ಲಂಡನ್: 'ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ' ಅಂದ್ರೆ ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲು ಎಂಬ ಮಾತಿದೆ. ಈ ಮಾತನ್ನು ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ಅಕ್ಷರಶಃ ಪಾಲಿಸುತ್ತಿದ್ದಾರೆ. ಹೌದು, ತಮಿಳುನಾಡಿನ ಚೆನ್ನೈನಲ್ಲಿ ಹುಟ್ಟಿ, ಬೆಳೆದ ಗೂಗಲ್ ಸಿಇಒ ಸುಂದರ್ ಪಿಚೈ, ಭಾರತದ ಸಂಸ್ಕೃತಿ ನನ್ನಲ್ಲಿ ಆಳವಾಗಿ ಬೇರೂರಿದೆ ಎಂದಿದ್ದಾರೆ.
ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಗೂಗಲ್ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಪಿಚೈ, ನಾನು ಅಮೆರಿಕನ್ ಪ್ರಜೆಯಾದರೂ, ಭಾರತದ ಸಂಸ್ಕೃತಿ ನನ್ನಲ್ಲಿ ಬೇರೂರಿದೆ. ಭಾರತ ನನ್ನ ಅಸ್ತಿತ್ವದ ದೊಡ್ಡ ಭಾಗವಾಗಿದೆ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಪಿಚೈ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಚೀನಾದ ಕಣ್ಗಾವಲು ಆಧಾರಿತ ಇಂಟರ್ನೆಟ್, ಫ್ರೀ ಮತ್ತು ಮುಕ್ತ ಅಂತರ್ಜಾಲವನ್ನು ಆಕ್ರಮಣ ಮಾಡುತ್ತಿದೆ ಎಂದು ಪರೋಕ್ಷವಾಗಿ ಡ್ರ್ಯಾಗನ್ ರಾಷ್ಟ್ರದ ವಿರುದ್ಧ ಪಿಚೈ ವಾಗ್ದಾಳಿ ನಡೆಸಿದ್ರು. ತಮ್ಮ ಯಾವುದೇ ಪ್ರಮುಖ ಉತ್ಪನ್ನಗಳು ಮತ್ತು ಸೇವೆಗಳು ಚೀನಾದಲ್ಲಿ ಲಭ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ರು. ನಾವು ವಿಶ್ವದ ಅತಿದೊಡ್ಡ ತೆರಿಗೆದಾರರಲ್ಲಿ ಒಬ್ಬರಾಗಿದ್ದು, ಕಳೆದ ದಶಕದಲ್ಲಿ ಶೇಕಡಾ 20 ರಷ್ಟು ತೆರಿಗೆಯನ್ನು ನಾವು ಪಾವತಿಸಿದ್ದೇವೆ ಎಂದರು.
ಇದನ್ನೂ ಓದಿ:ಈ ದೇಶದಲ್ಲಿ ಕೋವಿಡ್ ಲಸಿಕೆ ಪಡೆದವರಿಗೆ ಸೆಕ್ಸ್ ಬ್ಯಾನ್: ಹೀಗೂ ಉಂಟಾ?
ನಮ್ಮ ಬಹುಪಾಲು ತೆರಿಗೆಯನ್ನು ಅಮೆರಿಕದಲ್ಲಿ ಪಾವತಿಸುತ್ತೇವೆ. ನಾವು ಅಲ್ಲಿಯೇ ವಾಸವಿರುವುದು ಹಾಗೂ ಎಲ್ಲಾ ಉದ್ಯಮಗಳನ್ನು ಅಮೆರಿಕದಲ್ಲೇ ಅಭಿವೃದ್ಧಿಪಡಿಸಲಾಗಿರುವುದರಿಂದ ಅಲ್ಲಿಗೇ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದೇವೆ. ಹೊಸ ತಂತ್ರಜ್ಞಾನ ಪರಿಶೀಲನೆಗಾಗಿ ತಾನು ನಿತ್ಯ ಫೋನ್ಗಳನ್ನು ಬದಲಾಯಿಸುತ್ತಲೇ ಇರುತ್ತೇನೆ ಎಂದು ವಿವರಿಸಿದ್ದಾರೆ.