ಮುಂಬೈ : ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸುಮಾರು 13 ಸಾವಿರ ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಆಸ್ತಿ ಹರಾಜಾಗಲಿದೆ. ಮುಂಬೈ ನಗರದ ಹಲವೆಡೆ ಇರುವ ಸುಮಾರು ಒಂದು ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಹರಾಜು ಹಾಕಲಾಗುತ್ತದೆ.
ಈ ಹಿಂದೆಯೂ ಜಾರಿ ನಿರ್ದೇಶನಾಲಯ ಇದೇ ರೀತಿಯ ಹರಾಜು ನಡೆಸಿತ್ತು. ಈ ಹರಾಜಿನಲ್ಲಿ ನೀರವ್ ಮೋದಿ ಒಡೆತನದ ಕಾರುಗಳು, ಪೇಂಟಿಂಗ್‌ಗಳು ಮತ್ತು ಇತರ ದುಬಾರಿ ವಸ್ತುಗಳನ್ನು ಹರಾಜು ಹಾಕಿಲಾಗಿತ್ತು. ಹರಾಜಿನಿಂದ ಬಂದ 6 ಕೋಟಿ ರೂಪಾಯಿ ಹಣವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಹಸ್ತಾಂತರಿಸಲಾಗಿತ್ತು.
ಈಗ ಮುಂಬೈನಲ್ಲಿ ಉಳಿದಿರುವ ಕೆಲವು ಆಸ್ತಿಗಳನ್ನು ಹರಾಜು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿರುವ ಕಲಾ ಘೋಡಾದಲ್ಲಿರುವ ರಿದಮ್ ಹೌಸ್ ಮ್ಯೂಸಿಕ್ ಸ್ಟೋರ್ ಕಟ್ಟಡ, ನೆಪಾನ್ಸಿ ರೋಡ್ ಫ್ಲಾಟ್, ಕುರ್ಲಾದಲ್ಲಿನ ಕಚೇರಿ ಕಟ್ಟಡ ಮತ್ತು ಹಲವು ಆಭರಣಗಳು ಸೇರಿವೆ.
ಈ ಮೊದಲು ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಬಾಕಿ ವಸೂಲಿಗಾಗಿ ನೀರವ್ ಮೋದಿ ಅವರ ಆಸ್ತಿಯನ್ನು ಹರಾಜು ಹಾಕುವಂತೆ ಕೋರ್ಟ್ ಆದೇಶ ನೀಡಿತ್ತು. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಆಸ್ತಿಗಳನ್ನು ಹರಾಜು ಮಾಡಲು ಲಿಕ್ವಿಡೇಟರ್ ಅನ್ನು ನೇಮಕ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚಿಸಿದ ಹಣದಲ್ಲಿ ವರ್ಲಿಯಲ್ಲಿರುವ ಸಮುದ್ರ ಮಹಲ್ ಕಟ್ಟಡ, ಅಲಿಬಾಗ್‌ನಲ್ಲಿರುವ ಬಂಗಲೆ ಮತ್ತು ಜೈಸಲ್ಮೇರ್‌ನಲ್ಲಿ ವಿಂಡ್‌ಮಿಲ್‌ನಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಾಲ್ಕು ಭವ್ಯವಾದ ಫ್ಲಾಟ್‌ಗಳನ್ನು ನೀರವ್ ಮೋದಿ ಖರೀದಿ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ರೈತನೇ ಕಿಂಗ್ ಮೇಕರ್, ಚುನಾವಣೆಯಲ್ಲಿ ಸ್ಪರ್ಧಿಸುವ ಅವಶ್ಯಕತೆ ಇಲ್ಲ: ರಾಕೇಶ್ ಟಿಕಾಯತ್