ETV Bharat / business

Krsnaa ಡಯಾಗ್ನೋಸ್ಟಿಕ್ಸ್ : ಹೀಗಿದೆ ಈ ಕಂಪನಿ IPO ಮಾಹಿತಿ

ಆಗಸ್ಟ್​ 4 ರಂದು IPO ಬಿಡ್ಡಿಂಗ್​ ಆರಂಭವಾಗಲಿದ್ದು, ಖರೀದಿದಾರರು ಆಗಸ್ಟ್ 4 ರಿಂದ 6ರವರಿಗೆ ಬಿಡ್​ ಸಲ್ಲಿಸಬಹುದು.

krsnaa-diagnostics-ipo-check-dates-price-band-other-details
ಐಪಿಒ
author img

By

Published : Aug 2, 2021, 10:41 PM IST

ನವದೆಹಲಿ: ಕೆಆರ್​ಎಸ್​ಎನ್​ಎಎ ಡಯಾಗ್ನೋಸ್ಟಿಕ್ಸ್ ಇನ್ಸಿಯಲ್​ ಪಬ್ಲಿಕ್​ ಆಪರ್​ ಮೂಲಕ ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ. ಈ ಸಂಬಂಧ ತನ್ನ IPOದ ಬೆಲೆಯನ್ನು ನಿಗದಿ ಮಾಡಿದೆ. 933 - 954 ರೂ. ವರೆಗೆ ಷೇರುದಾರರಿಗೆ ಬಿಡ್​ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಕಂಪನಿ ಸುಮಾರು 1,213 ಕೋಟಿ ರೂ. ಸಂಗ್ರಹ ಮಾಡುವ ಗುರಿ ಹೊಂದಿದೆ.

ಆಗಸ್ಟ್​ 4 ರಂದು IPO ಬಿಡ್ಡಿಂಗ್​ ಆರಂಭವಾಗಲಿದ್ದು, ಖರೀದಿದಾರರು ಆಗಸ್ಟ್ 4 ರಿಂದ 6ರವರಿಗೆ ಬಿಡ್​ ಸಲ್ಲಿಸಬಹುದು.

ಓಎಫ್​ಎಸ್​ ನ ಭಾಗವಾಗಿ ಫೈ ಕ್ಯಾಪಿಟಲ್ 16 ಲಕ್ಷ ಇಕ್ವಿಟಿ ಷೇರುಗಳನ್ನು ಕಂಪನಿ ಮಾರಾಟ ಮಾಡಲಿದೆ. ಕಿತಾರಾ 33,40,713 ಈಕ್ವಿಟಿ ಷೇರುಗಳನ್ನು ಆಫ್‌ಲೋಡ್ ಮಾಡುತ್ತದೆ. ಸೋಮರ್‌ಸೆಟ್ ಇಂಡಸ್ ಹೆಲ್ತ್‌ಕೇರ್ ಫಂಡ್ ಲಿಮಿಟೆಡ್ 35,63,427 ಇಕ್ವಿಟಿ ಷೇರುಗಳನ್ನು ನೀಡುತ್ತದೆ ಮತ್ತು ಲೋಟಸ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ಸ್ 21,380 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತದೆ.

ಈ ಐಪಿಒ ಉದ್ದೇಶ ಏನು?

ಐಪಿಒ 1,213.3 ಕೋಟಿ ರೂ. ಹೊಸ ಸಂಚಿಕೆಯಿಂದ ಬಂದ ಹಣವನ್ನು ಪಂಜಾಬ್, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಡಯಾಗ್ನೋಸ್ಟಿಕ್ಸ್ ಕೇಂದ್ರಗಳನ್ನು ಸ್ಥಾಪಿಸಲು ಕಂಪನಿ ವೆಚ್ಚ ಮಾಡಲಿದೆ.

ಹೂಡಿಕೆದಾರರು ಕನಿಷ್ಠ 15 ಇಕ್ವಿಟಿ ಷೇರುಗಳಿಗೆ ಮತ್ತು ನಂತರ 15 ರ ಗುಣಕಗಳಲ್ಲಿ ಬಿಡ್ ಮಾಡಬಹುದು ಎಂದು ಕಂಪನಿ ಹೇಳಿದೆ.

ಕೆಆರ್​ಎಸ್​ಎನ್​ಎಎ ಡಯಾಗ್ನೋಸ್ಟಿಕ್ಸ್ ತಂತ್ರಜ್ಞಾನ - ಸಕ್ರಿಯಗೊಳಿಸಿದ ರೋಗ ನಿರ್ಣಯದ ಸೇವೆಗಳಾದ ಇಮೇಜಿಂಗ್ (ರೇಡಿಯಾಲಜಿ ಸೇರಿದಂತೆ), ರೋಗಶಾಸ್ತ್ರ/ಕ್ಲಿನಿಕಲ್ ಪ್ರಯೋಗಾಲಯ ಮತ್ತು ಟೆಲಿ-ರೇಡಿಯಾಲಜಿ ಸೇವೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಭಾರತದ ಆರೋಗ್ಯ ಕೇಂದ್ರಗಳಿಗೆ ಒದಗಿಸುತ್ತದೆ.

ಕಂಪನಿಯು ಸಾರ್ವಜನಿಕ ಖಾಸಗಿ ಪಾಲುದಾರಿಕೆ (PPP) ಡಯಾಗ್ನೋಸ್ಟಿಕ್ಸ್ ವಿಭಾಗದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ರೋಗನಿರ್ಣಯದ PPP ವಿಭಾಗದಲ್ಲಿ ಅತಿದೊಡ್ಡ ಉಪಸ್ಥಿತಿಯನ್ನು ಹೊಂದಿದೆ. ಜೂನ್ 2021 ರ ಹೊತ್ತಿಗೆ, ಕಂಪನಿಯು 1,823 ಡಯಾಗ್ನೋಸ್ಟಿಕ್ ಕೇಂದ್ರಗಳನ್ನು ನಿರ್ವಹಿಸುತ್ತಿತ್ತು. ಇದು ದೇಶಾದ್ಯಂತ 13 ರಾಜ್ಯಗಳಲ್ಲಿ ರೇಡಿಯಾಲಜಿ ಮತ್ತು ರೋಗಶಾಸ್ತ್ರ ಸೇವೆಗಳನ್ನು ಒದಗಿಸುತ್ತಿದೆ.

ಓದಿ: ಡಿಜಿಟಲ್ ಪಾವತಿ ವಿಧಾನ ಇ-ರುಪಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.