ನವದೆಹಲಿ: 5ಜಿ ನೆಟ್ವರ್ಕ್ ಬೆಂಬಲಿತ ಸ್ಮಾರ್ಟ್ಫೋನ್ ವಿನ್ಯಾಸಗೊಳಿಸಿರುವ ರಿಲಯನ್ಸ್ ಜಿಯೋ, 5,000 ರೂ.ಗಿಂತ ಕಡಿಮೆ ದರದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಅಲ್ಲದೇ ಕ್ರಮೇಣ 2,500-3,000 ರೂ.ಗೆ ಮಾರಾಟ ಮಾಡಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ಪ್ರಸ್ತುತ 5ಜಿ ಸ್ಮಾರ್ಟ್‌ಫೋನ್‌ಗಳ ಬೆಲೆ 27,000 ರೂ.ಗಳಿಂದ ಪ್ರಾರಂಭವಾಗುತ್ತವೆ. 2ಜಿ ಫೀಚರ್ ಫೋನ್ ಬಳಸುತ್ತಿರುವ 20-30 ಕೋಟಿ ಮೊಬೈಲ್ ಫೋನ್ ಬಳಕೆದಾರರನ್ನು ಕಂಪನಿಯು ಗುರಿಯಾಗಿಸಿಕೊಂಡು, ಕೇವಲ 2,500-3,000 ದರದಲ್ಲಿ 5ಜಿ ಸ್ಮಾರ್ಟ್ಫೋನ್ಗಳನ್ನು ಸೇಲ್ ಮಾಡಲಿದೆ.
43ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಭಾರತವು 5ಜಿ ಯುಗದ ಹೊಸ್ತಿಲಲ್ಲಿ ನಿಂತಿರುವ ಸಮಯದಲ್ಲಿ 350 ಮಿಲಿಯನ್ ಭಾರತೀಯರು 2ಜಿ ಫೀಚರ್ ಫೋನ್ ಬಳಸುತ್ತಿದ್ದಾರೆ. ಭಾರತವನ್ನು '2ಜಿ-ಮುಕ್ತ' ಮಾಡಬೇಕೆಂದು ಹೇಳಿದ್ದರು.
ಭಾರತದಲ್ಲಿ 4ಜಿ ಮೊಬೈಲ್ ಫೋನ್‌ಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡಿದ ಮೊದಲ ಕಂಪನಿ ಕೂಡ ಜಿಯೋ ಆಗಿದೆ. ಇಲ್ಲಿ ಗ್ರಾಹಕರು 1,500 ರೂ.ಗಳ ಠೇವಣಿ (ಮರುಪಾವತಿಸಬಹುದಾದ) ಪಾವತಿಸಬೇಕಾಗಿತ್ತು ಅಷ್ಟೇ. ಇದೀಗ ಕೈಗೆಟುಕುವ ದರದಲ್ಲಿ 5ಜಿ ಸ್ಮಾರ್ಟ್ಫೋನ್ ನೀಡಲು ಮುಂದಾಗಿದೆ.