ETV Bharat / business

ಭಾರತದಲ್ಲಿ 10 ವರ್ಷದಲ್ಲಿ ಆಗದ್ದನ್ನು ಒಂದು ವರ್ಷದಲ್ಲಿ ಬದಲಾಯಿಸಿದ ಕೊರೊನಾ & ಲಾಕ್​ಡೌನ್! - ಟಿವಿ ಬೆಲೆ

ಕೋವಿಡ್​ ಪ್ರೇರಿತ ಲಾಕ್​ಡೌನ್​ ಡಿಜಿಟಲ್ ಉದ್ಯಮವನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಾರ್ಪಡಿಸಿದೆ. ಸ್ಮಾರ್ಟ್​ಫೋನ್ ಮತ್ತು ಲ್ಯಾಪ್‌ಟಾಪ್ ತಯಾರಕರು ಬೇಡಿಕೆ ಉತ್ತುಂಗವನ್ನು ಕಂಡುಕೊಂಡರು. ಸುಮಾರು ಹತ್ತು ವರ್ಷ ತೆಗೆದುಕೊಳ್ಳುತ್ತಿದ್ದ ಡಿಜಿಟಲ್ ರೂಪಾಂತರ ಕೇವಲ ಒಂದು ವರ್ಷದಲ್ಲಿ ಬದಲಾಯಿತು. ಲಾಕ್‌ಡೌನ್‌ನ ವಾರ್ಷಿಕೋತ್ಸವದ ಒಂದು ವರ್ಷದಂದು, ಟೆಕ್ ಉದ್ಯಮವು ಹೇಗೆ ಬದಲಾಯಿತು ಮತ್ತು ಹೇಗೆಲ್ಲಾ ವಿಕಸನಗೊಂಡಿದೆ ಎಂಬುದರ ವಿವರ ಇಲ್ಲಿದೆ.

Tech Evolved During Covid
Tech Evolved During Covid
author img

By

Published : Mar 25, 2021, 3:35 PM IST

ಕೋವಿಡ್‌ಪ್ರೇರಿತ ಲಾಕ್‌ಡೌನ್‌ನಿಂದ ವರ್ಷ ಕಳೆದರೂ ಅನೇಕ ಕೈಗಾರಿಕೆಗಳು ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಹೊರಬರಲು ಹೆಣಗಾಡುತ್ತಿವೆ. ಮತ್ತೊಂದೆಡೆ ಇದೇ ವೈರಸ್​​ ಡಿಜಿಟಲ್ ಉದ್ಯಮವನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಾರ್ಪಡಿಸಿದೆ. ಸ್ಮಾರ್ಟ್​ಫೋನ್ ಮತ್ತು ಲ್ಯಾಪ್‌ಟಾಪ್ ತಯಾರಕರು ಬೇಡಿಕೆ ಉತ್ತಂಗವನ್ನು ಕಂಡುಕೊಂಡಿದ್ದಾರೆ. ಅದರಲ್ಲೂ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಷನ್​ಗಳು ಕೇಂದ್ರ ಸ್ಥಾನ ಪಡೆದುಕೊಂಡವು.

ಸುಮಾರು ಹತ್ತು ವರ್ಷ ತೆಗೆದುಕೊಳ್ಳುತ್ತಿದ್ದ ಡಿಜಿಟಲ್ ರೂಪಾಂತರ ಕೇವಲ ಒಂದು ವರ್ಷದಲ್ಲಿ ಬದಲಾಯಿತು. ನಾವೆಲ್ಲರೂ ಊಹಿಸಿದ್ದಕ್ಕಿಂತ ದೊಡ್ಡಮಟ್ಟದಲ್ಲಿ 2020ರ ಕ್ಯಾಲೆಂಡರ್​ ವರ್ಷ ತಂತ್ರಜ್ಞಾನ ಉದ್ಯಮವನ್ನು ಬದಲಾಯಿಸಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಲಾಕ್‌ಡೌನ್‌ನ ವಾರ್ಷಿಕೋತ್ಸವದ ಒಂದು ವರ್ಷದಂದು, ಟೆಕ್ ಉದ್ಯಮವು ಹೇಗೆ ಬದಲಾಯಿತು ಮತ್ತು ಹೇಗೆಲ್ಲಾ ವಿಕಸನಗೊಂಡಿದೆ ಎಂಬುದನ್ನು ನೋಡೋಣ.

ಟೆಲಿವಿಷನ್ ಬೆಲೆ ಜಿಗಿತ

ಭಾರತದಲ್ಲಿ ಟೆಲಿವಿಷನ್ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಮುಂದಿನ ಎರಡು ತ್ರೈಮಾಸಿಕಗಳಲ್ಲಿ ಇದು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಓಪಮ್​ ಸೆಲ್​ ಫಲಕಗಳ ಕೊರತೆಯು ಟಿವಿ ಉತ್ಪಾದನಾ ವೆಚ್ಚದ ಶೇ 70ರಷ್ಟಿದೆ. ಟಿವಿ ಖರೀದಿಸಲು ಎದುರು ನೋಡುತ್ತಿರುವವರು ತಕ್ಷಣವೇ ಖರೀದಿಸಿ ಅಥವಾ ಬೆಲೆ ಸ್ಥಿರತೆಯ ನಿರೀಕ್ಷೆ ಇರಿಸಿಕೊಂಡವರು ಡಿಸೆಂಬರ್​​ವರೆಗೆ ಕಾಯಿರಿ.

ಸ್ಮಾರ್ಟ್​ಫೋನ್​ಗಳ ಬಿಡುಗಡೆ ವಿಳಂಬ

ಆ್ಯಪಲ್​ನಂತಹ ಪ್ರಖ್ಯಾತ ಸ್ಮಾರ್ಟ್​ಫೋನ್​ ಬ್ರಾಂಡ್​ಗಳು ನಿರೀಕ್ಷಿತ ಉತ್ಪಾದನೆಗೆ ತಕ್ಕಂತೆ ಗುರಿ ತಲುಪಲು ಸಾಧ್ಯವಾಗದ ಕಾರಣ, ಅದರ ಐಫೋನ್ 12 ಬಿಡುಗಡೆ ವಿಳಂಬವಾಯಿತು. ಗೂಗಲ್, ಕ್ಸಿಯೋಮಿ ಮತ್ತು ಇತರ ಹಲವು ಸಂಸ್ಥೆಗಳು ಉತ್ಪಾದನೆ ಮತ್ತು ಪೂರೈಕೆ ಸರಪಳಿ ಸಂಬಂಧಿತ ಸಮಸ್ಯೆಗಳನ್ನು ಎದುರಿಸಿದ್ದವು. ಇದರಿಂದಾಗಿ ಗ್ಯಾಜೆಟ್​ಗಳು ನಿರೀಕ್ಷಿತ ಸಮಯಕ್ಕಿಂತ ತಡವಾಗಿ ಬಂದವು.
ಇದನ್ನೂ ಓದಿ: 'ಪುರುಷರಿಂದ ಪುರುಷರಿಗಾಗಿ ಇದೆ': ಸೇನೆಯಲ್ಲಿರುವ ಮಹಿಳಾ ನಿಯಮಗಳಿಗೆ ಸುಪ್ರೀಂ ಗರಂ

ಮತ್ತೊಂದೆಡೆ ರೆಡ್‌ಮಿ ನೋಟ್ 10 ಪ್ರೊ ಮತ್ತು ರಿಯಲ್‌ಮಿ ಎಕ್ಸ್ 7 ಸರಣಿಯಂತಹ ಬ್ರಾಂಡ್‌ಗಳು ಈಗಾಗಲೇ ಮಾರಾಟವಾಗುತ್ತಿವೆ. ಮಾರುಕಟ್ಟೆಯು ಸ್ಥಿರಗೊಳ್ಳಲು ಪ್ರಾರಂಭಿಸಿದೆ. ಇದಲ್ಲದೆ, ಆ್ಯಪಲ್‌ನ ಐಫೋನ್‌ಗಳು ಹಾಗೂ ಸ್ಯಾಮ್‌ಸಂಗ್‌ನ ಮಡಚಬಹುದಾದ ಫೋನ್‌ಗಳು ವರ್ಷದ ದ್ವಿತೀಯಾರ್ಧದಲ್ಲಿ ಬರುವ ನಿರೀಕ್ಷೆಯಿದೆ.

ಅಗ್ಗದ ಐಫೋನ್‌ ಲಭ್ಯತೆ:

ಐಫೋನ್‌ಗಳ ಉತ್ಪಾದನೆಯಲ್ಲಿನ ವಿಳಂಬ, ಐಫೋನ್ 12 ಘೋಷಣೆಯ ನಂತರ ಕಂಪನಿಯ ಹಿಂದಿನ ಉತ್ಪನ್ನಗಳು ಇನ್ನಷ್ಟು ಅಗ್ಗವಾದವು. ಇದರಿಂದಾಗಿ ಕಂಪನಿಯು ಭಾರತದಲ್ಲಿ ಮಾರುಕಟ್ಟೆಯಲ್ಲಿ ಸಿಂಹ ಪಾಲು ಪಡೆದುಕೊಂಡಿದೆ. ಆ್ಯಪಲ್ ಉತ್ಪನ್ನಗಳನ್ನು ಖರೀದಿಸಲು ಎದುರು ನೋಡುತ್ತಿರುವ ಭಾರತೀಯ ಖರೀದಿದಾರರಿಗೆ ಇದು ಒಂದು ಒಳ್ಳೆಯ ಸುದ್ದಿ. ಈಗಾಗಲೇ, ಆ್ಯಪಲ್​ 2020 ಐಫೋನ್ ಎಸ್ಇ ಆವೃತ್ತಿ ಮತ್ತು ಐಫೋನ್ 11 ಭಾರತದಲ್ಲಿ ಜನಪ್ರಿಯವಾಗಿವೆ. ಇದರಿಂದಾಗಿ ಆ್ಯಪಲ್ ತನ್ನ ಮಾರುಕಟ್ಟೆ ಪಾಲು ದ್ವಿಗುಣಗೊಳಿಸುತ್ತದೆ.

ಸ್ಯಾಮ್‌ಸಂಗ್ ನಂಬರ್ ಒನ್ ಇನ್ ರನ್ನಿಂಗ್ ರೇಸ್​:

ಆ್ಯಪಲ್ ಎದುರಿಸುತ್ತಿರುವ ವಿಳಂಬವು ಸ್ಯಾಮ್‌ಸಂಗ್​ಗೆ ತನ್ನ ಉತ್ಪನ್ನಗಳ ಬಿಡುಗಡೆಯು ನಿಗದಿಗಿಂತ ಮುಂದಕ್ಕೆ ತಳ್ಳಲು ಅವಕಾಶ ಮಾಡಿಕೊಟ್ಟಿತು. ಇದರ ಫಲವಾಗಿ, ಹೊಸ ಗ್ಯಾಲಕ್ಸಿ ಎಸ್ 21 ಸರಣಿಯನ್ನು ಜನವರಿಯಲ್ಲಿ ಬಿಡುಗಡೆ ಮಾಡಿತು. ಅದರ ವೇಳಾಪಟ್ಟಿಗಿಂತ ಬಹಳ ಮುಂದಿದೆ. ಇದರಿಂದಾಗಿ ದಕ್ಷಿಣ ಕೊರಿಯಾದ ಎಂಎನ್‌ಸಿಗೆ ದೊಡ್ಡ ಮುನ್ನಡೆ ದೊರೆಯಿತು. ಸ್ಯಾಮ್​ಸಂಗ್ ಪ್ರಾರಂಭಿಸಿದ ಉತ್ಪನ್ನಗಳು ಮೊಬೈಲ್ ವರ್ಲ್ಡ್ ಕಾಂಗ್ರೆಸ್​ಗೆ (ಎಂಡಬ್ಲ್ಯುಸಿ) ಮುಂಚಿತವಾಗಿ ಮಾರ್ಚ್​​ನಲ್ಲಿ ಬರುತ್ತಿದ್ದವು. ಸ್ಯಾಮ್‌ಸಂಗ್ ಈ ವರ್ಷ ಗ್ಯಾಲಕ್ಸಿ ಝ್ಯಡ್ ಫ್ಲಿಪ್ ಮತ್ತು ಗ್ಯಾಲಕ್ಸಿ ಝ್ಯಡ್ ಫೋಲ್ಡ್ ಸ್ಮಾರ್ಟ್‌ಫೋನ್‌ಗಳಂತಹ ಹೊಸ ಮಾಡಲ್​ಗಳನ್ನು ಪರಿಚಯಿಸುತ್ತಿದೆ.

ಸ್ಮಾರ್ಟ್ ವಾಚ್‌ಗಳಿಗೆ ಸ್ಮಾರ್ಟ್‌ಬ್ಯಾಂಡ್‌ಗಳು:

ಭಾರತದಲ್ಲಿ ಕೋವಿಡ್ ಪ್ರೇರಿತ ಲಾಕ್‌ಡೌನ್‌ಗೂ ಮುನ್ನ ವಾರ್ಷಿಕವಾಗಿ ಲಕ್ಷಾಂತರ ಫಿಟ್‌ನೆಸ್ ಬ್ಯಾಂಡ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಸ್ಮಾರ್ಟ್​ಬ್ಯಾಂಡ್ ಮಾರುಕಟ್ಟೆ ಪ್ರವರ್ಧಮಾನಕ್ಕೆ ಬಂದಿತ್ತು. ಈಗ ಜನರು ಸ್ಮಾರ್ಟ್ ವಾಚ್‌ಗಳತ್ತ ಸಾಗುತ್ತಿದ್ದು, ಕ್ಷಿಯೋಮಿ ಮತ್ತು ರಿಯಲ್‌ಮಿ ಅಗ್ಗದ ದರದಲ್ಲಿ ಒದಗಿಸುತ್ತಿದೆ. ಈ ದಿನಗಳಲ್ಲಿ ಸ್ಮಾರ್ಟ್ ವಾಚ್ ಅನ್ನು 4000 ರೂ.ಗೆ ಕಡಿಮೆ ದರಕ್ಕೆ ಖರೀದಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.