ETV Bharat / business

ಜಿಎಸ್​ಟಿ ಕಲೆಕ್ಷನ್​: ಹಳೆ ರೆಕಾರ್ಡ್​ ದೂಳಿಪಟ... ಖಜಾನೆಗೆ ಬಂತು ದಾಖಲೆಯ ಮೊತ್ತ - ಬಜೆಟ್​

2019ರ ಆರ್ಥಿಕ ವರ್ಷದ ಮಾಸಿಕ ಜಿಎಸ್​ಟಿ ಆದಾಯದ ಸರಾಸರಿ ಮೊತ್ತವು ₹ 98,114 ಕೋಟಿಯಷ್ಟಿದ್ದು, 2018ರ ಹಣಕಾಸು ವರ್ಷಕ್ಕಿಂತ ಶೇ 9.2ರಷ್ಟು ಅಧಿಕವಾಗಿದೆ. ವಿವಿಧ ಅಂಕಿ-ಅಂಶಗಳ ತರ್ಕಬದ್ಧತೆಯ ಕ್ರಮಗಳ ಹೊರತಾಗಿಯೂ ಇತ್ತೀಚಿನ ತಿಂಗಳುಗಳಲ್ಲಿ ಜಿಎಸ್​ಟಿ ಆದಾಯದಲ್ಲಿ ಬೆಳವಣಿಗೆ ಕಾಣುತ್ತಿರುವುದು ಆಶಾದಾಯಕವಾಗಿದೆ.

ಜಿಎಸ್​ಟಿ
author img

By

Published : Apr 2, 2019, 8:50 AM IST

ನವದೆಹಲಿ: ಹಣಕಾಸು ವರ್ಷ ಕೊನೆಯ ತಿಂಗಳಾದ ಮಾರ್ಚ್​ ತ್ರೈಮಾಸಿಕ ಅವಧಿಯಲ್ಲಿ ದಾಖಲೆಯ ಮೊತ್ತದಲ್ಲಿ ಸರಕು ಮತ್ತು ಸೇವಾ ತೆರಿಗೆ ಹರಿದು ಬಂದಿದೆ.

2018ರ ಡಿಸೆಂಬರ್​ ತ್ರೈಮಾಸಿಕದಲ್ಲಿ ಶೇ 12.1ರಷ್ಟು ತೆರಿಗೆ ಬೊಕ್ಕಸಕ್ಕೆ ಬಂದಿದ್ದರೇ ಮಾರ್ಚ್ ತ್ರೈಮಾಸಿಕದಲ್ಲಿ ಶೇ 14.3ಕ್ಕೆ ಏರಿಕೆ ಆಗಿದೆ. ಮಾರ್ಚ್​ ತಿಂಗಳಲ್ಲೇ ನೇರ, ವೈಯಕ್ತಿಕ ಹಾಗೂ ಸಾಂಸ್ಥಿಕ ತೆರಿಗೆ ಪಾಲು ಸೇರಿ ಒಟ್ಟು ₹ 1.06 ಲಕ್ಷ ಕೋಟಿ ತಲುಪಿದೆ. ಆದರೂ ಬಜೆಟ್​ನಲ್ಲಿ ನಿರೀಕ್ಷಿತ ಉದ್ದೇಶ ತಲುಪುವಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹಣಕಾಸು ಸಚಿವಾಲಯದ ಪ್ರಕಾರ, 2019ರ ಮಾರ್ಚ್​ನಲ್ಲಿ ಜಿಎಸ್​ಟಿ ಹರಿವಿನ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ (ಇಯರ್ ಆನ್ ಇಯರ್) ಶೇ 15.6ರಷ್ಟು ಆಗಿದೆ. ಹಾಗೆಯೇ, 2016ರ ಮಾರ್ಚ್​ ತ್ರೈಮಾಸಿಕದಲ್ಲಿ ಶೇ 14.3ರಷ್ಟು ಹೆಚ್ಚಳವಾಗಿದೆ.

ಮಾಸಿಕ ಏರಿಳಿತಗಳ ಹೊರತಾಗಿಯೂ 2018ರ ಆಗಸ್ಟ್​ನಿಂದ ಜಿಎಸ್​ಟಿ ಸಂಗ್ರಹಣೆ ಪ್ರವೃತ್ತಿ ಕ್ರಮೇಣ ಹೆಚ್ಚುತ್ತಿದೆ. 2019ರ ಆರ್ಥಿಕ ವರ್ಷದಲ್ಲಿ ಮಾಸಿಕ ಜಿಎಸ್​ಟಿ ಸಂಗ್ರಹ ಮೊತ್ತ ಶೇ 9.2ರಷ್ಟು ಬೆಳವಣಿಗೆ ಕಾಣುತ್ತಿದೆ ಎಂದು ಇಂಡಿಯಾ ರೇಟಿಂಗ್ಸ್​ ಮುಖ್ಯ ಎಕನಾಮಿಸ್ಟ್ ಡಿ.ಕೆ. ಪಂತ್ ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.