ಸ್ಯಾನ್ಫ್ರಾನ್ಸಿಸ್ಕೋ (ಯುಎಸ್): ಪಿಕ್ಸೆಲ್ 4ಎ ಬಿಡುಗಡೆಗೆ ಮುಂಚಿತವಾಗಿ ಗೂಗಲ್ ತನ್ನ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ಗಳಾದ ಪಿಕ್ಸೆಲ್ 3ಎ ಮತ್ತು ಪಿಕ್ಸೆಲ್ 3ಎ ಎಕ್ಸ್ಎಲ್ ಉತ್ಪಾದನೆಯನ್ನು ನಿಲ್ಲಿಸುವುದಾಗಿ ದೃಢಪಡಿಸಿದೆ.
ಇನ್ನು ಮುಂದೆ ಗೂಗಲ್ ಸ್ಟೋರ್ನಲ್ಲಿ ಇವುಗಳು ಲಭ್ಯವಿರುವುದಿಲ್ಲ. ಆದರೆ ತರ್ಡ್ ಪಾರ್ಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟದಲ್ಲಿರುತ್ತವೆ ಎಂದು ಆಂಡ್ರಾಯ್ಡ್ ವರದಿ ಮಾಡಿದೆ.
"ಗೂಗಲ್ ಸ್ಟೋರ್ ತನ್ನೆಲ್ಲಾ ಪಿಕ್ಸೆಲ್ 3ಎ ಮೊಬೈಲ್ಗಳನ್ನು ಈಗಾಗಲೇ ಮಾರಾಟ ಮಾಡಿ ಪೂರ್ಣಗೊಳಿಸಿದೆ. ಪಿಕ್ಸೆಲ್ 3ಎ ಖರೀದಿಸಲು ಇನ್ನೂ ಆಸಕ್ತಿ ಹೊಂದಿರುವ ಜನರಿಗೆ ಇದು ಕೆಲವು ಪಾಲುದಾರರಿಂದ ಲಭ್ಯವಿರುತ್ತದೆ. ಆದರೆ ಸರಬರಾಜು ಕೊನೆಗೊಂಡಿದೆ" ಎಂದು ಗೂಗಲ್ ವಕ್ತಾರರು ಉಲ್ಲೇಖಿಸಿದ್ದಾರೆ.
ಪ್ರಸ್ತುತ, ಪಿಕ್ಸೆಲ್ 4 ಮತ್ತು ಪಿಕ್ಸೆಲ್ 4 ಎಕ್ಸ್ಎಲ್ ಮಾತ್ರ ಲಭ್ಯವಿದೆ. ಪಿಕ್ಸೆಲ್ 4ಎ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಪಿಕ್ಸೆಲ್ 4ಎ, 6 ಜಿಬಿ ರ್ಯಾಮ್ ಮತ್ತು 64 ಜಿಬಿ ನಾನ್ ಎಕ್ಸ್ಪ್ಯಾಂಡೇಬಲ್ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಇದು 5.81 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. $399ಕ್ಕೆ ಗ್ರಾಹಕರ ಕೈಗೆಟುಕಲಿದೆ.