ETV Bharat / business

ಭಾರತದ ವಿದೇಶಿ ವಿನಿಮಯ ಸಂಗ್ರಹ: 908 ಮಿಲಿಯನ್ ಡಾಲರ್‌ ಕುಸಿತ - Reserve Bank of India

ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 908 ಮಿಲಿಯನ್ ಡಾಲರ್‌ ಕುಸಿದಿದೆ ಎಂದು ಅಕ್ಟೋಬರ್ 22 ಕ್ಕೆ ಬಿಡುಗಡೆ ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಪ್ತಾಹಿಕ ದತ್ತಾಂಶವು ತೋರಿಸಿದೆ.

India's foreign exchange reserves
India's foreign exchange reserves
author img

By

Published : Oct 30, 2021, 7:45 AM IST

ಮುಂಬೈ: ಅಕ್ಟೋಬರ್ 22 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 908 ಮಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಂಕಿ - ಅಂಶಗಳ ಪ್ರಕಾರ, ವಿದೇಶಿ ವಿನಿಮಯ ಸಂಗ್ರಹವು ಅಕ್ಟೋಬರ್ 15ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ $ 641.008 ಬಿಲಿಯನ್‌ನಿಂದ $ 640.100 ಬಿಲಿಯನ್​ಗೆ ಕುಸಿದಿತ್ತು.

ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತುಗಳು (FCAs), ಚಿನ್ನದ ಮೀಸಲುಗಳು, ವಿಶೇಷ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್‌) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಜೊತೆಗೆ ದೇಶದ ಮೀಸಲು ಸ್ಥಾನವನ್ನು ಒಳಗೊಂಡಿರುತ್ತದೆ.

ಡೇಟಾದ ಪ್ರಕಾರ, ವಿದೇಶಿ ಕರೆನ್ಸಿ ಸ್ವತ್ತುಗಳು $853 ಮಿಲಿಯನ್‌ನಿಂದ $577.098 ಬಿಲಿಯನ್​ಗೆ ಇಳಿದಿವೆ. ಅದೇ ರೀತಿ, ದೇಶದ ಚಿನ್ನದ ನಿಕ್ಷೇಪಗಳ ಮೌಲ್ಯವು 138 ಮಿಲಿಯನ್ ಡಾಲರ್‌ಗಳಷ್ಟು ಕುಸಿದು, 38.441 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಇನ್ನು SDR ಮೌಲ್ಯವು $74 ಮಿಲಿಯನ್‌ನಿಂದ $19.321 ಬಿಲಿಯನ್​ಗೆ ಏರಿಕೆಯಾಗಿದೆ. ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೊಂದಿಗೆ ದೇಶದ ಮೀಸಲು ಸ್ಥಾನವು $10 ಮಿಲಿಯನ್‌ನಿಂದ $5.240 ಬಿಲಿಯನ್​ಗೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.