ನವದೆಹಲಿ: 2021ರ ಜನವರಿಯಲ್ಲಿ ಭಾರತದ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯಲ್ಲಿ ಯಾವುದೇ ಬೆಳವಣಿಗೆ ದಾಖಲಾಗಿಲ್ಲ.
ಕಳೆದ ತಿಂಗಳು ಇದೇ ಸೂಚ್ಯಂಕದ ಎಂಟು ಕೋರ್ ಇಂಡಸ್ಟ್ರಿಗಳ ಉತ್ಪಾದನೆಯಲ್ಲಿ ಕೇವಲ ಶೇ 0.1ರಷ್ಟು ಏರಿಕೆ ಕಂಡಿತ್ತು. 2020ರ ಡಿಸೆಂಬರ್‌ನಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯು ಶೇ. 2.2ರಷ್ಟು ವಿಸ್ತರಣೆ ಆಗಿತ್ತು.
ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಸೇರ್ಪಡೆಯಾದ ವಸ್ತುಗಳ ತೂಕದ ಶೇ. 40.27ರಷ್ಟು ಇಸಿಐ ಸೂಚ್ಯಂಕವ ಒಳಗೊಂಡಿದೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನ, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕೈಗಾರಿಕೆಗಳು ಒಳಗೊಂಡಿವೆ.
ಇದನ್ನೂ ಓದಿ: 'ಬಜೆಟ್ನ ತೆರಿಗೆ ಘೋಷಣೆಗಳು ಅಂತಾರಾಷ್ಟ್ರೀಯ ಹಣಕಾಸು ಕ್ಷೇತ್ರದ ಆಕರ್ಷಣೆ'
ವಲಯದ ನಿರ್ದಿಷ್ಟ ಆಧಾರದ ಮೇಲೆ ಸೂಚ್ಯಂಕದಲ್ಲಿ ಶೇ. 10.33ರಷ್ಟು ಪ್ರಮಾಣ ಹೊಂದಿರುವ ಕಲ್ಲಿದ್ದಲಿನ ಉತ್ಪಾದನೆಯು ಹಿಂದಿನ ವರ್ಷದ ಇದೇ ತಿಂಗಳಲ್ಲಿ 2021ರ ಜನವರಿಯಲ್ಲಿ (-) ಶೇ 1.8ರಷ್ಟು ಕುಸಿತ ತೋರಿಸಿದೆ. 28.04ಕ್ಕೂ ಅಧಿಕ ತೂಕ ಹೊಂದಿರುವ ಸಂಸ್ಕರಣಾಗಾರ ಉತ್ಪನ್ನಗಳ ಉತ್ಪಾದನೆಯು ಕಳೆದ ಹಣಕಾಸು ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ. 2.6ರಷ್ಟು ಕುಸಿದಿದೆ.
19.85ರ ಎರಡನೇ ಅತಿ ಹೆಚ್ಚು ತೂಕ ಹೊಂದಿರುವ ವಿದ್ಯುತ್ ಉತ್ಪಾದನೆಯು ಶೇ. 5.1ರಷ್ಟು ಏರಿಕೆಯಾಗಿದೆ. ಆದರೆ ಉಕ್ಕಿನ ಉತ್ಪಾದನೆಯು ಶೇ. 2.6ರಷ್ಟು ಹೆಚ್ಚಾಗಿದೆ. ಕಚ್ಚಾ ತೈಲವು ಆ ತಿಂಗಳಲ್ಲಿ ಶೇ. 4.6ರಷ್ಟು ಕಡಿಮೆಯಾಗಿದೆ. ನೈಸರ್ಗಿಕ ಅನಿಲ ಉತ್ಪಾದನೆಯ ಉಪ ಸೂಚ್ಯಂಕವು ಶೇ. 2ರಷ್ಟು ಕುಸಿಯಿತು. ಸಿಮೆಂಟ್ ಉತ್ಪಾದನೆಯು ಪರಿಶೀಲನೆಯ ತಿಂಗಳಲ್ಲಿ ಶೇ. 5.9ರಷ್ಟು ಕುಸಿದಿದೆ.