ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗ ತಂದೊಡ್ಡಿದ ಪೂರೈಕೆ ಸರಪಳಿಯ ಅಡ್ಡಿ ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಿದರೂ, ಭಾರತವು ದಾಖಲೆಯ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಪಡೆದುಕೊಂಡಿದೆ,
ಕಳೆದ ಹಣಕಾಸು ವರ್ಷದಲ್ಲಿ ಮರುಹೂಡಿಕೆ ಸೇರಿದಂತೆ, ಎಫ್‌ಡಿಐ ಒಳಹರಿವು ಈ ಹಿಂದಿನ ವರ್ಷಕ್ಕಿಂತ ಶೇ 10ರಷ್ಟು ಸ್ವೀಕರಿಸಲಾಗಿದೆ ಎಂದು ಸರ್ಕಾರ ತನ್ನ ಇತ್ತೀಚಿನ ಅಂಕಿ - ಅಂಶಗಳ ಮೂಲಕ ತಿಳಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಹಿತಿಯ ಪ್ರಕಾರ, 2019-20ನೇ ಹಣಕಾಸು ವರ್ಷದಲ್ಲಿ ಎಫ್‌ಡಿಐ ಒಳಹರಿವು 74.39 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ವಿದೇಶಿ ಹೂಡಿಕೆದಾರರು ಭಾರತೀಯ ಘಟಕದಲ್ಲಿ ನೇರ ಹೂಡಿಕೆ ಮಾಡಿರುವ ಎಫ್‌ಡಿಐ ಈಕ್ವಿಟಿ ಒಳಹರಿನ ಬೆಳವಣಿಗೆಯ ದರ ಉತ್ತಮವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ದೇಶವು 59.64 ಬಿಲಿಯನ್ ಡಾಲರ್ ಪಡೆದಿದೆ. 2019ರಲ್ಲಿ ಪಡೆದಿದ್ದ 49.98 ಬಿಲಿಯನ್ ಡಾಲರ್ ಮೊತ್ತಕ್ಕೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಳವಾಗಿದೆ.
ಭಾರತದ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಪ್ರವೃತ್ತಿಗಳು ಜಾಗತಿಕ ಹೂಡಿಕೆದಾರರಲ್ಲಿ ಆದ್ಯತೆಯ ಹೂಡಿಕೆ ತಾಣವಾಗಿ, ಅತ್ಯುತ್ತಮ ಸ್ಥಾನ ಪಡೆದಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿ ಸುಧಾರಣೆಗಳು, ಹೂಡಿಕೆ ಸುಗಮತೆ ಮತ್ತು ವ್ಯವಹಾರ ಸುಲಭವಾಗುವಂತೆ ಸರ್ಕಾರವು ಕೈಗೊಂಡ ಕ್ರಮಗಳು ದೇಶಕ್ಕೆ ಎಫ್‌ಡಿಐ ಒಳಹರಿವು ಹೆಚ್ಚಿಸಲು ಕಾರಣವಾಗಿದೆ ಎಂದಿದೆ.
ಇದನ್ನೂ ಓದಿ: ಏರಿಕೆಯ ಹಾದಿಯಲ್ಲಿ ಚಿನ್ನ - ಬೆಳ್ಳಿ: ಮೇ 24ರ ಗೋಲ್ಡ್ ರೇಟ್ ಹೀಗಿದೆ!
ಜಾಗತಿಕ ಎಫ್‌ಡಿಐ ಈಕ್ವಿಟಿ ಒಳಹರಿವಿನಲ್ಲಿ ಸಿಂಗಾಪುರ ಶೇ 29ರಷ್ಟು ಷೇರುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿ ಅಮೆರಿಕ ಶೇ 23ರಷ್ಟು ಮತ್ತು ಮಾರಿಷಸ್ ಶೇ 9ರಷ್ಟು ನಂತರದ ಸ್ಥಾನದಲ್ಲಿದೆ.
ದತ್ತಾಂಶ ವಲಯದ ದೃಷ್ಟಿಯಿಂದ ನೋಡಿದರೆ, 'ಎಫ್‌ಡಿಐ ಈಕ್ವಿಟಿ ಒಳಹರಿವಿನ ಸುಮಾರು ಶೇ 44ರಷ್ಟು ಪಾಲು ಹೊಂದಿರುವ' ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ 'ವಲಯವು ಉನ್ನತ ವಲಯವಾಗಿ ಹೊರಹೊಮ್ಮಿದೆ. ಈ ನಂತರ ನಿರ್ಮಾಣ (ಮೂಲಸೌಕರ್ಯ) ಚಟುವಟಿಕೆಗಳು ಶೇ 13ರಷ್ಟು ಮತ್ತು ಸೇವಾ ವಲಯ ಶೇ 8ರಷ್ಟು ಇದೆ.
‘ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್’ ಕ್ಷೇತ್ರದ ಅಡಿಯಲ್ಲಿ ಗುಜರಾತ್ ಸಿಂಹ ಪಾಲು (ಶೇ 78ರಷ್ಟು) ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ (ಶೇ 9ರಷ್ಟು) ಇದೆ. ದೇಶದ ಐಟಿ ರಾಜಧಾನಿ ಬೆಂಗಳೂರು ಮತ್ತು ರಾಷ್ಟ್ರ ರಾಜಧಾನಿ ದೆಹಲಿ ನಗರದ ಪಾಲು ಶೇ 5ರಷ್ಟಿದೆ.
ಕಳೆದ ಹಣಕಾಸು ವರ್ಷದಲ್ಲಿ ಒಟ್ಟು ಎಫ್‌ಡಿಐ ಈಕ್ವಿಟಿ ಒಳಹರಿವಿನ ಶೇ 37ರಷ್ಟು ಪಾಲು ಹೊಂದಿರುವ ಗುಜರಾತ್ ಅಗ್ರಸ್ಥಾನ ಪಡೆದಿದೆ. ಆ ನಂತರ ಮಹಾರಾಷ್ಟ್ರ ಶೇ 27ರಷ್ಟು ಮತ್ತು ಕರ್ನಾಟಕ ಶೇ 13ರಷ್ಟು ಸ್ಥಾನ ಪಡೆದಿದೆ.
ಕಳೆದ ಹಣಕಾಸು ವರ್ಷದಲ್ಲಿ ಗುಜರಾತ್‌ನ ಬಹುಪಾಲು ಈಕ್ವಿಟಿ ಒಳಹರಿವು ‘ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್’ ಶೇ 94ರಷ್ಟು ಮತ್ತು ‘ನಿರ್ಮಾಣ (ಮೂಲಸೌಕರ್ಯ) ಚಟುವಟಿಕೆಗಳು’ ಶೇ 2ರಷ್ಟು ವರದಿಯಾಗಿದೆ.