ನವದೆಹಲಿ: ರಿಲಯನ್ಸ್ ಜಿಯೋ ಹೊಸ ಹಾಗೂ ಪರಿಷ್ಕರಿಸಿದ ಮೇಡ್-ಇನ್-ಇಂಡಿಯಾ ಮೊಬೈಲ್ ಬ್ರೌಸರ್ 'ಜಿಯೋ ಪೇಜಸ್' ಅಭಿವೃದ್ಧಿಪಡಿಸಿದೆ. ಇದು ಎಂಟು ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಡೇಟಾ ಗೌಪ್ಯತೆಗೆ ಒತ್ತು ನೀಡಿ ಉತ್ತಮ ಬ್ರೌಸಿಂಗ್ ಅನುಭವ ನೀಡಲಿದೆ. ಬ್ರೌಸರ್‌ನ ಹೊಸ ಆವೃತ್ತಿಯು ಮಂಗಳವಾರ ಗೂಗಲ್ ಪ್ಲೇಸ್ಟೋರ್ಗೆ ಪಾದಾರ್ಪಣೆ ಮಾಡಿದೆ.
'ಜಿಯೋ ಪೇಜಸ್' ಅನ್ನು ಕ್ರೋಮಿಯಂ ಬ್ಲಿಂಕ್ ಎಂಜಿನ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ವೇಗವಾಗಿ ಎಂಜಿನ್ ಸ್ಥಳಾಂತರ, ವೆಬ್ಪೇಜ್ ರೆಂಡರಿಂಗ್, ವೇಗದ ಪೇಜ್ ಲೋಡಿಂಗ್, ಉತ್ತಮ ಮೀಡಿಯಾ ಸ್ಟ್ರೀಮಿಂಗ್, ಎಮೋಜಿ ಡೊಮೇನ್ ಸಪೋರ್ಟ್ ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂಪರ್ಕದ ಮೂಲಕ ಅತ್ಯುತ್ತಮ ಬ್ರೌಸಿಂಗ್ ಅನುಭವವನ್ನು ಒದಗಿಸುತ್ತದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಲಾಗಿರುವ 'ಜಿಯೋ ಪೇಜಸ್' ಇಂಗ್ಲಿಷ್ ಜೊತೆಗೆ ಎಂಟು ಭಾರತೀಯ ಭಾಷೆಗಳಾದ ಹಿಂದಿ, ಮರಾಠಿ, ತಮಿಳು, ಗುಜರಾತಿ, ತೆಲುಗು, ಮಲಯಾಳಂ, ಕನ್ನಡ ಮತ್ತು ಬಂಗಾಳಿ ಭಾಷೆಗಳಲ್ಲಿ ಲಭ್ಯವಿದೆ. ಬಳಕೆದಾರರು ತಮ್ಮ ಆದ್ಯತೆಯ ಸ್ಥಿತಿಗೆ ಅನುಗುಣವಾಗಿ ಫೀಡ್ಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ರಾಜ್ಯವನ್ನು ಆಯ್ಕೆ ಮಾಡಿದಾಗ ಸ್ಥಳೀಯ ಜನಪ್ರಿಯ ಸೈಟ್‌ಗಳು ಪರದೆಯ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಬಳಕೆದಾರರು ತಮ್ಮ ನೆಚ್ಚಿನ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ಹೋಮ್ ಸ್ಕ್ರೀನ್‌ನಲ್ಲಿ ಪಿನ್ ಮಾಡಬಹುದು. 'ಡಾರ್ಕ್ ಮೋಡ್' ಸೇರಿದಂತೆ ಇತರ ಡಿಸ್ಪ್ಲೇ ಥೀಮ್ ಆಯ್ಕೆ ಮಾಡಬಹುದು. ಬಳಕೆದಾರರು ನಾಲ್ಕು ಅಂಕಿಯ ಭದ್ರತಾ ಪಿನ್ ಅಥವಾ ಫಿಂಗರ್‌ಪ್ರಿಂಟ್ ಅನ್ನು 'ಇನ್ಕಾಗ್ನಿಟೋ ಮೋಡ್'ಗೆ ಸೆಟ್ ಮಾಡಬಹುದು.