ನವದೆಹಲಿ: ಹಬ್ಬದ ಸಮಯದಲ್ಲಿ ಮಾರುತಿ ಸುಜುಕಿ ಕಂಪನಿಯ ವ್ಯಾಪಾರ ಹೆಚ್ಚಳವಾಗಿದ್ದು, ಇದೇ ರೀತಿಯ ಮಾರಾಟ ಈ ವರ್ಷದ ಅಂತ್ಯದವರೆಗೆ ಇರುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಕೊರೊನಾ ಬಳಿಕ ವಾಹನೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಇದು ಕಳವಳಕ್ಕೂ ಕಾರಣವಾಗಿತ್ತು.
ಆದರೆ, ಹಬ್ಬದ ಸಮಯದಲ್ಲಿ ಮಾರುತಿ ಸುಜುಕಿ ವಾಹನಗಳು ಹೆಚ್ಚು ಬಿಕರಿಯಾಗಿದ್ದು, ಈ ವರ್ಷದಲ್ಲಿ ಹಬ್ಬದ ಸಮಯದಲ್ಲೇ ಹೆಚ್ಚು ಮಾರಾಟವಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ನಮ್ಮ ಕಾರುಗಳಿಗೆ ಬೇಡಿಕೆ ಇನ್ನೂ ಕಡಿಮೆಯಾಗಿಲ್ಲ. ಬುಕ್ಕಿಂಗ್ ಮತ್ತು ವಾಹನಗಳ ಬಗ್ಗೆ ವಿಚಾರಿಸುವುದನ್ನು ನೋಡಿದಾಗ ಮಾರಾಟವು ಈ ವರ್ಷದ ಅಂತ್ಯದವರೆಗೆ ಇದೇ ರೀತಿ ಇರಲಿದೆ ಎಂದು ಮಾರುತಿ ಸುಜುಕಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.
"ಜನರ ಒಳಿತಾಯ ಹೆಚ್ಚಾಗಿರುವುದು, ಕಡಿಮೆ ಬಡ್ಡಿ, ಜನರು ನಮ್ಮ ವಾಹನಗಳನ್ನು ಇಷ್ಟಪಡುತ್ತಿರುವುದು ಈ ಎಲ್ಲ ಕಾರಣಗಳಿಂದ ನಮ್ಮ ಕಂಪನಿಯ ಸೇಲ್ ಹೆಚ್ಚಿಗೆಯಾಗಿದೆ" ಎಂದು ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.