ನವದೆಹಲಿ : ಮಹಾರಾಷ್ಟ್ರದ ಎಂಎಸ್‌ಎಂಇ ಘಟಕಗಳು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ಇಸಿಎಲ್‌ಜಿಎಸ್) ಅಡಿಯಲ್ಲಿ ಗರಿಷ್ಠ ಸಾಲ ಪಡೆದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಎಂಎಸ್‌ಎಂಇಗಳ ರಾಜ್ಯ ಸಚಿವ ಪ್ರತಾಪ್ ಚಂದ್ರ ಸಾರಂಗಿ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 16ರವರೆಗೆ ಮಹಾರಾಷ್ಟ್ರದ ಎಂಎಸ್‌ಎಂಇ ಘಟಕಗಳಿಗೆ 14,364.30 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಈ ನಂತರ ತಮಿಳುನಾಡು (12,445.58 ಕೋಟಿ ರೂ.), ಗುಜರಾತ್ (12,005.92 ಕೋಟಿ ರೂ.) ಮತ್ತು ಉತ್ತರಪ್ರದೇಶ (8,907.38 ಕೋಟಿ ರೂ.) ಅತ್ಯಧಿಕ ಸಾಲ ಪಡೆದಿವೆ ಎಂದರು.
ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಆತ್ಮನಿರ್ಭರ ಭಾರತ ಪ್ಯಾಕೇಜ್‌ನ ಅತಿದೊಡ್ಡ ಹಣಕಾಸಿನ ನೆರವಾಗಿದೆ. ಸೆಪ್ಟೆಂಬರ್ 9ರ ವೇಳೆಗೆ 42,01,060 ಸಾಲಗಾರರಿಗೆ 1,63,103 ಕೋಟಿ ರೂ. ಮಂಜೂರು ಮಾಡಲಾಗಿದೆ. ಯೋಜನೆಯಡಿ 25,01,216 ಸಾಲಗಾರರಿಗೆ 1,17,885 ಕೋಟಿ ರೂ. ಒದಗಿಸಲಾಗಿದೆ.