ETV Bharat / business

ಉದಯಂ ಯೋಜನೆಯಡಿ 11 ಲಕ್ಷ MSM ಉದ್ಯಮಗಳು ನೋಂದಣಿ: 1 ಕೋಟಿ ಜನರಿಗೆ ಉದ್ಯೋಗ! - ಉದಯಂ ಯೋಜನೆಯಡಿ ಹೊಸ ಎಂಎಸ್​ಎಂ ನೋದಣಿ

ಸುಮಾರು 11,188 ಉದ್ಯಮಗಳು ದಿವ್ಯಾಂಗ ಉದ್ಯಮಿಗಳ ಒಡೆತನದಲ್ಲಿದೆ. ಆಹಾರ ಉತ್ಪನ್ನ, ಜವಳಿ, ಉಡುಪು, ಫ್ಯಾಬ್ರಿಕೇಟೆಡ್ ಮೆಟಲ್ ಉತ್ಪನ್ನ ಮತ್ತು ಯಂತ್ರೋಪಕರಣ ಹಾಗೂ ಉಪಕರಣಗಳು ಅಗ್ರ ಪಾಲು ಹೊಂದಿವೆ. ಈ ನೋಂದಾಯಿತ ಘಟಕಗಳಿಂದ 1,01,03,512 ಜನರಿಗೆ ಉದ್ಯೋಗ ನೀಡಲಾಗಿದೆ. ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಗುಜರಾತ್ ಮುಂಚೂಣಿಯಲ್ಲಿವೆ.

MSME
ಎಂಎಸ್‌ಎಂಇ
author img

By

Published : Nov 7, 2020, 3:55 PM IST

ನವದೆಹಲಿ: ಜುಲೈ 1ರಿಂದ 'ಉದಯಂ ನೋಂದಣಿ' ಹೆಸರಿನಲ್ಲಿ ಜಾರಿಗೆ ಬಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ನೋಂದಣಿಯ ಹೊಸ ಪ್ರಕ್ರಿಯೆಯಡಿ 11 ಲಕ್ಷಕ್ಕೂ ಅಧಿಕ ಉದ್ಯಮಗಳು ನೋಂದಾಯಿಸಿಕೊಂಡಿವೆ.

ಜುಲೈನಲ್ಲಿ ಆರಂಭಿಸಲಾದ ಹೊಸ ಪ್ರಕ್ರಿಯೆಯಡಿ ಎಂಎಸ್‌ಎಂಇಗಳಿಗೆ ಆನ್‌ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಿತು. ಕೋವಿಡ್ -19 ಪರಿಹಾರ ಪ್ಯಾಕೇಜ್‌ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇ ತಿಂಗಳಲ್ಲಿ ಘೋಷಿಸಿದ ಎಂಎಸ್‌ಎಂಇಗಳ ಪರಿಷ್ಕೃತ ವ್ಯಾಖ್ಯಾನ ಸಹ ಇದಕ್ಕೆ ಅನ್ವಯವಾಗುತ್ತದೆ.

ಎಂಎಸ್ಎಂಇ ಸಚಿವಾಲಯವು ಎಂಎಸ್ಎಂಇ / ಉದಯಂ ನೋಂದಣಿಗೆ ನೂತನ ಪೋರ್ಟಲ್ ಪ್ರಾರಂಭಿಸಿದೆ. ಇದನ್ನು ಸಿಬಿಡಿಟಿ, ಜಿಎಸ್​​ಟಿ ನೆಟ್ವರ್ಕ್​ ಮತ್ತು ಜಿಎಂ ಜತೆಗೆ ಸಂಯೋಜಿಸಲಾಗಿದೆ. ಈ ಮೂಲಕ ಎಂಎಸ್‌ಎಂಇ ನೋಂದಣಿಯನ್ನು ಸಂಪೂರ್ಣವಾಗಿ ಕಾಗದರಹಿತವಾಗಿ ಮಾಡಿದೆ.

ಉದಯಂ ನೋಂದಣಿಗೆ ಉದ್ಯಮಿಗಳಿಗೆ ಸಂಪೂರ್ಣ ಬೆಂಬಲ ನೀಡುವಂತೆ ಸರ್ಕಾರ ತನ್ನ ಎಲ್ಲ ಕ್ಷೇತ್ರಗಳ ಅಂಗ ಸಂಸ್ಥೆಗಳಿಗೆ ಕೋರಿದೆ. ನೋಂದಣಿ ಕುಂದುಕೊರತೆಗಳನ್ನು ಕೇಂದ್ರ ನಿಯಂತ್ರಣ ಕೊಠಡಿ ಮತ್ತು ದೇಶಾದ್ಯಂತ 68 ನಿಯಂತ್ರಣ ಕೊಠಡಿಗಳ ಮೂಲಕ ನಿರ್ವಹಿಸುತ್ತಿದೆ.

2020ರ ಅಕ್ಟೋಬರ್ 31ರವರೆಗೆ (10 ಲಕ್ಷಕ್ಕೂ ಅಧಿಕ) ದಾಖಲಾತಿಗಳನ್ನು ವಿಶ್ಲೇಷಿಸಲಾಗಿದೆ. ಉತ್ಪಾದನಾ ವಿಭಾಗದಲ್ಲಿ 3.72 ಲಕ್ಷ ಹಾಗೂ ಸೇವಾ ವಲಯದ ಅಡಿ 6.31 ಲಕ್ಷ ಉದ್ಯಮಗಳು ನೋಂದಣಿಯಾಗಿವೆ. ಮೈಕ್ರೋ ಎಂಟರ್‌ಪ್ರೈಸಸ್‌ನ ಪಾಲು ಶೇ 93.17ರಷ್ಟಿದ್ದರೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಕ್ರಮವಾಗಿ ಶೇ 5.62 ಮತ್ತು ಶೇ 1.21ರಷ್ಟಿವೆ. 7.98 ಲಕ್ಷ ಉದ್ಯಮಗಳು ಪುರುಷರ ಒಡೆತನದಲ್ಲಿದ್ದರೆ, 1.73 ಲಕ್ಷ ಉದ್ಯಮಗಳು ಮಹಿಳಾ ಉದ್ಯಮಿಗಳು ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.