ನವದೆಹಲಿ : 2020ರಲ್ಲಿ ಭಾರತೀಯರು ನಗದು ಬಳಸುವ ಪ್ರಮಾಣವು ಶೇ.50ರಷ್ಟು ಕಡಿಮೆಯಾಗಿದೆ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ನಗದು ಸ್ವೀಕೃತಿ ಇಲ್ಲದೆ ನಾಗರಿಕರ ಖರೀದಿ ಹವ್ಯಾಸ ಮತ್ತು ವಹಿವಾಟಿನ ಉದ್ದೇಶ ಅರ್ಥಮಾಡಿಕೊಳ್ಳಲು ಈ ಸಮೀಕ್ಷೆ ನಡೆಸಲಾಯಿತು. ಕಳೆದ 12 ತಿಂಗಳಲ್ಲಿನ ಸ್ವೀಕೃತಿ ಇಲ್ಲದೆ ನಗದು ವಹಿವಾಟು ನಡೆಸುವ ನಾಗರಿಕರ ಪ್ರವೃತ್ತಿ ಅರಿಯಲು 2019ರಲ್ಲಿ ಬಿಡುಗಡೆಯಾದ ಇದೇ ರೀತಿಯ ಸಮೀಕ್ಷೆಯೊಂದಿಗೆ ಈ ವರ್ಷದ ಸಂಶೋಧನೆ ಹೋಲಿಸಲಾಗಿದೆ.
14,738 ಪ್ರತಿಕ್ರಿಯೆಗಳನ್ನು ಸಮೀಕ್ಷೆಯಲ್ಲಿ ಸ್ವೀಕರಿಸಲಾಗಿದೆ. ಕಳೆದ 12 ತಿಂಗಳಲ್ಲಿ ನಿಯಮಿತವಾದ ನಿಮ್ಮ ಮಾಸಿಕ ಖರೀದಿಯಲ್ಲಿನ ಸರಾಸರಿ ಶೇಕಡಾವಾರು ಸ್ವೀಕೃತಿಗೆ ಎಷ್ಟು ಕೊಡುತ್ತಿರಾ? ಎಂದು ಕೇಳಲಾಯಿತು.
ಅದರಲ್ಲಿ ಶೇ.48ರಷ್ಟು ಜನರು 5-25 ಪ್ರತಿಶತ ಎಂದಿದ್ದಾರೆ. 34 ಪ್ರತಿಶತದಷ್ಟು ಜನರು 25-50 ಪ್ರತಿಶತದಷ್ಟು ಗ್ರೇಡ್ ನೀಡಿದ್ದಾರೆ. 14 ಪ್ರತಿಶತದಷ್ಟು ಜನರು ಶೇ.50-100ರಷ್ಟು ಎಂದಿದ್ದರೇ, ಉಳಿದ ನಾಲ್ಕುರಷ್ಟು ಸಂವಾದಿಗಳು ಉತ್ತರಿಸಲು ನಿರಾಕರಿಸಿದ್ದಾರೆ. 2019ರಲ್ಲಿ ಸಮೀಕ್ಷೆಗೆ ಒಳಗಾದವರಿಂದ ಪಡೆದ 50-100 ಪ್ರತಿಶತದಷ್ಟರ ವಿಭಾಗದಲ್ಲಿ ಶೇ.27ರಷ್ಟು ಪ್ರತಿಕ್ರಿಯೆಗಳಲ್ಲಿ ಅರ್ಧದಷ್ಟಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರಕಟವಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದ ಡೇಟಾ ಸಹ ಉಲ್ಲೇಖಿಸಲಾಗಿದೆ. ಆ ಸಮೀಕ್ಷೆಯ ವರದಿ, 2020ರ ಹಣಕಾಸು ವರ್ಷದಲ್ಲಿ ಭಾರತವು ಡಿಜಿಟಲ್ ಪಾವತಿಗಳ ಪ್ರಮಾಣವನ್ನು 3,434.56 ಕೋಟಿಗೆ ಭಾರಿ ಏರಿಕೆ ಕಂಡಿದೆ ಎಂದು ಹೇಳಿದೆ.
2015-16ರಿಂದ 2019-20ರ ನಡುವಿನ ಐದು ವರ್ಷಗಳಲ್ಲಿ ಡಿಜಿಟಲ್ ಪಾವತಿಗಳು ವಹಿವಾಟಿನ ಪರಿಮಾಣದ ಪ್ರಕಾರ ವಾರ್ಷಿಕ ಶೇ 55.1ರಷ್ಟು ಏರಿಕೆ ಆಗಿದ್ದರೇ ಮೌಲ್ಯದ ದೃಷ್ಟಿಯಲ್ಲಿ ಶೇ 15.2ರಷ್ಟಿದೆ.
2020ರ ಅಕ್ಟೋಬರ್‌ನಲ್ಲಿ ಮಾತ್ರ ಯುಪಿಐ ಆಧಾರಿತ ಪಾವತಿಗಳು 207 ಕೋಟಿ ವಹಿವಾಟುಗಳೊಂದಿಗೆ ಹೊಸ ಮೈಲಿಗಲ್ಲು ದಾಟಿದೆ. ಸಮೀಕ್ಷೆಯ ಎರಡನೇ ಪ್ರಶ್ನೆಯು ರಶೀದಿ ಇಲ್ಲದೆ ನಾಗರಿಕರು ಯಾವ ಉದ್ದೇಶಗಳಿಗಾಗಿ ನಗದು ವ್ಯವಹಾರ ನಡೆಸಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು.