ETV Bharat / business

ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಇಸ್ರೋ ಸಾಥ್

ಶಿಲ್ಲಾಂಗ್‌ನಲ್ಲಿರುವ ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಷನ್ ಕೇಂದ್ರ (ಎನ್‌ಇಎಸಿ) ಈಶಾನ್ಯ ರಾಜ್ಯಗಳಿಂದ ಹಲವು ಪ್ರಸ್ತಾಪಗಳನ್ನು ಸ್ವೀಕರಿಸಿದೆ. ಮುಂದಿನ ಹದಿನೈದು ದಿನಗಳಲ್ಲಿ ಪ್ರತಿಯೊಂದು ರಾಜ್ಯಗಳೊಂದಿಗೆ ಒಂದೊಂದಾಗಿ ಅಂತಹ ಎಲ್ಲ ಯೋಜನೆಗಳ ಕಾರ್ಯಸಾಧ್ಯತೆ ಮತ್ತು ಅಪೇಕ್ಷಣೀಯತೆ ಇದು ಚರ್ಚಿಸಲಿದೆ. ಅಂತಹ ಎಲ್ಲ ಯೋಜನೆಗಳಿಗೆ ಆಯಾ ರಾಜ್ಯಗಳು ಮತ್ತು ಎನ್‌ಇಎಸ್‌ಎಸಿ ಜಂಟಿಯಾಗಿ ಹಣ ನೀಡುವ ಸಾಧ್ಯತೆ ಇದೆ.

ISRO
ISRO
author img

By

Published : Jun 10, 2021, 5:02 PM IST

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಈಶಾನ್ಯ ಭಾಗದಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ನೆರವಾಗಲಿದೆ. ಈ ಪ್ರದೇಶದಲ್ಲಿನ ಮೂಲಸೌಕರ್ಯ ಯೋಜನೆಗಳ ಉತ್ತಮ ಸಾಧನೆಗಾಗಿ ಉಪಗ್ರಹ ಚಿತ್ರಣ ಮತ್ತು ಇತರ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಬಾಹ್ಯಾಕಾಶ ಇಲಾಖೆ ಮತ್ತು ಪರಮಾಣು ಇಂಧನ ಸಚಿವಾಲಯದ ಹಾಗೂ ಈಶಾನ್ಯ ವಲಯ ಅಭಿವೃದ್ಧಿ ಖಾತೆಯ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

ಅಭಿವೃದ್ಧಿ ಯೋಜನೆಗಳಿಗಾಗಿ ಡೇಟಾ ಮ್ಯಾಪಿಂಗ್ ಮತ್ತು ಮಾಹಿತಿ ಹಂಚಿಕೊಳ್ಳುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಂಸ್ಥಿಕ ಒಳಗೊಳ್ಳುವಿಕೆ ಇಡೀ ದೇಶದಲ್ಲಿ ಇದು ಮೊದಲ ಬಾರಿಗೆ ನಡೆಯಲಿದೆ. ಈಶಾನ್ಯ ಪ್ರದೇಶದ ಅಭಿವೃದ್ಧಿ (ಡೊನರ್) ಸಚಿವಾಲಯದಿಂದ ಧನಸಹಾಯ ಪಡೆದ ಎಲ್ಲ ಎಂಟು ಈಶಾನ್ಯ ರಾಜ್ಯಗಳ 221 ತಾಣಗಳಲ್ಲಿ 67 ಯೋಜನೆಗಳನ್ನು ಇಸ್ರೋ ಈಗಾಗಲೇ ಮೇಲ್ವಿಚಾರಣೆ ಮತ್ತು ಜಿಯೋ - ಟ್ಯಾಗಿಂಗ್ ಮಾಡುತ್ತಿದೆ.

  • #ISRO to offer optimum utilization of Satellite Imaging &other Space Technology applications for better accomplishment of infrastructural/development projects in all the 8 States of #NorthEast. Held a joint meeting of officers of Ministry of Northeast/DoNER & ISRO scientists. pic.twitter.com/5OlDfgWsxH

    — Dr Jitendra Singh (@DrJitendraSingh) June 9, 2021 " class="align-text-top noRightClick twitterSection" data=" ">

ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಇಸ್ರೋ ವಿಜ್ಞಾನಿಗಳು ಭಾಗವಹಿಸಿದ ಸಭೆಯಲ್ಲಿ ಪಾಲ್ಗೊಂಡು, ಈಶಾನ್ಯದ ಎಂಟು ರಾಜ್ಯಗಳ ಪೈಕಿ ಆರು ರಾಜ್ಯಗಳು ಈಗಾಗಲೇ ಇಸ್ರೋ ತನ್ನ ನಿರ್ದಿಷ್ಟ ಪ್ರಸ್ತಾಪಗಳನ್ನು ಕಳುಹಿಸಿದೆ. ಸಿಕ್ಕಿಂ ಮತ್ತು ಅಸ್ಸೋಂ ಕೂಡ ಶೀಘ್ರದಲ್ಲೇ ತಮ್ಮ ಪ್ರಸ್ತಾಪಗಳನ್ನು ಕಳುಹಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಓದಿ: V-ಆಕಾರದ ಚೇತರಿಕೆ ಭಾರತವನ್ನು ಜಿ-20 ರಾಷ್ಟ್ರಗಳಲ್ಲಿ ಉತ್ತಮ ಸ್ಥಾನದಲ್ಲಿ ಇರಿಸಿದೆ

ಈ ಯೋಜನೆಯು ಇತರ ರಾಜ್ಯಗಳಿಗೂ ಮಾದರಿಯಾಗಬಲ್ಲದು. ಕಳೆದ ಏಳು ವರ್ಷಗಳಲ್ಲಿ ಇಸ್ರೋ ಇನ್ನು ಮುಂದೆ ಕೇವಲ ಉಪಗ್ರಹಗಳ ಉಡಾವಣೆಗೆ ಸೀಮಿತವಾಗಿಲ್ಲ. ಅಭಿವೃದ್ಧಿ ಚಟುವಟಿಕೆಗಳಲ್ಲಿ ತನ್ನ ಪಾತ್ರವನ್ನು ನಿರಂತರವಾಗಿ ವಿಸ್ತರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯ 'ಭಾರತ ಪರಿವರ್ತಿಸುವ' ಧ್ಯೇಯ ಈಡೇರಿಸುವಲ್ಲಿ ಕೂಡ ಕಾರ್ಯನಿರತವಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.