ETV Bharat / business

ಸಣ್ಣ ಉದ್ಯಮಗಳಿಗೆ ಕೊರೊನಾ ಹೊಡೆತ: ಸೋಂಕಿಗೆ ಶೇ 80ರಷ್ಟು ವ್ಯವಹಾರಗಳು ತತ್ತರ!

ಕಳೆದ ವರ್ಷದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಾರತವು ಜಾಗತಿಕವಾಗಿ ಹೆಚ್ಚು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಕರಣಗಳ ಏರಿಕೆಯೊಂದಿಗೆ ದೇಶಾದ್ಯಂತ ಮತ್ತೆ ಲಾಕ್‌ಡೌನ್‌ಗಳ ಆತಂಕ ಆರ್ಥಿಕ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ. ಏಕೆಂದರೆ ಆದಾಯದ ಉತ್ಪಾದನೆಯ ಕುಸಿತದ ಜೊತೆಗೆ ಬೇಡಿಕೆ ಕಣ್ಮರೆಯಾಗುತ್ತದೆ.

small businesses
small businesses
author img

By

Published : Apr 22, 2021, 7:45 PM IST

ಮುಂಬೈ: ಕೋವಿಡ್​-19 ಸಾಂಕ್ರಾಮಿಕ ಸಮಯದಲ್ಲಿ ದೇಶದ ಬಹುತೇಕ ಸಣ್ಣ ಉದ್ಯಮಗಳ ವ್ಯತಿರಿಕ್ತ ಪರಿಣಾಮ ಎದುರಿಸಿದ್ದು, ಉತ್ಪಾದನಾ ವಲಯದ ಉದ್ಯಮಗಳು ತುಸು ಹೆಚ್ಚಿನ ತೊಂದರೆಗೆ ಒಳಗಾಗಿವೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಡೇಟಾ ಸಂಸ್ಥೆ ಡನ್ & ಬ್ರಾಡ್‌ಸ್ಟ್ರೀಟ್ ನಡೆಸಿದ ಸಮೀಕ್ಷೆಯಲ್ಲಿ ಸಾಂಕ್ರಾಮಿಕ ವರ್ಷದಲ್ಲಿ ಶೇ 82ರಷ್ಟು ವ್ಯವಹಾರಗಳು ನಕಾರಾತ್ಮಕ ಪರಿಣಾಮ ಬೀರಿವೆ ಎಂದು ತೋರಿಸಿದೆ.

250ಕ್ಕೂ ಹೆಚ್ಚು ಕಂಪನಿಗಳ ನಡುವೆ ಈ ಸಮೀಕ್ಷೆ ನಡೆಸಲಾಯಿತು. ಉತ್ಪಾದನಾ ಮತ್ತು ಸೇವಾ ಕೈಗಾರಿಕೆಗಳ ನಡುವೆ ಸಮನಾಗಿ ವಿಭಜನೆಯಾಗಿದ್ದು, ವಾರ್ಷಿಕ ವಹಿವಾಟು 100-250 ಕೋಟಿ ರೂ. ಹೊಂದಿವೆ.

ಸಮೀಕ್ಷೆ ನಡೆಸಿದ ಪೈಕಿ ಮೂರನೇ ಎರಡರಷ್ಟು ಅಥವಾ ಶೇ 70ರಷ್ಟು ಜನರು ಕೋವಿಡ್​-19ಗೂ ಮುನ್ನದ ಬೇಡಿಕೆಯ ಮಟ್ಟ ಚೇತರಿಸಿಕೊಳ್ಳಲು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಕೋವಿಡ್ ಕೋಲಾಹಲ : ಕಾದು ನೋಡುವ ತಂತ್ರದ ಮೊರೆ ಹೋಗುವಂತೆ ಹಣಕಾಸು ಸಚಿವರ ಕರೆ

ಕಳೆದ ವರ್ಷದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಾರತವು ಜಾಗತಿಕವಾಗಿ ಹೆಚ್ಚು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಕರಣಗಳ ಏರಿಕೆಯೊಂದಿಗೆ ದೇಶಾದ್ಯಂತ ಮತ್ತೆ ಲಾಕ್‌ಡೌನ್‌ಗಳ ಆತಂಕ ಆರ್ಥಿಕ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ. ಏಕೆಂದರೆ ಆದಾಯದ ಉತ್ಪಾದನೆಯ ಕುಸಿತದ ಜೊತೆಗೆ ಬೇಡಿಕೆ ಕಣ್ಮರೆಯಾಗುತ್ತದೆ.

ಸಮೀಕ್ಷೆಯ ಸುಮಾರು 60 ಪ್ರತಿಶತದಷ್ಟು ಕಂಪನಿಗಳು ಸರ್ಕಾರದ ಉತ್ತೇಜನ ಸೇರಿದಂತೆ ಹೆಚ್ಚಿನ ಕ್ರಮಗಳು ಮತ್ತು ಬೆಂಬಲವನ್ನು ನಿರೀಕ್ಷಿಸುತ್ತಿವೆ. ಸಣ್ಣ ಉದ್ಯಮಗಳು ತಮ್ಮ ವ್ಯವಹಾರಗಳನ್ನು ಹೆಚ್ಚಿಸಲು ಅಡ್ಡಿಯಾಗಬಹುದಾದ ಮೊದಲ ಮೂರು ಸವಾಲುಗಳಲ್ಲಿ ಮಾರುಕಟ್ಟೆ ಪ್ರವೇಶ ಶೇ 42ರಷ್ಟು, ಒಟ್ಟಾರೆ ಉತ್ಪಾದಕತೆ ಸುಧಾರಣೆ ಶೇ 37ರಷ್ಟು ಮತ್ತು ಹೆಚ್ಚಿನ ಹಣಕಾಸು ಪ್ರವೇಶ ಶೇ 34ರಷ್ಟಿದೆ.

2020ರ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಲಾಕ್‌ಡೌನ್ ಹೇರಿದಾಗ ಸುಮಾರು 95 ಪ್ರತಿಶತದಷ್ಟು ಸಂಸ್ಥೆಗಳು ಪ್ರಭಾವ ಬೀರಿವೆ. ಅನ್​ಲಾಕ್ ಮಾಡುವುದರೊಂದಿಗೆ ಆಗಸ್ಟ್ ವೇಳೆಗೆ 70 ಪ್ರತಿಶತದಷ್ಟು ಅಡ್ಡಿಯಾಗಿದೆ. ಫೆಬ್ರವರಿ 2021ರ ಅಂತ್ಯದ ವೇಳೆಗೆ ಅದು 40 ಪ್ರತಿಶತಕ್ಕೆ ಇಳಿದಿದೆ.

ಕಳೆದ ಎರಡು ದಶಕಗಳಲ್ಲಿ ಸಣ್ಣ ಉದ್ಯಮಗಳೊಂದಿಗಿನ ತನ್ನ ಸಂವಹನಗಳನ್ನು ಉಲ್ಲೇಖಿಸಿ, ಮಾರುಕಟ್ಟೆಗಳಿಗೆ ಪ್ರವೇಶ ಮತ್ತು ಉತ್ತಮ ಸಾಲ ಸೌಲಭ್ಯವು ಅವುಗಳ ಕಾರ್ಯಾಚರಣೆ ಹೆಚ್ಚಿಸುವಲ್ಲಿ ಪ್ರಮುಖ ಸವಾಲುಗಳಾಗಿವೆ ಎಂದು ಕಂಪನಿಗಳು ಹೇಳಿಕೊಂಡಿವೆ.

ಭಾರತದ ವಾಣಿಜ್ಯ ಉದ್ಯಮಗಳ ಚೇತರಿಕೆಯ ದರ ಮತ್ತು ಆ ಮೂಲಕ ಆರ್ಥಿಕತೆಯನ್ನು ಸಣ್ಣ ವ್ಯವಹಾರಗಳ ಚೇತರಿಕೆಯ ಬಲದಿಂದ ನಿರ್ಧರಿಸಲಾಗುತ್ತದೆ ಎಂದು ಡೇಟಾ ಸಂಸ್ಥೆಯ ಜಾಗತಿಕ ಮುಖ್ಯ ಅರ್ಥಶಾಸ್ತ್ರಜ್ಞ ಅರುಣ್ ಸಿಂಗ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.