ETV Bharat / business

ಅನಿವಾಸಿ ಭಾರತೀಯರು ಅಪರೋಕ್ಷ ವ್ಯವಹಾರ ನಡೆಸಿದರೂ ಕಟ್ಟಬೇಕಾಗುತ್ತೆ ತೆರಿಗೆ

ಅನಿವಾಸಿ ಭಾರತೀಯರು, ದೇಶದಲ್ಲಿ ಅವರು ಇರದೇ ಇದ್ದರೂ ಅವರು ಡಿಜಿಟಲ್​ ವ್ಯವಹಾರ ನಿರ್ವಹಿಸುತ್ತಿದ್ದರೆ, ಭಾರತದ ಕಾನೂನಿನಡಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿಯು ತಿಳಿಸಿದೆ.

non-residents-will-be-taxed-if-transaction-value-exceeds-rs-2-cr
ಅನಿವಾಸಿ ಭಾರತೀಯರು ಅಪರೋಕ್ಷ ವ್ಯವಹಾರ ನಡೆಸಿದರೂ ಕಟ್ಟಬೇಕಾಗುತ್ತೆ ತೆರಿಗೆ
author img

By

Published : May 6, 2021, 5:38 PM IST

ನವದೆಹಲಿ: ಭಾರತೀಯ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸುವ ಅನಿವಾಸಿ ಭಾರತೀಯರು, ದೇಶದಲ್ಲಿ ಅವರು ಇರದೇ ಇದ್ದರೂ ಡಿಜಿಟಲ್​ ವ್ಯವಹಾರ ನಿರ್ವಹಿಸುತ್ತಿದ್ದರೆ, ಭಾರತದ ಕಾನೂನಿನಡಿ ತೆರಿಗೆಯನ್ನ ಪಾವತಿಸಬೇಕಾಗುತ್ತದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿಯು ಅನಿವಾಸಿ ಭಾರತೀಯರ ವ್ಯವಹಾರದ ಮೇಲೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮದ ಅಡಿ, ಯಾವುದೇ ಸರಕು, ಸೇವೆಗಳು ಅಥವಾ ಆಸ್ತಿಗೆ ಸಂಬಂಧಿಸಿದಂತೆ 2 ಕೋಟಿ ರೂ. (ಗರಿಷ್ಠ $ 27,100) ವಹಿವಾಟು ನಡೆಸಿದರೆ ಅದರ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವ್ಯವಸ್ಥಿತ ಮತ್ತು ನಿರಂತರ ವ್ಯವಹಾರ ಮಾಡುವ ಅನಿವಾಸಿಗಳು ವಾರ್ಷಿಕ 3 ಲಕ್ಷ ರೂ ಗಿಂತ ಹೆಚ್ಚಿನ ವ್ಯವಹಾರ ನಡೆಸಿದರೆ, ಅದಕ್ಕೆ ತೆರಿಗೆಯನ್ನ ಕಟ್ಟಬೇಕಾಗುತ್ತದೆ.

ಭೌತಿಕ ಉಪಸ್ಥಿತಿ ಇಲ್ಲದೇ ಕಾರ್ಯನಿರ್ವಹಿಸುವ ಡಿಜಿಟೈಸ್ಡ್ ವ್ಯವಹಾರಗಳನ್ನು ನಿರ್ವಹಿಸುವ ಅನಿವಾಸಿಗಳಿಗೆ ತೆರಿಗೆ ವಿಧಿಸುವ ಉದ್ದೇಶದಿಂದ 2018 ರಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದ್ದು, ಹೊಸ ನಿಬಂಧನೆಗಳನ್ನ ಪರಿಚಯಿಸಲಾಗಿದೆ. 2020ರ ಹಣಕಾಸು ಕಾಯ್ದೆ ಮತ್ತಷ್ಟು ತಿದ್ದುಪಡಿ ಮಾಡಲಾಗಿದ್ದು, ಈ ನಿಬಂಧನೆಗಳನ್ನು ಅಳವಡಿಸಲಾಗಿದೆ. ಭಾರತದಲ್ಲಿ ಯಾವುದೇ ವ್ಯಕ್ತಿಯೊಂದಿಗೆ ಅನಿವಾಸಿ ಭಾರತೀಯರು ನಡೆಸುವ ಸರಕು, ಸೇವೆಗಳು ಅಥವಾ ಆಸ್ತಿಗೆ ಸಂಬಂಧಿಸಿದ ವ್ಯವಹಾರವನ್ನು ಎಸ್​​ಇಪಿ( ಗಮನಾರ್ಹ ಆರ್ಥಿಕ ವ್ಯವಹಾರ) ಎಂದು ವ್ಯಾಖ್ಯಾನಿಸಲಾಗಿದೆ. ಹೊಸ ನಿಬಂಧನೆಗಳು 2021-22ರ ಹಣಕಾಸು ವರ್ಷದಿಂದ ಅನ್ವಯವಾಗುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.