ನವದೆಹಲಿ: ಭಾರತದಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ಪ್ರಕರಣಗಳ ಹಾಗೂ ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.
ಏಷ್ಯಾದ ಅತಿ ದೊಡ್ಡ ಕೊಳಗೇರಿ (ಸ್ಲಮ್) ಪ್ರದೇಶವಾದ ಮಹಾರಾಷ್ಟ್ರ ಮುಂಬೈನ ಧಾರಾವಿಯಲ್ಲಿ ಸೋಂಕಿತರು ಹೆಚ್ಚಿದ್ದಾರೆ. ಏಪ್ರಿಲ್ 1 ರಂದು ಮೊದಲ ಕೋವಿಡ್ ಕೇಸ್ ಪತ್ತೆಯಾಗಿದ್ದ ಧಾರಾವಿಯಲ್ಲಿ ಈವರೆಗೆ 1924 ಪ್ರಕರಣಗಳು ಹಾಗೂ 71 ಸಾವು ವರದಿಯಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸಿದೆ.
-
If Dharavi wins, India wins... They deserve our cheers...and prayers https://t.co/8rlmXUR2gK
— anand mahindra (@anandmahindra) June 8, 2020 " class="align-text-top noRightClick twitterSection" data="
">If Dharavi wins, India wins... They deserve our cheers...and prayers https://t.co/8rlmXUR2gK
— anand mahindra (@anandmahindra) June 8, 2020If Dharavi wins, India wins... They deserve our cheers...and prayers https://t.co/8rlmXUR2gK
— anand mahindra (@anandmahindra) June 8, 2020
ಈ ಕುರಿತು ಟ್ವೀಟ್ ಮಾಡಿರುವ ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ಧಾರಾವಿ ಗೆದ್ದರೆ ದೇಶವೇ ಜಯಶಾಲಿಯಾದಂತೆ. ಕೋವಿಡ್ನಿಂದ ಧಾರಾವಿ ಮುಕ್ತವಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಧಾರಾವಿಯಲ್ಲಿ ಸೋಮವಾರ ಕೇವಲ 12 ಕೇಸ್ ಪತ್ತೆಯಾಗಿದ್ದು, ಜೂನ್ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ 9 ದಿನಗಳಿಂದ ಒಂದೂ ಸಾವು ವರದಿಯಾಗಿಲ್ಲ ಎಂದು ನೆಟ್ಟಿಗರೊಬ್ಬರು ರಿಟ್ವೀಟ್ ಮಾಡುವ ಮೂಲಕ ಮಹೀಂದ್ರರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.