ETV Bharat / business

ಸಮುದ್ರದಲ್ಲಿ 2 ಹಡಗುಗಳಿಗೆ ಬಿತ್ತು ಬೆಂಕಿ: ಡೀಸೆಲ್​, ಪೆಟ್ರೋಲ್​ ಮಾರುಕಟ್ಟೆ ತಲ್ಲಣ..!

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಎರಡು ಹಡಗುಗಳಿಗೆ ಬೆಂಕಿ ಹೊತ್ತುಕೊಂಡ ಘಟನೆ ಜರುಗಿದೆ. ಆಯಕಟ್ಟಿನ ಈ ಸಮುದ್ರದಲ್ಲಿ ಈ ರೀತಿಯ ದಾಳಿ ನಡೆಯುತ್ತಿರುವುದು ವಾರಗಳ ಅವಧಿಯಲ್ಲಿ ಇದು ಎರಡನೇ ಬಾರಿಯಾಗಿದೆ.

author img

By

Published : Jun 14, 2019, 11:53 AM IST

ಹೊತ್ತಿ ಉರಿಯುತ್ತಿರುವ ತೈಲ ಹಡಗು

ಮುಂಬೈ: ಒಮನ್​ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್​ಗಳ ಮೇಲೆ ನಡೆದ ದಾಳಿಯಿಂದ ಬೆಂಕಿ ಹತ್ತಿಕೊಂಡಿದ್ದು, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಈ ಘಟನೆ ಜರುಗಿದೆ. ಆಯಕಟ್ಟಿನ ಈ ಸಮುದ್ರದಲ್ಲಿ ಈ ರೀತಿಯ ದಾಳಿ ನಡೆಯುತ್ತಿರುವುದು ವಾರಗಳ ಅವಧಿಯಲ್ಲಿ ಇದು ಎರಡನೇ ಬಾರಿಯಾಗಿದೆ.

ತನ್ನ ಕರಾವಳಿ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದ ಬಳಿಕ ಎರಡು ಹಡಗುಗಳಿಂದ 44 ಸಿಬ್ಬಂದಿಯನ್ನು ತನ್ನ ನೌಕಾಪಡೆ ರಕ್ಷಿಸಿದೆ ಎಂದು ಇರಾನ್ ತಿಳಿಸಿದೆ.

ಜಾಗತಿಕ ತೈಲ ಪೇಟೆಯ ಬ್ರೆಂಟ್​ ಕಚ್ಚಾ ಇಂಧನದಲ್ಲಿ ಶೇ 4ರಷ್ಟು ಏರಿಕೆಯಾಗಿದೆ. ಗುರುವಾರದ ಸಂಜೆ 5.28ರ ವೇಳೆಗೆ ಪ್ರತಿ ಬ್ಯಾರೆಲ್​ 62.30 ಡಾಲರ್​ನಲ್ಲಿ ಮಾರಾಟವಾಗಿತ್ತು.

ಫಾರೆಕ್ಸ್ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸಹ ಕುಸಿತಕ್ಕೆ ಒಳಗಾಯಿತು. ಬುಧವಾರದ ಪೇಟೆಯಲ್ಲಿ ₹ 69.35ರಲ್ಲಿ ವಹಿವಾಟು ನಿರತವಾಗಿದ್ದ ರೂಪಾಯಿ. ನಿನ್ನೆ 16 ಪೈಸೆಯಷ್ಟು ಕ್ಷೀಣಿಸಿ ₹ 69.51 ವಹಿವಾಟು ನಿರತವಾಗಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.