ETV Bharat / business

Mutual Funds: ಮ್ಯೂಚುಯಲ್ ಫಂಡ್​ನಲ್ಲಿ ಹೂಡಿಕೆಯ ಮಾರ್ಗಗಳು

author img

By

Published : Jan 6, 2022, 1:27 PM IST

ನೀವು ಹೂಡಿಕೆ ಮಾಡಿರುವ ಕೆಲವೊಂದು ಯೋಜನೆಗಳಲ್ಲಿ ಹೂಡಿರುವ ಹಣಕ್ಕೆ 'ಪ್ರತಿಫಲ' ಸಂತೃಪ್ತಿಯಿಂದ ಕೂಡಿರದೇ ಇದ್ದರೆ ಹಣ ಹಿಂಪಡೆಯುವ ನಿರ್ಧಾರ ಅತ್ಯಂತ ಒಳ್ಳೆಯದಾಗಿರುತ್ತದೆ. ಇದಕ್ಕೆ ಕನಿಷ್ಠ 12 ತಿಂಗಳ ಕಾಲ ಯೋಜನೆಯನ್ನು ಅವಲೋಕನ ಮಾಡಬೇಕಾಗುತ್ತದೆ.

What are the different ways of investing in mutual funds?
Mutual Funds: ಮ್ಯೂಚುಯಲ್ ಫಂಡ್​ನಲ್ಲಿ ಹೂಡಿಕೆಯ ಮಾರ್ಗಗಳು

ಹೈದರಾಬಾದ್: ಷೇರುಪೇಟೆಯಲ್ಲಿ ಆಗಾಗ ಏರಿಳಿತಗಳು ಕಂಡುಬರುತ್ತವೆ. ಈ ವೇಳೆ ಹೂಡಿಕೆದಾರರು ಹೆಚ್ಚಿನ ಬೆಲೆಗೆ ತಮ್ಮ ಷೇರುಗಳನ್ನು ಮಾರಾಟ ಮಾಡಲು ಬಯಸುತ್ತಾರೆ ಅಥವಾ ಕೆಲವೊಮ್ಮೆ ಮರುಹೂಡಿಕೆ ಮಾಡಲು ಮುಂದಾಗುತ್ತಾರೆ. ಆದರೆ ಹೂಡಿಕೆ ಮಾಡಲು ಅಥವಾ ಹಿಂಪಡೆಯಲು 'ಇದೇ ಸರಿಯಾದ ಸಮಯ' ಎಂದು ಹೇಳಿಕೊಳ್ಳುವಂತಹ ಸ್ಥಿತಿ ಇರುವುದೇ ಇಲ್ಲ. ಕೆಲವು ಸಂದರ್ಭಗಳಲ್ಲಿ ಹೂಡಿಕೆಯನ್ನು ಹಿಂಪಡೆಯಬೇಕಾಗುತ್ತದೆ. ಕಾಲ ಕಾಲಕ್ಕೆ ಹೂಡಿಕೆ ಮಾಡುವ ಮ್ಯೂಚುಯಲ್ ಫಂಡ್​ಗಳ ವಿಚಾರದಲ್ಲಿ ಇದು ಅಪ್ಪಟ ಸತ್ಯ.

Mutual Funds investment plans: ಮ್ಯೂಚುಯಲ್ ಫಂಡ್​ಗಳ ವಿಚಾರದಲ್ಲಿ SIP ಎಂಬ ವ್ಯವಸ್ಥೆಯಿದೆ. SIP ಅಂದರೆ Systematic Investment Plan(ಯೋಜನಾಬದ್ಧ ಹೂಡಿಕೆ) ಎಂದರ್ಥ ಕನ್ನಡದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ ಎಂದು ಕರೆಯಲಾಗುತ್ತದೆ. ಇಲ್ಲಿನ ನಿಯಮಿತವಾಗಿ ಅಂದರೆ ಕಾಲಕಾಲಕ್ಕೆ ಸಣ್ಣ ಮೊತ್ತವನ್ನು ಮ್ಯೂಚುಯಲ್ ಫಂಡ್​​ನಲ್ಲಿ ಹೂಡಿಕೆ ಮಾಡಬಹುದಾಗಿದೆ.

ಸಣ್ಣ ಮೊತ್ತವಾದ ಕಾರಣ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಏರಿಳಿತವಿದ್ದರೂ ಕೂಡಾ, ನೀವು ಹೂಡಿಕೆ ಮಾಡಬಹುದು. ಒಂದು ವೇಳೆ ನಿಮಗೆ ಹಣ ಬೇಕಾದರೆ, ಆ ಹಣವನ್ನು ಈಕ್ವಿಟಿ ಫಂಡ್​ಗಳಿಂದ ತೆಗೆದುಕೊಳ್ಳಬಹುದು. ಒಮ್ಮೊಮ್ಮೆ ಹಣವನ್ನು ಲಿಕ್ವಿಡ್ ಫಂಡ್​ಗಳಾಗಿ ಪರಿವರ್ತನೆ ಮಾಡಬಹುದು ಅಥವಾ ಬ್ಯಾಂಕಿನಲ್ಲಿ ಫ್ಲೆಕ್ಸಿ ಠೇವಣಿಯನ್ನಾಗಿ ಆ ಹಣವನ್ನು ಪರಿವರ್ತನೆ ಮಾಡಿಕೊಳ್ಳಬಹುದು.

ಒಂದು ವೇಳೆ ನಿಮಗೆ ಮ್ಯೂಚುಯಲ್ ಫಂಡ್​ಗಳಿಂದ ಹಣ ಬೇಕಾದರೆ ಡಿವಿಡೆಂಟ್​ ಆಗಿ ಪರಿವರ್ತಿಸಿ ಪೂರ್ಣ ಹಣ ತೆಗೆದುಕೊಳ್ಳುತ್ತೀರಿ. ಅದರ ಬದಲಿಗೆ ನಿಯಮಿತವಾಗಿ ಆಗಾಗ ಸ್ವಲ್ಪ ಸ್ವಲ್ಪವೇ ಹಣ ಪಡೆದುಕೊಂಡರೆ, ತೆರಿಗೆ ಹೊರೆ ಕಡಿಮೆ ಮಾಡಿಕೊಳ್ಳಬಹುದು.

ನೀವು ಎಷ್ಟರ ಮಟ್ಟಿಗೆ ಅಪಾಯದ ಸ್ಥಿತಿ ಎದುರಿಸಲು ಸಿದ್ಧರಿದ್ದೀರಿ ಎಂಬುದನ್ನು ಅವಲಂಬಿಸಿರುತ್ತದೆ. ಕನಿಷ್ಠ ಸುಮಾರು 12 ತಿಂಗಳವರೆಗೆ ಒಂದು ಯೋಜನೆಯ ಮೇಲೆ ಗಮನ ಕೇಂದ್ರೀಕರಿಸಿ, ಅದರಿಂದ ಬರುವ ಲಾಭ, ವೆಚ್ಚಗಳು ಮುಂತಾದವುಗಳನ್ನು ಅವಲೋಕಿಸಬೇಕಾಗುತ್ತದೆ. ಒಂದು ವೇಳೆ ನೀವು ಯೋಜನೆಯಲ್ಲಿ ಹೂಡಿರುವ ಹಣಕ್ಕೆ 'ಪ್ರತಿಫಲ' ಸಂತೃಪ್ತಿಯಿಂದ ಕೂಡಿರದೇ ಇದ್ದರೆ ಹಣವನ್ನು ಹಿಂಪಡೆಯುವ ನಿರ್ಧಾರ ಅತ್ಯಂತ ಒಳ್ಳೆಯದಾಗಿರುತ್ತದೆ.

ನೀವು ಹೂಡಿಕೆ ಮಾಡಿರುವ ಕೆಲವೊಂದು ಯೋಜನೆಗಳು ಎರಡ್ಮೂರು ವರ್ಷವಾದರೂ ಸಂತೃಪ್ತಿ ನೀಡುವಷ್ಟು 'ಫಲ' ಕೊಡೋದೇ ಇಲ್ಲ ಅನ್ನಿಸಿ ಬಿಡುತ್ತದೆ. ಆಗ ತಕ್ಷಣ ಆ ಹೂಡಿಕೆಯನ್ನು ಹಿಂಪಡೆಯುವ ನಿರ್ಧಾರ ಮಾಡಬೇಡಿ. ಬದಲಿಗೆ ಬೇರೆ ಬೇರೆ ಹಣದ ಮೊತ್ತಗಳಲ್ಲಿ ಆ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಗಮನವಿಟ್ಟು ನೋಡಿ. ಆಗ ನಿಮಗೆ ಬೇರೆ ಬೇರೆ ವಿಚಾರಗಳು ಗೊತ್ತಾಗುತ್ತವೆ.

ಆಗಲೂ ನಿಮಗೆ ಅಸಮಾಧಾನವಿದ್ದರೆ, ಹೂಡಿಕೆ ಹಿಂಪಡೆಯಬಹುದು. ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ನಿಮ್ಮ ಈಕ್ವಿಟಿ ಹೂಡಿಕೆಯ ಮೌಲ್ಯವು ಹೆಚ್ಚಾದರೆ, ಅದನ್ನು ನೀವು ಒಂದು ಮಟ್ಟಕ್ಕೆ ಅಂದರೆ ನೀವು ಯೋಚಿಸಿದ ಅನುಪಾತಕ್ಕೆ ಹೊಂದಿಕೆ ಮಾಡಬೇಕಾಗುತ್ತದೆ. ತುರ್ತಾಗಿ ನಿಮಗೆ ಹಣ ಬೇಕಾದರೆ ಕೊನೆಯ ಮಾರ್ಗವಾಗಿ ನೀವು ಮ್ಯೂಚುವಲ್ ಫಂಡ್‌ಗಳಿಂದ ಅಗತ್ಯವಾದ ಮೊತ್ತವನ್ನು ಹಿಂಪಡೆಯಬಹುದು ಅಥವಾ ಅಗತ್ಯವಿರುವಷ್ಟು ಹಣವನ್ನು ಹಿಂಪಡೆಯಬಹುದು.

ಇದನ್ನೂ ಓದಿ: ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಆದಾಯ?.. ಡಿಜಿಟಲ್ ಗೋಲ್ಡ್​ ಅಪಾಯಕಾರಿಯೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.