ಲಂಡನ್ : ಭಾರತದ ಹೂಡಿಕೆದಾರರು ಇಂಗ್ಲೆಂಡ್ನಲ್ಲಿ 120 ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದು, 5,429 ಹೊಸ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ ಎಂದು ಯುಕೆ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
2019ರಲ್ಲಿ ಅಮೆರಿಕದ ಬಳಿಕ ವಿದೇಶಿ ನೇರ ಹೂಡಿಕೆಯಲ್ಲಿ (ಎಫ್‌ಡಿಐ) ಎರಡನೇ ಅತಿದೊಡ್ಡ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ಎಂದು ಇಂಗ್ಲೆಂಡ್ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.
2019-2020ರ ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆ (ಡಿಐಟಿ) ಆಂತರಿಕ ಹೂಡಿಕೆ ಅಂಕಿಅಂಶಗಳು ಭಾರತವು ತನ್ನ ಹಿಂದಿನ ಮೂರನೇ ಅತಿದೊಡ್ಡ ಸ್ಥಾನದಿಂದ ಮೇಲಕ್ಕೆ ಏರುತ್ತಿರುವುದು ಕಂಡು ಬಂದಿದೆ. 2018-2019ರಲ್ಲಿ ಇಂಗ್ಲೆಂಡ್ ಒಟ್ಟಾರೆ ಶೇ.4ರಷ್ಟು ಎಫ್‌ಡಿಐ ಹೆಚ್ಚಳಕ್ಕೆ ಭಾರತ ಕಾರಣವಾಗಿದೆ. 2019/2020 ಹಣಕಾಸು ವರ್ಷಗಳಲ್ಲಿ 1,852 ಹೊಸ ಆಂತರಿಕ ಹೂಡಿಕೆ ಯೋಜನೆಗಳಿವೆ.
462 ಯೋಜನೆಗಳು ಮತ್ತು 20,131 ಉದ್ಯೋಗಗಳನ್ನು ಸೃಜಿಸಿರುವ ಅಮೆರಿಕ, ಯುಕೆ ಎಫ್ಡಿಎನಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಭಾರತ, ಜರ್ಮನಿ, ಫ್ರಾನ್ಸ್, ಚೀನಾ ಮತ್ತು ಹಾಂಗ್ ಕಾಂಗ್ ಇವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ 72 ಯೋಜನೆಗಳನ್ನು ನೀಡಿದೆ.