್ನು ಉಳಿಸುತ್ತದೆ. ಜಾಗತಿಕ ಬಡ್ಡಿದರಗಳು ಕುಸಿದಿವೆ. ಹಣ ಅಗ್ಗವಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಸತತ 5 ದಿನಗಳಿಂದ ಕಚ್ಚಾ ತೈಲ ಬೆಲೆ ಇಳಿಕೆ:

ಸತತ ಐದು ದಿನಗಳಿಂದ ಪೆಟ್ರೋಲ್ ಡೀಸೆಲ್​ ದರದಲ್ಲಿ ಇಳಿಕೆ ಕಂಡು ಬಂದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಇಂದೂ ಕೂಡಾ 23- 25 ಪೈಸೆ ಇಳಿಕೆ ಕಂಡು ಬಂದಿದೆ. ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​​ಗೆ 70.59 ರೂ. ಇದ್ದರೆ ಬೆಂಗಳೂರಿನಲ್ಲಿ 73.01, ಮುಂಬೈನಲ್ಲಿ 76.29, ಚೆನ್ನೈನಲ್ಲಿ 73.33, ಕೋಲ್ಕತ್ತಾದಲ್ಲಿ 73.28 ಪೈಸೆ ಇದೆ. ಡೀಸೆಲ್​ ದರ ದೆಹಲಿಯಲ್ಲಿ 63.26, ಕೋಲ್ಕತ್ತಾದಲ್ಲಿ 65.65 ರೂ ಹಾಗೂ ಮುಂಬೈನಲ್ಲಿ 66.24 ರೂ ಇದೆ.

Last Updated : Mar 9, 2020, 3:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.