ನವದೆಹಲಿ: ತಯಾರಿಕೆ, ಗಣಿಗಾರಿಕೆ ಮತ್ತು ವಿದ್ಯುತ್ ಉತ್ಪಾದನೆಯ ಉತ್ಪಾದನೆ ಕ್ಷೀಣಿಸಿದ್ದರಿಂದ ಕೈಗಾರಿಕಾ ಉತ್ಪಾದನೆಯು ಜೂನ್‌ನಲ್ಲಿ ಶೇ 16.6ರಷ್ಟು ಕುಸಿದಿದೆ ಎಂದು ಮಂಗಳವಾರ ಬಿಡುಗಡೆಯಾದ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ದತ್ತಾಂಶದ ಪ್ರಕಾರ, ತಯಾರಿಕ ವಲಯದ ಉತ್ಪಾದನೆಯು ಶೇ 17.1 ರಷ್ಟು ಕುಸಿತ ದಾಖಲಿಸಿದರೆ, ಗಣಿಗಾರಿಕೆ ಮತ್ತು ವಿದ್ಯುತ್ ಉತ್ಪಾದನೆಯು ಕ್ರಮವಾಗಿ ಶೇ 19.8 ಮತ್ತು ಶೇ 10ರಷ್ಟು ಇಳಿಕೆಯಾಗಿದೆ.
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಂಕಿಅಂಶಗಳ ಅನ್ವಯ, ಈಗಿನ ಐಐಪಿ ಅನ್ನು ಕೋವಿಡ್-19 ಸಾಂಕ್ರಾಮಿಕ ಮುಂಚಿನ ತಿಂಗಳಗಳಿಗೆ ಹೋಲಿಸುವುದು ಸೂಕ್ತವಲ್ಲ. ಆದರೆ, ಮಾಸಿಕ ಆಧಾರದ ಮೇಲೆ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಸುಧಾರಣೆ ತೋರಿಸಿದೆ. ಏಪ್ರಿಲ್‌ನಲ್ಲಿ ಶೇ 53.6ರಷ್ಟಿದ್ದ ಸೂಚ್ಯಂಕವು ಮೇ ತಿಂಗಳಲ್ಲಿ ಶೇ 89.5ರಷ್ಟು ಮತ್ತು ಜೂನ್‌ನಲ್ಲಿ ಶೇ 107.8ರಷ್ಟು ಸುಧಾರಿಸಿದೆ ಎಂದು ಡೇಟಾ ಮೂಲಕ ಸ್ಪಷ್ಟನೆ ನೀಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು 2020ರ ಮಾರ್ಚ್ ಅಂತ್ಯದಿಂದ ಘೋಷಿಸಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯ ಕೈಗಾರಿಕಾ ವಲಯದ ಸಂಸ್ಥೆಗಳು ಕಾರ್ಯನಿರ್ವಹಿಸಲಿಲ್ಲ. ಇದು ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿತು.