ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಏಪ್ರಿಲ್-ಜೂನ್ ಅವಧಿಯಲ್ಲಿ ವಸತಿ ಮಾರಾಟವು ಶೇ 67ರಷ್ಟು ಕುಸಿದು 21,294ಕ್ಕೆ ತಲುಪಿದೆ ಎಂದು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಪ್ರೊಪೆಕ್ವಿಟಿ ತಿಳಿಸಿದೆ.
ಪ್ರಾಪ್ ಎಕ್ವಿಟಿಯ ಪ್ರಕಾರ, 2020ರ ಏಪ್ರಿಲ್-ಜೂನ್ ಅವಧಿಯಲ್ಲಿ ಒಟ್ಟು ವಸತಿ ಮಾರಾಟ 21,294 ಯುನಿಟ್ ಆಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 64,378 ಯುನಿಟ್ಗಳಿಂದ ಶೇ 67ರಷ್ಟು ಕಡಿಮೆಯಾಗಿದೆ. ನೋಯ್ಡಾ ಹೊರತುಪಡಿಸಿ ಉಳಿದ ಎಲ್ಲಾ ಎಂಟು ನಗರಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 1,707 ಯುನಿಟ್‌ಗಳಿಗೆ ಹೋಲಿಸಿದರೆ ಗುರುಗ್ರಾಮ್ 79 ಪ್ರತಿಶತ ಕುಸಿದು 361 ಯೂನಿಟ್ಗಳಿಗೆ ಇಳಿದಿದೆ.
ಚೆನ್ನೈ ಮತ್ತು ಹೈದರಾಬಾದ್ನಲ್ಲಿನ ವಸತಿ ಮಾರಾಟವು ಕ್ರಮವಾಗಿ 996 ಮತ್ತು 1,522 ಯುನಿಟ್ಗಳಲ್ಲಿದ್ದು, ಶೇ 74ರಷ್ಟು ಕುಸಿದಿದೆ. ಬೆಂಗಳೂರಿನಲ್ಲಿ 10,583 ಯುನಿಟ್ಗಳಿಂದ 2,818 ತಲುಪಿದ್ದು, ಶೇ 73ರಷ್ಟು ಕುಸಿತ ಕಂಡುಬಂದಿದೆ. ಕೋಲ್ಕತ್ತಾದಲ್ಲಿ 4,152 ಯುನಿಟ್ಗಳಿಂದ 1,046 ಯುನಿಟ್‌ಗಳಿಗೆ ಕ್ಷೀಣಿಸಿ ಶೇ 75ರಷ್ಟು ಇಳಿಕೆಯಾಗಿದೆ.
ಮುಂಬೈನಲ್ಲಿನ ವಸತಿ ಆಸ್ತಿಗಳ ಮಾರಾಟವು ಶೇ 63ರಷ್ಟು ಕುಸಿದು 2,206ಕ್ಕೆ ತಲುಪಿದೆ. ಥಾಣೆ ಮತ್ತು ಪುಣೆಯಲ್ಲಿ ಬೇಡಿಕೆ ಶೇ 56 ಮತ್ತು 70ರಷ್ಟು ಇಳಿಕೆಯಾಗಿದ್ದು, ಕ್ರಮವಾಗಿ 5,999 ಮತ್ತು 5,169 ಯುನಿಟ್‌ಗಳಷ್ಟಿದೆ ಎಂದು ವರದಿ ಹೇಳಿದೆ.