ನವದೆಹಲಿ: ವಿಶ್ವದ ಇತರೇ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲೇ ಅತ್ಯಂತ ಅಗ್ಗದ ದರದಲ್ಲಿ 1 ಜಿಬಿ ಮೊಬೈಲ್ ಇಂಟರ್ನೆಟ್ ಲಭ್ಯವಾಗುತ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂಗ್ಲೆಂಡ್ ಮೂಲದ cable.co.uk ಸಂಸ್ಥೆಯ ಈ ಸಮೀಕ್ಷೆಯನ್ನು ಉಲ್ಲೇಖಿಸಿದ್ದಾರೆ.
-
India’s Mobile Internet rate per GB remains by far the lowest in the world. UK based https://t.co/8ZGRuuOuWF which compared mobile data plans around the world has indicated this. pic.twitter.com/LykgjvlUd8
— Ravi Shankar Prasad (@rsprasad) December 2, 2019 " class="align-text-top noRightClick twitterSection" data="
">India’s Mobile Internet rate per GB remains by far the lowest in the world. UK based https://t.co/8ZGRuuOuWF which compared mobile data plans around the world has indicated this. pic.twitter.com/LykgjvlUd8
— Ravi Shankar Prasad (@rsprasad) December 2, 2019India’s Mobile Internet rate per GB remains by far the lowest in the world. UK based https://t.co/8ZGRuuOuWF which compared mobile data plans around the world has indicated this. pic.twitter.com/LykgjvlUd8
— Ravi Shankar Prasad (@rsprasad) December 2, 2019
ಭಾರತದಲ್ಲಿ ಕೇವಲ 0.26 ಡಾಲರ್ ಅಂದರೆ 11.78 ರೂ ಸರಾಸರಿಯಲ್ಲಿ ಒಂದು ಜಿಬಿ ಡೇಟಾವನ್ನ ಮೊಬೈಲ್ ಕಂಪನಿಗಳು ಗ್ರಾಹಕರಿಗೆ ಒದಗಿಸುತ್ತಿವೆ ಎಂದಿದೆ. ಇದನ್ನೇ ಯುಪಿಎ ಆಡಳಿತಾವಧಿಗೆ ಹೋಲಿಸಿರುವ ಸಚಿವರು, ಆಗ ಇಂದು ಜಿಬಿಗೆ ಗ್ರಾಹಕರು 269 ರೂ. ತೆರಬೇಕಾಗಿತ್ತು ಎಂದಿದ್ದಾರೆ.
ರಷ್ಯಾದಲ್ಲಿ 0.91 ಡಾಲರ್ಗೆ ಒಂದು ಜಿಬಿ ಡೇಟಾ ಸಿಕ್ಕರೆ, ಇಟಲಿಯಲ್ಲಿ 1.73 ಡಾಲರ್, ನೈಜಿರಿಯಾದಲ್ಲಿ 2.2, ಆಸ್ಟ್ರೇಲಿಯಾದಲ್ಲಿ 2.47 ಇಂಗ್ಲೆಂಡ್ನಲ್ಲಿ 6.66 ಅಮೆರಿಕಾದಲ್ಲಿ 12.37 ಸ್ವಿಡ್ಜರ್ಲೆಂಡ್ನಲ್ಲಿ 20.22 ಡಾಲರ್ಗೆ ಒಂದು ಒಂದು ಬಿಜಿ ಡೇಟಾ ಸಿಗುತ್ತೆ ಎಂದು ಯುಕೆ ಸಂಸ್ಥೆಯೊಂದು ಸಮೀಕ್ಷೆಯಲ್ಲಿ ಹೇಳಿದೆ.