ETV Bharat / business

5 ವರ್ಷದಲ್ಲಿ ಭಾರತ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ತಾಣ: ನಿತಿನ್ ಗಡ್ಕರಿ

‘ಭಾರತದ ಎಲೆಕ್ಟ್ರಿಕ್ ವಾಹನಗಳ ಮಾರ್ಗದರ್ಶಿ’ ಕುರಿತ ವೆಬಿನರ್ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಎಲ್ಲ ಸಾಧ್ಯವಾದ ರಿಯಾಯಿತಿಗಳನ್ನೂ ಎಲೆಕ್ಟ್ರಾನಿಕ್​ ವಲಯಕ್ಕೆ ನೀಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲಿನ ಜಿಎಸ್​ಟಿಯನ್ನು ಶೇ 12ಕ್ಕೆ ಇಳಿಸಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತ ಇವಿ ತಯಾರಿಕೆಯ ಹಬ್ ಆಗಲಿದೆ ಎಂದರು.

electric vehicles
ಎಲೆಕ್ಟ್ರಿಕ್ ವಾಹನ
author img

By

Published : Jun 18, 2020, 7:54 PM IST

ನವದೆಹಲಿ: ಭಾರತ ಮುಂದಿನ ಐದು ವರ್ಷಗಳ ಒಳಗೆ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ತಾಣವಾಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್-19 ನಂತರ ‘ಭಾರತದ ಎಲೆಕ್ಟ್ರಿಕ್ ವಾಹನಗಳ ಮಾರ್ಗದರ್ಶಿ’ ಕುರಿತ ವೆಬಿನರ್ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಸಾಧ್ಯವಾದ ರಿಯಾಯಿತಿಗಳನ್ನೂ ಎಲೆಕ್ಟ್ರಾನಿಕ್​ ವಲಯಕ್ಕೆ ನೀಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್​ಟಿಯನ್ನು ಶೇ 12ಕ್ಕೆ ಇಳಿಸಿದೆ ಎಂದರು.

ಎಲೆಕ್ಟ್ರಿಕ್ ವಾಹನ ವಲಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಆದರೆ ಅವುಗಳ ಮಾರಾಟ ಪ್ರಮಾಣ ಹೆಚ್ಚಾದಂತೆ ಪರಿಸ್ಥಿತಿ ಬದಲಾಗುತ್ತದೆ. ಜಗತ್ತು ಚೀನಾದೊಂದಿಗೆ ವ್ಯಾಪಾರ ನಡೆಸಲು ಇನ್ನು ಇಚ್ಛಿಸುವುದಿಲ್ಲ. ಇದು ಭಾರತೀಯ ಕೈಗಾರಿಕೆಗಳಿಗೆ ತಮ್ಮ ವಾಣಿಜ್ಯದಲ್ಲಿ ತಿರುವು ಪಡೆಯಲು ಉತ್ತಮ ಅವಕಾಶ ಎಂದು ತಿಳಿಸಿದರು.

ಪೆಟ್ರೋಲಿಯಂ ಇಂಧನ ಸೀಮಿತ ಪ್ರಮಾಣದಲ್ಲಿ ಲಭ್ಯವಿರುವ ಕಾರಣ ವಿಶ್ವ ಪರ್ಯಾಯ ಮತ್ತು ಅಗ್ಗದ ಇಂಧನದತ್ತ ನೋಡಬೇಕಾಗಿದೆ. ಎಲೆಕ್ಟ್ರಿಕ್ ಮತ್ತು ಜೈವಿಕ ಇಂಧನ ಅಳವಡಿಸಿಕೊಳ್ಳಲು ಉತ್ತಮ ಆಯ್ಕೆ. ಇದು ವಾಹನ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುತ್ತದೆ ಎಂದರು.

ಲಂಡನ್ ಮಾದರಿಯ ಸಾರ್ವಜನಿಕ ಸಾರಿಗೆಯನ್ನು ಸ್ಮರಿಸಿದ ಸಚಿವರು, ಅಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದನ್ನು ಇಲ್ಲಿ ಅಳವಡಿಸಿಕೊಳ್ಳುವುದರಿಂದ ಬಡ ಪ್ರಯಾಣಿಕರಿಗೆ ಮತ್ತು ನಾಗರಿಕ ಆಡಳಿತಕ್ಕೆ ಪ್ರಯೋಜನಕಾರಿಯಾಗಲಿದೆ. ಮುಂಬರುವ ದೆಹಲಿ-ಮುಂಬೈ ಹಸಿರು ಹೆದ್ದಾರಿ ಕಾರಿಡಾರ್ ಅನ್ನು ಪ್ರಾಯೋಗಿಕ ಯೋಜನೆಯಾಗಿ ಅಭಿವೃದ್ಧಿ ಪಡಿಸುವ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.