ETV Bharat / business

ಕೇಂದ್ರದ ಆದೇಶಕ್ಕೆ ಸ್ಪಷ್ಟತೆ ಕೇಳಿದ  ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ - ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ

'ಮಾರುಕಟ್ಟೆ ಸಂಕೀರ್ಣಗಳು' ಎಂಬಂಥ ಪದಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲಾಗದ ಕಾರಣ ಸ್ಪಷ್ಟತೆಯ ಅಗತ್ಯವಿದೆ ಎಂದು ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ ಹೇಳಿದೆ.

More clarity needed on reopening of shops
ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ
author img

By

Published : Apr 25, 2020, 6:27 PM IST

ನವದೆಹಲಿ: ನೆರೆಹೊರೆಯ ಮತ್ತು ಸ್ವತಂತ್ರ ಅಂಗಡಿಗಳು ತೆರೆಯಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ ಆದೇಶದ ಸುಲಭ ಅನುಷ್ಠಾನಕ್ಕೆ ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ ಎಂದು ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ (ಆರ್‌ಎಐ) ಹೇಳಿದೆ.

'ಮಾರುಕಟ್ಟೆ ಸಂಕೀರ್ಣಗಳು' ಎಂಬಂತ ಪದಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲಾಗದ ಕಾರಣ ಸ್ಪಷ್ಟತೆಯ ಅಗತ್ಯವಿದೆ ಎಂದಿದೆ. ಸಾಮಾಜಿಕ ಅಂತರದ ಮಾನದಂಡಗಳೊಂದಿಗೆ ಸುರಕ್ಷಿತ ಎಂದು ಭಾವಿಸುವ ದಿನಾಂಕದಂದು ಚಿಲ್ಲರೆ ಉದ್ಯಮದ ಪ್ರಾರಂಭಕ್ಕೆ ಸ್ಪಷ್ಟ ವ್ಯಾಖ್ಯಾನದೊಂದಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದಿದೆ.

  • Our official statement in response to Ministry of Home Affairs' latest order permitting shops providing non-essential goods and services to open from Saturday, 25th of April. #RetailMatters pic.twitter.com/ExSG6GD4M3

    — Retailers Association of India (RAI) (@rai_india) April 25, 2020 " class="align-text-top noRightClick twitterSection" data=" ">

ಮುನ್ಸಿಪಲ್ ಪ್ರದೇಶಗಳಲ್ಲಿನ ವಸತಿ ಸಂಕೀರ್ಣಗಳಲ್ಲಿರುವ ನೆರೆಹೊರೆ ಮತ್ತು ಸ್ವತಂತ್ರ ಅಂಗಡಿಗಳನ್ನು ತೆರೆಯಲು ಸರ್ಕಾರವು ಶುಕ್ರವಾರ ರಾತ್ರಿ ಅನುಮತಿ ನೀಡಿತ್ತು. ಆದರೆ, ಶೇಕಡಾ 50 ರಷ್ಟು ಸಿಬ್ಬಂದಿ, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ ಎಂದಿದೆ.

ಪ್ರಸ್ತುತ ಸುತ್ತೋಲೆಗೆ ವ್ಯಾಖ್ಯಾನದ ಅಗತ್ಯತೆ ಇದೆ. ಸುಲಭ ಅನುಷ್ಠಾನಕ್ಕೆ ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ ಮಾರುಕಟ್ಟೆ ಸಂಕೀರ್ಣಗಳಂತಹ ಪದಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲಾಗುವುದಿಲ್ಲ ಎಂದು ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ ತಿಳಿಸಿದೆ.

-

ETV Bharat Logo

Copyright © 2025 Ushodaya Enterprises Pvt. Ltd., All Rights Reserved.