ನವದೆಹಲಿ: 'ರಾಟನ್ ಟಿ' ಕಂಪನಿಗೆ ('Rotten T') ಏರ್ ಇಂಡಿಯಾ ಕಂಪನಿಯನ್ನು ಮಾರಾಟ ಮಾಡಿದ್ದೇ ಆದಲ್ಲಿ ಕೇಂದ್ರ ಸರ್ಕಾರದ ಮುಖ್ಯ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಹಾಗೂ ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಏರ್ ಏಷ್ಯಾಕ್ಕಾಗಿ ಅಕ್ರಮ ಹಣ ವರ್ಗಾವಣೆ, ದುಬೈನಲ್ಲಿ ಭಯೋತ್ಪಾದಕರಿಗೆ ಹಣ ಪಾವತಿ, ಎಫ್ಐಪಿಬಿ ಲೈಸೆನ್ಸ್ ಪಡೆಯಲು ಏರ್ ಏಷ್ಯಾ, ವಿಸ್ತಾರಾ ಮತ್ತು ನೀರಾ ರಾಡಿಯಾ ಟೇಪ್‌ಗಳ ಮೂಲಕ ವಂಚನೆ ನಡೆಸಿದ ಟಾಟಾ ಸಮೂಹದ ಉದ್ಯಮದ ಕುರಿತು ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ನಡೆಸುತ್ತಿದೆ. ಇಂಥ ರಾಟನ್ ಟಿ ಕಂಪನಿಗೆ ಏರ್ ಇಂಡಿಯಾ ಕಂಪನಿಯನ್ನು ಮಾರಲು ಮುಂದಾದರೆ, ಆಡಳಿತದಲ್ಲಿರುವ ದೊಡ್ಡವರ ವಿರುದ್ಧ ಕ್ರಿಮಿನಲ್ ಕೇಸ್ ಫೈಲ್ ಮಾಡುತ್ತೇನೆ ಸ್ವಾಮಿ ಟ್ವೀಟ್ನಲ್ಲಿ ಹೇಳಿದ್ದಾರೆ.
-
If Rotten T gets Air India despite ED investigation on money laundering by Tatas for Air Asia, payment in Dubai to a terrorist, FIPB fraud in getting licence for Joint venture with Air Asia and Vistara& Niira Radia tapes I will file a criminal complaint against Goverment bigwigs
— Subramanian Swamy (@Swamy39) August 14, 2020 " class="align-text-top noRightClick twitterSection" data="
">If Rotten T gets Air India despite ED investigation on money laundering by Tatas for Air Asia, payment in Dubai to a terrorist, FIPB fraud in getting licence for Joint venture with Air Asia and Vistara& Niira Radia tapes I will file a criminal complaint against Goverment bigwigs
— Subramanian Swamy (@Swamy39) August 14, 2020If Rotten T gets Air India despite ED investigation on money laundering by Tatas for Air Asia, payment in Dubai to a terrorist, FIPB fraud in getting licence for Joint venture with Air Asia and Vistara& Niira Radia tapes I will file a criminal complaint against Goverment bigwigs
— Subramanian Swamy (@Swamy39) August 14, 2020
ಸ್ವಾಮಿ ಅವರು ಟಾಟಾ ಸಮೂಹವನ್ನು "ರಾಟನ್ ಟಿ" ಎಂದು ಕರೆದಿರಬಹುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸದಾ ವಿವಾದಾತ್ಮಕ ವಿಷಯಗಳನ್ನು ಪ್ರಚೋದಿಸಲು ಹೆಸರುವಾಸಿಯಾಗಿರುವ ಸ್ವಾಮಿ, ಹಲವು ಪ್ರಮುಖ ಕಾರ್ಪೊರೇಟ್ ಸಂಘರ್ಷ ಮತ್ತು ವಿವಾದಗಳಲ್ಲಿ ದೂರುದಾರರಾಗಿದ್ದಾರೆ. ಇನ್ನು ರಾಟನ್ ಟಿ ಎಂದರೆ ಕೆಟ್ಟು ಕೆರ ಹಿಡಿದ ಟಾಟಾ ಕಂಪನಿ ಎಂದು ಸಂದರ್ಭೋಚಿತವಾಗಿ ಅರ್ಥೈಸಬಹುದು. ಏನೇ ಆದರೂ ಈ ರಾಟನ್ ಟಿ ಶಬ್ದದ ಅರ್ಥದ ಸರಿಯಾದ ಅರ್ಥವನ್ನು ಸ್ವಾಮಿಯೇ ಹೇಳಬೇಕು.
ವರದಿಗಳ ಪ್ರಕಾರ, ಟಾಟಾ ಸಮೂಹವು ರಾಷ್ಟ್ರೀಯ ಏರ್ಲೈನ್ಸ್ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂದು ತಿಳಿದು ಬಂದಿದೆ. ಆಗಸ್ಟ್ 31ರ ನಂತರ ಬಿಡ್ಡಿಂಗ್ ದಿನಾಂಕ ಮುಂದೂಡುವುದಿಲ್ಲ ಎಂದು ಸರ್ಕಾರ ಪದೇ ಪದೇ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.