ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಮಧ್ಯೆ ಕಂಪನಿಗಳಿಗೆ ವಹಿವಾಟು ಉತ್ತೇಜನೆಯ ಭಾಗವಾಗಿ ಹಲವು ಸಡಲಿಕೆಗಳ ಅವಧಿಯನ್ನು 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ತಿಳಿಸಿದೆ.
ಈ ಬಗ್ಗೆ ಪೋಸ್ಟ್ ಮಾಡಿದ ಸಚಿವಾಲಯವು, ಕಂಪನಿಗಳ ಮರು ಪ್ರಾರಂಭ ಯೋಜನೆಯಡಿ 2020ರ ಡಿಸೆಂಬರ್ 30ರವರೆಗೆ, ಸೆಪ್ಟೆಂಬರ್ 30ರಿಂದ ಮಾನ್ಯವಾಗಿರುತ್ತದೆ. ಕಂಪನಿಗಳ ಮಂಡಳಿ ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್ ಅಥವಾ ಇತರ ಆಡಿಯೋ ದೃಶ್ಯ ಕಾರ್ಯವಿಧಾನದ ಮೂಲಕ ಈ ವರ್ಷದ ಅಂತ್ಯದವರೆಗೆ ನಡೆಸಬಹುದು.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ದೇಶದ ಕೆಲವು ಭಾಗಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಡೆತಡೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹಲವು ಯೋಜನೆಗಳ ಅವಧಿಯನ್ನು 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಹೆಚ್ಚಿನ ವ್ಯವಹಾರವನ್ನು ಸುಲಭಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಕಚೇರಿ ಟ್ವೀಟ್ ಮಾಡಿದೆ.
ಕಂಪನಿಗಳು ತಮ್ಮ ಹಿಂದಿನ ದಿವಾಳಿತನ ಉತ್ತಮಗೊಳಿಸಲು 2020ರ ಏಪ್ರಿಲ್ 1ರಿಂದ ಸೆಪ್ಟೆಂಬರ್‌ರವರೆಗೆ ಮಾನ್ಯವಾಗಿರುವ ಕಂಪನಿಗಳ ಮರು ಪ್ರಾರಂಭ ಯೋಜನೆ-2020ಯನ್ನ ಸಚಿವಾಲಯ ಪರಿಚಯಿಸಿತ್ತು. ಈ ಯೋಜನೆಯನ್ನು ಈಗ 2020ರ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.