ಮುಂಬೈ: ಚಿಲ್ಲರೆ ಸಾಲ ವಿಭಾಗದಲ್ಲಿ ಹೆಚ್ಚಿನ ಒತ್ತಡ ಬರುತ್ತಿರುವುದನ್ನು ಮನಗಂಡ ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ದೃಷ್ಟಿಕೋನವನ್ನು 2021-2022ರ ಆರ್ಥಿಕ ವರ್ಷದಲ್ಲಿ ನೆಗೆಟಿವ್ನಿಂದ ಸ್ಥಿರ ಸೂಚ್ಯಂಕದಲ್ಲಿ ಇರಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ (ಪಿಎಸ್‌ಬಿ) ದೃಷ್ಟಿಕೋನವನ್ನು ನೆಗೆಟಿವ್ನಿಂದ ಸ್ಥಿರ ದರದಲ್ಲಿ ಪರಿಷ್ಕರಿಸಲಾಗಿದೆ ಮತ್ತು ಖಾಸಗಿ ಬ್ಯಾಂಕ್ಗಳು ಸ್ಥಿರ ದೃಷ್ಟಿಕೋನ ಹೊಂದಿವೆ.
ಒಟ್ಟಾರೆ ಒತ್ತಡ ಸ್ವತ್ತು (ಒಟ್ಟಾರೆ ಅನುತ್ಪಾದಕ ಸ್ವತ್ತು (ಜಿಎನ್‌ಪಿಎ) ಪುನರ್ರಚನೆ) ಬ್ಯಾಂಕಿಂಗ್ ವ್ಯವಸ್ಥೆಗೆ ಶೇ 30ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಿದೆ. 2020-21ರ ಹಣಕಾಸಿನ ದ್ವಿತೀಯಾರ್ಧದಲ್ಲಿ ಚಿಲ್ಲರೆ ವಿಭಾಗದಡಿಯ ಹೆಚ್ಚಳವು ಸುಮಾರು 1.7 ಪಟ್ಟು ಏರಿಕೆಯಾಗಿದೆ.
ಕಳೆದ ಒಂಬತ್ತು ತಿಂಗಳು ಸಾಂಕ್ರಾಮಿಕ ರೋಗಕ್ಕೂ ಮುನ್ನ ಅಸ್ತಿತ್ವದಲ್ಲಿದ್ದ ಹಳೆಯ ಒತ್ತಡದ ಸ್ವತ್ತುಗಳಿಗಾಗಿ ಬ್ಯಾಂಕ್ಗಳು ತಮ್ಮ ನಿಬಂಧನೆಗಳು ಇನ್ನಷ್ಟು ಹೆಚ್ಚಾಗಲು ಅವಕಾಶ ನೀಡಿದಂತ್ತಾಗಿದೆ. 2021ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆ ಎನ್‌ಪಿಎಗಳಲ್ಲಿ ನಿಬಂಧನೆಗಳು ಸುಮಾರು ಶೇ 75-80ರಷ್ಟು ಹೆಚ್ಚಾಗಲಿವೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಕೋವಿಡ್ ಒತ್ತಡ ಹೀರಿಕೊಳ್ಳಲು ಬ್ಯಾಂಕ್ಗಳಿಗೆ ಸ್ಥಳಾವಕಾಶ ನೀಡುತ್ತದೆ ಎಂದು ರೇಟಿಂಗ್ ಏಜೆನ್ಸಿಯ ನಿರ್ದೇಶಕ (ಹಣಕಾಸು ಸಂಸ್ಥೆ) ಜಿಂದಾಲ್ ಹರಿಯಾ ಹೇಳಿದ್ದಾರೆ.
ಇದನ್ನೂ ಓದಿ: 2,397 ಕೋಟಿ ರೂ. ರಿಲಿಗೇರ್ ಹಗರಣ: ಮಾಜಿ ಸ್ವತಂತ್ರ ನಿರ್ದೇಶಕರ ಜಾಮೀನು ಅರ್ಜಿ ವಜಾ
ಸಾರ್ವಜನಿಕ ವಲಯದ ಬ್ಯಾಂಕ್ಗಳು (ಪಿಎಸ್‌ಬಿ) ತಮ್ಮ ಲಾಭ ಮತ್ತು ನಷ್ಟದ ಬ್ಯಾಲೆನ್ಸ್ ಶೀಟ್‌ಗಳನ್ನು ಷೇರು ಪ್ರೀಮಿಯಂ ಖಾತೆಯೊಂದಿಗೆ ಸರಿದೂಗಿಸಲು ಅನುವು ಮಾಡಿಕೊಡುವ ಅಕೌಂಟಿಂಗ್ ಮಾನದಂಡಗಳಲ್ಲಿ ಕಳೆದ ವರ್ಷದ ಬದಲಾವಣೆ ಜತೆಗೆ ದೊಡ್ಡ ಬ್ಯಾಂಕ್ಗಳು ಹೆಚ್ಚುವರಿ ಟೈರ್ ಒನ್ ಬಂಡವಾಳವನ್ನು ಸ್ವಂತವಾಗಿ ಸಂಗ್ರಹಿಸಲು ಸಾಧ್ಯವಾಗಿದೆ.
ಸಂಸ್ಥೆ ತನ್ನ ಸಾಲದ ಬೆಳವಣಿಗೆಯ ಅಂದಾಜುಗಳನ್ನು ಹಿಂದಿನ ಶೇ 1.8ಕ್ಕಿಂತ 2021ರ ಹಣಕಾಸು ವರ್ಷದಲ್ಲಿ ಶೇ 6.9ಕ್ಕೆ ಮತ್ತು 2022ರ ಹಣಕಾಸು ವರ್ಷದಲ್ಲಿ ಶೇ 8.9ಕ್ಕೆ ಪರಿಷ್ಕರಿಸಿದೆ. ಒಟ್ಟು ಬ್ಯಾಂಕ್ ಬುಕ್ ಶೇ 1.24ರಷ್ಟು ಹೆಚ್ಚುತ್ತಿರುವ ಎನ್‌ಪಿಎ ಅಡಿಯಲ್ಲಿದೆ. ಒಟ್ಟು ಬುಕ್ ಶೇ 1.75ರಷ್ಟು 2021ರ ಅಂತ್ಯದ ವೇಳೆಗೆ ಪುನರ್ರಚನೆ ಆಗಬಹುದು ಎಂದು ಹೇಳಿದೆ.