ETV Bharat / business

ಮಾರುತಿ ಸಜುಕಿ ಶೈನಿಂಗ್​: ವಾಹನ ಮಾರಾಟ ಬೆಳವಣಿಗೆ ಶೇ 31ರಷ್ಟು ವೃದ್ಧಿ - ಆಟೊಮೊಬೈಲ್ ಉದ್ಯಮ ಮಾರಾಟ

ದೇಶೀಯ ವಾಹನ ಮಾರಾಟವು ಕಳೆದ ತಿಂಗಳು ಶೇ 32.2 ರಷ್ಟು ಏರಿಕೆಯಾಗಿ 1,52,608 ಯುನಿಟ್​ಗಳಿಗೆ ತಲುಪಿದ್ದು, 2019ರ ಸೆಪ್ಟೆಂಬರ್‌ನಲ್ಲಿ 1,15,452 ಯುನಿಟ್‌ಗಳಷ್ಟಿತ್ತು ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.

Maruti
ಮಾರುತಿ
author img

By

Published : Oct 1, 2020, 3:09 PM IST

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಸೆಪ್ಟೆಂಬರ್‌ನಲ್ಲಿ ಒಟ್ಟು ಮಾರಾಟದಲ್ಲಿ ಶೇ 30.8ರಷ್ಟು ಏರಿಕೆ ಕಂಡು 1,60,442 ಯುನಿಟ್‌ಗಳಷ್ಟು ವಾಹನ ಮಾರಾಟ ಮಾಡಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಂಪನಿಯು 1,22,640 ಯುನಿಟ್‌ಗಳನ್ನು ಮಾರಾಟ ಮಾಡಿತ್ತು ಎಂದು ಎಂಎಸ್‌ಐ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶೀಯ ವಾಹನ ಮಾರಾಟವು ಕಳೆದ ತಿಂಗಳು ಶೇ 32.2 ರಷ್ಟು ಏರಿಕೆಯಾಗಿ 1,52,608 ಯುನಿಟ್​ಗಳಿಗೆ ತಲುಪಿದ್ದು, 2019ರ ಸೆಪ್ಟೆಂಬರ್‌ನಲ್ಲಿ 1,15,452 ಯುನಿಟ್‌ಗಳಷ್ಟಿತ್ತು.

ಆಲ್ಟೊ ಮತ್ತು ಎಸ್-ಪ್ರೆಸ್ಸೊ ಒಳಗೊಂಡ ಮಿನಿ ಕಾರುಗಳ ಮಾರಾಟವು 27,246 ಯುನಿಟ್ ಆಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 20,085 ಯುನಿಟ್ ಮಾರಾಟವಾಗಿ ಶೇ 35.7ರಷ್ಟು ಏರಿಕೆಯಾಗಿದೆ.

ಕಾಂಪ್ಯಾಕ್ಟ್ ಕಾರು ವಿಭಾಗದ ಮಾರಾಟಗಳಾದ ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಾಲೆನೊ ಮತ್ತು ಡಿಜೈರ್ ಸೇರಿದಂತೆ ಇತರೆ ಉತ್ಪನ್ನಗಳ ಮಾರಾಟವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 57,179 ಕಾರುಗಳಿಗೆ ಹೋಲಿಸಿದರೆ ಶೇ 47.3ರಷ್ಟು ಏರಿಕೆ ಕಂಡು 84,213 ಯುನಿಟ್‌ಗಳಿಗೆ ತಲುಪಿದೆ.

ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಕಾರುಗಳ ಮಾರಾಟವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 1,715 ಯುನಿಟ್‌ಗಳಷ್ಟಿತ್ತು. ಈ ವರ್ಷ ಶೇ 10.6ರಷ್ಟು ಕುಸಿದು 1,534ಕ್ಕೆ ತಲುಪಿದೆ.

ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎರ್ಟಿಗಾ ಸೇರಿದಂತೆ ಯುಟಿಲಿಟಿ ವಾಹನಗಳ ಮಾರಾಟವು ಶೇ 10.1ರಷ್ಟು ಏರಿಕೆ ಕಂಡು 23,699 ಯುನಿಟ್‌ಗಳಿಗೆ ತಲುಪಿದೆ. ಇದು ಹಿಂದಿನ ವರ್ಷದ 21,526 ಯುನಿಟ್​ಗಳು ಮಾರಾಟ ಆಗಿದ್ದವು.

ಕಳೆದ ವರ್ಷದ ಇದೇ ತಿಂಗಳಲ್ಲಿ 7,188 ಯುನಿಟ್‌ಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ರಫ್ತು ಪ್ರಮಾಣ ಶೇ 9ರಷ್ಟು ಏರಿಕೆ ಕಂಡು 7,834ಕ್ಕೆ ತಲುಪಿದೆ ಎಂದು ಕಂಪನಿ ತಿಳಿಸಿದೆ.

ಎರಡನೇ ತ್ರೈಮಾಸಿಕದಲ್ಲಿ ಒಟ್ಟು 3,93,130 ಯುನಿಟ್ ಮಾರಾಟದೊಂದಿಗೆ, ಕಂಪನಿಯು ಹಿಂದಿನ ವರ್ಷದ ಇದೇ ಅವಧಿಗಿಂತ ಶೇ 16.2ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಎಂಎಸ್ಐ ತಿಳಿಸಿದೆ.

ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಕಂಪನಿಯು 4,69,729 ಯುನಿಟ್ ಮಾರಾಟ ಮಾಡಿದೆ. ಇದು 2019-20ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ 36.6ರಷ್ಟು ಕುಸಿತವಾಗಿದೆ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.