ETV Bharat / business

ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸುವಾಗ ಈ ವಿಚಾರಗಳನ್ನು ನೆನಪಿಟ್ಟುಕೊಳ್ಳಿ - ಐಟಿ ರಿಟರ್ನ್ಸ್​ ಸಲ್ಲಿಕೆ ವೇಳೆ ಅನುಸರಿಸಬೇಕಾದ ನಿಯಮಗಳು

ನೀವು ಆದಾಯ ತೆರಿಗೆ ಪಾವತಿದಾರರಾದರೆ, ಹಿಂದಿನ ಆರ್ಥಿಕ ವರ್ಷದ ಐಟಿ ರಿಟರ್ನ್ಸ್ ಸಲ್ಲಿಕೆಗೆ ಕೇಂದ್ರ ಸರ್ಕಾರ ಗಡುವು ವಿಸ್ತರಿಸಿದ್ದು, ತೆರಿಗೆ ಪಾವತಿ ಮಾಡುವಾಗ ಗಮನಿಸಬೇಕಾದ ಅಂಶಗಳು ಇಲ್ಲಿವೆ.

Income tax: Basic points to ponder while filing IT returns
ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸುವಾಗ ಈ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
author img

By

Published : Dec 5, 2021, 7:41 AM IST

2020-21ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ವಿಸ್ತರಿಸಿದ್ದು, ನಿಗದಿಪಡಿಸಿದ ಸಮಯದೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯ.

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ ಅನ್ನು ನವೀಕರಿಸಲಾಗಿದ್ದು, ಇದೇ ವೆಬ್​ಸೈಟ್ ಮೂಲಕ ನೀವು ಐಟಿ ರಿಟರ್ನ್ಸ್​ ಸಲ್ಲಿಸಬೇಕಾಗುತ್ತದೆ. ನೀವು ವೆಬ್​ಸೈಟ್​ಗೆ ಭೇಟಿ ಕೊಟ್ಟರೆ, ನಿಮ್ಮ ಮಾಹಿತಿಯನ್ನು ಮೊದಲೇ ತುಂಬಲ್ಪಟ್ಟ ಪೇಜ್​ ಸಿದ್ಧವಾಗಿರುತ್ತದೆ. ಆ ವಿವರಗಳನ್ನು ಒಮ್ಮೆ ಪರಿಶೀಲಿಸಿ ಮತ್ತು ಅಗತ್ಯ ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ನೀವು ಮಾಡಬೇಕು. ತದನಂತರ ಇ-ಪರಿಶೀಲನೆ (e-Verifying) ನಡೆಸಿ, ಐಟಿ ರಿಟರ್ನ್ಸ್ ಪ್ರಕ್ರಿಯೆ ಪೂರ್ಣಗೊಳಿಸಿ.

ಒಂದು ವೇಳೆ ನಿಮ್ಮ ವಿವರ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಕಾಣಿಸದಿದ್ದರೆ?

ಕೆಲವೊಮ್ಮೆ ಇಂಥ ಸಮಸ್ಯೆಗಳು ಆದಾಯ ತೆರಿಗೆ ಪಾವತಿದಾರರಿಗೆ ಎದುರಾಗಬಹುದು. ಇದಕ್ಕೆ ಹಲವಾರು ಕಾರಣಗಳೂ ಇರಬಹುದು. ನಿಮ್ಮ ವಿವರಗಳನ್ನು ಸರಿಯಾಗಿ ನೀಡದಿರುವುದು, ಪ್ಯಾನ್ ಖಾತೆಯ (PAN Account) ವಿವರಗಳನ್ನು ನೀಡದಿರುವುದು ಅಥವಾ ತಪ್ಪಾಗಿ ನೀಡುವುದು, ಟಿಡಿಎಸ್ ಅಥವಾ ಟಿಸಿಎಸ್ ಸಲ್ಲಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಮಾಡುವ ತಪ್ಪುಗಳು, ತೆರಿಗೆ ಪಾವತಿ ಚಲನ್​ಗಳಲ್ಲಿ ತಪ್ಪು ಮಾಹಿತಿ.. ಈ ರೀತಿಯ ಕಾರಣಗಳಿಂದ ಆದಾಯ ತೆರಿಗೆ ವಿವರಗಳು ವೆಬ್​ಸೈಟ್​ನ ನಿಮ್ಮ ಪೇಜ್​ನಲ್ಲಿ ಕಾಣಿಸದೇ ಇರಬಹುದು. ಹೀಗಾದಾಗ,

ಅಡೆತಡೆಯಿಲ್ಲದೇ ಐಟಿ ರಿಟರ್ನ್ಸ್ ಸಲ್ಲಿಸಲು ಹೀಗೆ ಮಾಡಿ..

ನೀವು ಈ ಮೊದಲು ನಮೂದಿಸಿರುವ ಪ್ಯಾನ್ ಸಂಖ್ಯೆ ತಪ್ಪಾಗಿದ್ದರೆ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕು. ತಪ್ಪಾಗಿ ನಮೂದಿಸಲಾದ ಸರಿಪಡಿಸಲು ಪ್ಯಾನ್​ ತಿದ್ದುಪಡಿ ಹೇಳಿಕೆಯನ್ನು ಸಲ್ಲಿಸಬೇಕಾಗುತ್ತದೆ. ಈ ವೇಳೆ ಈಗಾಗಲೇ ತಪ್ಪಾಗಿ ನಮೂದಾಗಿರುವ ಪ್ಯಾನ್ ವಿವರಗಳನ್ನೂ ನೀಡಬೇಕಾಗುತ್ತದೆ.

ಟಿಡಿಎಸ್/ಟಿಸಿಎಸ್ ಮಾಡಿದ ವ್ಯಕ್ತಿಗಳು ಆದಾಯ ತೆರಿಗೆ ಇಲಾಖೆಗೆ ತೆರಿಗೆ ಜಮಾ ಮಾಡುವ ಮೊದಲು ಪ್ಯಾನ್ ವಿವರಗಳನ್ನು ನೀಡದಿದ್ದರೆ, ಈ ವೇಳೆ ನೀವು ಆ ವಿವರಗಳನ್ನು ನಮೂದಿಸಬೇಕಾಗುತ್ತದೆ. ಇದರ ತಿದ್ದುಪಡಿ ಹೇಳಿಕೆಯನ್ನೂ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಅಂತಿಮವಾಗಿ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ನಿಮ್ಮ ಖಾತೆಗೆ ಹೋಗಿ ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಮತ್ತೊಮ್ಮೆ ಪರಿಶೀಲಿಸಬೇಕಾಗುತ್ತದೆ.

ಇದನ್ನೂ ಓದಿ: Tips to Home Loan Management: ಗೃಹಸಾಲದ ಇಎಂಐ ಹೊರೆಯನ್ನು ಇಳಿಸಿಕೊಳ್ಳಲು ಇಲ್ಲಿವೆ ಟಿಪ್ಸ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.