ETV Bharat / business

ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಿ: ಬಜೆಟ್​ ಪೂರ್ವ ಸಮೀಕ್ಷೆಯಲ್ಲಿ ಕೇಳಿ ಬಂದ ಒತ್ತಾಯ

ಬಜೆಟ್ ಪೂರ್ವ ನಿರೀಕ್ಷೆಗಳ ಸಮೀಕ್ಷೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವಂತಹ ಬೇಡಿಕೆಗಳು ಕೇಳಿ ಬಂದಿವೆ. ಕೊರೊನಾ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

author img

By

Published : Jan 27, 2022, 7:06 AM IST

Incentivise investments in healthcare sector: Pre-Budget survey
ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಿ: ಬಜೆಟ್​ ಪೂರ್ವ ಸಮೀಕ್ಷೆಯಲ್ಲಿ ಕೇಳಿ ಬಂದ ಒತ್ತಾಯ

ನವದೆಹಲಿ: ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವಂತೆ ಹೆಚ್ಚಿನ ಬೇಡಿಕೆಗಳು ಬಜೆಟ್​ ಪೂರ್ವ ಸಮೀಕ್ಷೆಯಲ್ಲಿ ಕೇಳಿ ಬಂದಿವೆ. ಗ್ರಾಂಟ್ ಥಾರ್ನ್‌ಟನ್ ಭಾರತ್ ಸಮೀಕ್ಷೆಯ ಪ್ರಕಾರ, ಶೇ 58 ರಷ್ಟು ಜನ ಆರೋಗ್ಯ ಕ್ಷೇತ್ರ ಸುಧಾರಣೆ ಹಾಗೂ ಈ ವಿಭಾಗದಲ್ಲಿ ಹೆಚ್ಚಿನ ಹೂಡಿಕೆಯನ್ನು ಅಪೇಕ್ಷಿಸಿದ್ದಾರೆ.

ಗ್ರಾಮೀಣ ಆರೋಗ್ಯ ಮೂಲ ಸೌಕರ್ಯದಲ್ಲಿ ಭಾರಿ ಬದಲಾವಣೆ ಹಾಗೂ ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯ ಅಗತ್ಯತೆಯನ್ನು ಪ್ರತಿಪಾದಿಸಿದೆ.ಹಣಕಾಸಿನ ಪ್ರೋತ್ಸಾಹ ಮತ್ತು ಸಾರ್ವಜನಿಕ - ಖಾಸಗಿ ಪಾಲುದಾರಿಕೆ, ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಬೇಕಾದ ಅಗತ್ಯ ಇದೆ ಎಂಬುದನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 55ಕ್ಕೂ ಹೆಚ್ಚಿನ ಜನ ಒತ್ತಿ ಹೇಳಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ವೆಚ್ಚವಾಗಿ ಆರೋಗ್ಯ ಮೂಲಸೌಕರ್ಯಕ್ಕಾಗಿ ಹೆಚ್ಚಿನ ವೆಚ್ಚವನ್ನು ಮಾಡಬೇಕಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹೂಡಿಕೆಗೆ ಪ್ರೋತ್ಸಾಹ ನೀಡಿ ಆರೋಗ್ಯ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕರು ಪ್ರತಿಪಾದಿಸಿದ್ದಾರೆ.

ಅದಲ್ಲದೇ, ಶೇಕಡಾ 78 ಕ್ಕಿಂತ ಹೆಚ್ಚು ಜನರು ಜಿಡಿಪಿಯ ಶೇಕಡಾ 2 ಕ್ಕಿಂತ ಹೆಚ್ಚು ಪ್ರಮಾಣದ ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಆರೋಗ್ಯ ಸೇವೆಗಳಿಗೆ ಶೂನ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಸುಮಾರು 78 ಪ್ರತಿಶತದಷ್ಟು ಜನರು ಈ ಬೇಡಿಕೆಯನ್ನು ಪ್ರಮುಖವಾಗಿ ಇರಿಸಿದ್ದಾರೆ.

ಇದನ್ನು ಓದಿ: ಪಾಲಿಸಿಬಜಾರ್​, ನೈಕಾ ಷೇರುಗಳಿಗೆ ಭಾರಿ ನಷ್ಟ.. ಆದರೂ ಚೇತರಿಕೆ!!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.