ETV Bharat / business

HALನಲ್ಲಿರುವ 15 ಶೇ. ಷೇರುಗಳನ್ನು ಮಾರಾಟ ಮಾಡಲು ಮುಂದಾದ ಸರ್ಕಾರ - HAL ಷೇರುಗಳನ್ನು ಮಾರಾಟ ಮಾಡಲು ಮುಂದಾದ ಸರ್ಕಾರ

ರಕ್ಷಣಾ ಸಚಿವಾಲಯವು, HALನ ಶೇ.15 ರಷ್ಟು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಪ್ರತಿ ಷೇರಿಗೆ 1,001 ರೂ.ನಂತೆ ಆಫರ್ ಫಾರ್ ಸೇಲ್ ಮೂಲಕ ಮಾರುವ ಬಗ್ಗೆ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

HAL
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆ
author img

By

Published : Aug 27, 2020, 2:10 PM IST

ಬೆಂಗಳೂರು: ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿನ ಶೇ.15 ರಷ್ಟು ಷೇರುಗಳನ್ನು ಮಾರಾಟ ಪ್ರಸ್ತಾಪ(ಆಫರ್ ಫಾರ್ ಸೇಲ್)ದ ಮೂಲಕ ಪ್ರತಿ ಷೇರಿಗೆ 1,001 ರೂ.ನಂತೆ ಮಾರಾಟ ಮಾಡುತ್ತಿದೆ.

ರಕ್ಷಣಾ ಸಚಿವಾಲಯವು, ಕಂಪನಿಯಲ್ಲಿನ ಷೇರುಗಳ ಶೇ.15 ರಷ್ಟು (5.01 ಕೋಟಿ ಷೇರುಗಳು)10 ರೂ.ಗಳ ಮುಖಬೆಲೆಯ ಷೇರುಗಳನ್ನು ಪ್ರತಿ ಷೇರಿಗೆ 1,001 ರೂ.ನಂತೆ ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡುವ ಬಗ್ಗೆ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 27 ಹಾಗೂ 28ರಂದು ಮಾರಾಟದ ಪ್ರಸ್ತಾಪದಿಂದ ಸುಮಾರು 5,000 ಕೋಟಿ ರೂ. ಹಣ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿ ಸರ್ಕಾರವು ಬಹುಪಾಲು ಈಕ್ವಿಟಿ ಷೇರುಗಳನ್ನು ಹೊಂದಿದೆ. ಅಂದರೆ ಶೇ.89.97 ಷೇರುಗಳನ್ನು ಹೊಂದಿರುವುದರಿಂದ, ಅದು ತನ್ನ ಷೇರುಗಳನ್ನು ವಿನಿಮಯ ವೇದಿಕೆಯಲ್ಲಿ ಮಾರಾಟ ಮಾಡಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.