ETV Bharat / business

ವೀಸಾ, ಪ್ರಯಾಣ ನಿರ್ಬಂಧದಿಂದ ವಿಮಾನಯಾನ ಸಂಸ್ಥೆಗಳಿಗೆ ₹ 1.3 ಲಕ್ಷ ಕೋಟಿ ಆದಾಯ ನಷ್ಟ! - ವಾಣಿಜ್ಯ ಸುದ್ದಿ

ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು 2020 ರಿಂದ 2022ರ ವರೆಗಿನ ಹಣಕಾಸು ವರ್ಷದ ಅವಧಿಯಲ್ಲಿ 1.1-1.3 ಲಕ್ಷ ಕೋಟಿ ರೂ. ಬೃಹತ್ ಆದಾಯ ಹೊಡೆತಕ್ಕೆ ಒಳಗಾಗಲಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

Indian airlines
ವಿಮಾನಯಾನ
author img

By

Published : Jul 15, 2020, 10:38 PM IST

ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ಪ್ರೇರೇಪಿತ ವೀಸಾ ಮತ್ತು ಪ್ರಯಾಣ ನಿರ್ಬಂಧಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷ ಸೇರಿ ಮೂರು ಹಣಕಾಸು ವರ್ಷಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು 1.1ರಿಂದ1.3 ಲಕ್ಷ ಕೋಟಿ ರೂ. ನಷ್ಟ ಅನುಭವಿಸಲಿವೆ ಎಂದು ವರದಿಯೊಂದು ಹೇಳಿದೆ.

ಮಧ್ಯಮ ಅವಧಿಯಲ್ಲಿ ಕನಿಷ್ಠ ಎರಡು ಅಂಕಿಯಷ್ಟೂ ಬೆಳವಣಿಗೆಯನ್ನೂ ಮರಳುವ ನಿರೀಕ್ಷೆಯಿಲ್ಲದ ಕಾರಣ ವಿಮಾನಯಾನ ಸಂಸ್ಥೆಗಳು ಈ ನಷ್ಟವನ್ನು ಮರುಪಡೆಯುವುದು ಅಸಂಭವವಾಗಿದೆ ಎಂದು ಕ್ರಿಸಿಲ್ ರಿಸರ್ಚ್ ತಿಳಿಸಿದೆ.

ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು 2020 ರಿಂದ 2022ರ ವರೆಗಿನ ಹಣಕಾಸು ವರ್ಷದ ಅವಧಿಯಲ್ಲಿ 1.1-1.3 ಲಕ್ಷ ಕೋಟಿ ರೂ. ಬೃಹತ್ ಆದಾಯ ಹೊಡೆತಕ್ಕೆ ಒಳಗಾಗಲಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

2020- 21ನೇ ಹಣಕಾಸು ವರ್ಷದಲ್ಲಿ ಕಚ್ಚಾ ತೈಲ ದರ ಬ್ಯಾರಲ್‌ಗೆ 38- 42 ಡಾಲರ್‌ಗೆ ಇಳಿಕೆ ಆಗಲಿದೆ ಎಂದು ಊಹಿಸಿದರೆ ಶೇ 30- 45ರಷ್ಟು ವೆಚ್ಚ ಭರಿಸಿಕೊಳ್ಳಬಹುದು. ಆದರೆ, ಲಾಭಕ್ಕೆ ಮರಳಲು ಸಾಧ್ಯವಿಲ್ಲ. ಪ್ರಯಾಣಕ್ಕೆ ಇರುವ ನಿರ್ಬಂಧದಿಂದಾಗಿ ಕಚ್ಚಾ ತೈಲ ದರ ಇಳಿಕೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದೆ.

ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಬರದೇ ಹೋದರೆ 2022ರಲ್ಲಿಯೂ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ಚೇತರಿಕೆ ಕಂಡುಬರುವುದಿಲ್ಲ ಎಂದು ಎಚ್ಚರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.