ETV Bharat / business

ವಂಚಕ ನೀರವ್​ ಮೋದಿಗೆ ಸೇರಿದ್ದ ಕಲಾಕೃತಿಗಳು ದಾಖಲೆ ಮೊತ್ತಕ್ಕೆ ಮಾರಾಟ - undefined

ಕಳೆದ ವಾರವಷ್ಟೇ ಮುಂಬೈನ ವಿಶೇಷ ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ನೀರವ್ ಮೋದಿ ವಶದಲ್ಲಿದ್ದ ವಿಶೇಷ ವರ್ಣಚಿತ್ರಗಳ ಹರಾಜನ್ನು ಕೈಗೊಳ್ಳಲು ಅವಕಾಶ ನೀಡಿತು. ಕೆಲವು ದಿನಗಳ ಹಿಂದಷ್ಟೆ 12 ಬ್ರಾಂಡೆಡ್​ ಕಾರ್​ಗಳನ್ನು ಸಹ ಹರಾಜಿನಲ್ಲಿ ಮಾರಾಟ ಮಾಡಲಾಗಿತ್ತು.

ನೀರವ್ ಮೋದಿ
author img

By

Published : Mar 27, 2019, 10:09 AM IST

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ಸುಮಾರು 14 ಸಾವಿರ ಕೋಟಿ ರೂ. ಸಾಲ ಪಡೆದು ವಂಚಿಸಿ ಪಲಾಯನಗೈದ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ್ದ ಅಮೂಲ್ಯ ಕಲಾಕೃತಿಗಳನ್ನು ಆದಾಯ ತೆರಿಗೆ ಇಲಾಖೆ ಹರಾಜಿನಲ್ಲಿ ಮಾರಾಟ ಮಾಡಿದೆ.

ಕೋರ್ಟ್​ನ ಆದೇಶದ ಮೇರೆಗೆ ಸರ್ಕಾರಿ ತನಿಖಾ ಸಂಸ್ಥೆಗಳು ನೀರವ್​ಗೆ ಸೇರಿದ್ದ ಕಲಾಕೃತಿಗಳನ್ನು ಜಪ್ತಿ ಮಾಡಿದ್ದು, ಮುಂಬೈನಲ್ಲಿ ಅದನ್ನು ಹರಾಜಿಗೆ ಇಡಲಾಗಿತ್ತು. ಆದಾಯ ತೆರಿಗೆ ಇಲಾಖೆಯು ತೆರಿಗೆ ಪುನರ್ ಪಾವತಿ ಅಧಿಕಾರಿಯ ಪರವಾಗಿ 68 ವರ್ಣಚಿತ್ರಗಳನ್ನು ಹರಾಜು ಹಾಕಿ ₹ 59.37 ಕೋಟಿ ಪಡೆದಿದೆ.

ಪಿಎನ್​ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ನೀರವ್​, ಜಾರಿ ನಿರ್ದೇಶನಾಲಯ ಅವರಿಂದ ವಶಕ್ಕೆ ಪಡೆದು, ಈ ವರ್ಣಚಿತ್ರಗಳನ್ನು ಹರಾಜು ಮಾಡಲು ಇಲಾಖೆಯು ನ್ಯಾಯಾಲಯದ ಅನುಮತಿ ಕೇಳಿದ್ದು ಅನುಮತಿ ಸಿಕ್ಕ ಬಳಿಕ ಈ ಹರಾಜು ನಡೆದಿದೆ.

ನೀರವ್ ಮೋದಿಯನ್ನು ಲಂಡನ್​ನಲ್ಲಿ ಕಳೆದ ವಾರವಷ್ಟೇ ಬಂಧಿಸಿದ್ದು, ಅವರ ಜಾಮೀನು ಅರ್ಜಿ ಸಹ ತಿರಸ್ಕೃತಗೊಂಡಿದೆ. ಮುಂದಿನ ವಿಚಾರಣೆಯು ಮಾರ್ಚ್ 29ಕ್ಕೆ ನಿಗದಿಯಾಗಿದ್ದು, ಲಂಡನ್ ಕಾರಾಗೃಹದಲ್ಲಿ ಸಾಮಾನ್ಯ ಖೈದಿಗಳ ಜೊತೆಗೆ ನೀರವ್‌ ಮೋದಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.