ETV Bharat / business

ಟೈರ್‌ಗಳ ಗುಣಮಟ್ಟ, ಸುರಕ್ಷತೆಗೆ ಹೊಸ ಮಾನದಂಡಗಳನ್ನು ಪರಿಚಯಿಸಲಿರುವ ಕೇಂದ್ರ - ಟೈರ್ ಒತ್ತಡದ ಮೇಲ್ವಿಚಾರಣಾ ವ್ಯವಸ್ಥೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರಡು ಅಧಿಸೂಚನೆ ಹೊರಡಿಸಿದೆ. ಹೊಸ ಮಾನದಂಡಗಳ ಭಾಗವಾಗಿ ಟೈರ್ ರೋಲಿಂಗ್ ಪ್ರತಿರೋಧ, ರೋಲಿಂಗ್ ಸೌಂಡ್ ಎಮಿಷನ್ ಮತ್ತು ಆರ್ದ್ರ ಬ್ರೇಕಿಂಗ್‌ನಂತಹ ಮಾನದಂಡಗಳನ್ನು ಸುಧಾರಿಸಲು ಕೇಂದ್ರವು ಉತ್ಪಾದನಾ ಕಂಪನಿಗಳಿಗೆ ನಿರ್ದೇಶನ ನೀಡಲಿದೆ.

tyre
tyre
author img

By

Published : May 21, 2021, 10:32 PM IST

ನವದೆಹಲಿ: ರಸ್ತೆ ಸುರಕ್ಷತೆಯು ಭಾರತ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಆ ದಿಕ್ಕಿನಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ, ವಾಹನ ಟೈರ್‌ಗಳ ಗುಣಮಟ್ಟ ಮತ್ತು ಸುರಕ್ಷತೆ ಸುಧಾರಿಸಲು ತಯಾರಕರಿಗೆ ಹೊಸ ಮಾನದಂಡಗಳನ್ನು ನಿಗದಿಪಡಿಸಲು ಸಿದ್ಧತೆ ನಡೆಸುತ್ತಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರಡು ಅಧಿಸೂಚನೆ ಹೊರಡಿಸಿದೆ. ಹೊಸ ಮಾನದಂಡಗಳ ಭಾಗವಾಗಿ ಟೈರ್ ರೋಲಿಂಗ್ ಪ್ರತಿರೋಧ, ರೋಲಿಂಗ್ ಸೌಂಡ್ ಎಮಿಷನ್ ಮತ್ತು ಆರ್ದ್ರ ಬ್ರೇಕಿಂಗ್‌ನಂತಹ ಮಾನದಂಡಗಳನ್ನು ಸುಧಾರಿಸಲು ಕೇಂದ್ರವು ಉತ್ಪಾದನಾ ಕಂಪನಿಗಳಿಗೆ ನಿರ್ದೇಶನ ನೀಡಲಿದೆ.

ಇದನ್ನೂ ಓದಿ: ಗಾಜಾ - ಇಸ್ರೇಲ್​ ಸಂಘರ್ಷ: ಪ್ಯಾಲೆಸ್ತೇನ್​ ಪರ ನಿಲ್ಲುವಂತೆ ಕೆನಡಾ ಪ್ರಧಾನಿಗೆ ಸಂಸದರ ತಂಡ ಮನವಿ

ರೋಲಿಂಗ್ ಪ್ರತಿರೋಧವು ವಾಹನ ಪ್ರಾರಂಭಿಸುವಾಗ ಚಲಿಸುವ ಮೊದಲು ಟೈರ್ ಮತ್ತು ರಸ್ತೆಯ ನಡುವಿನ ಘರ್ಷಣೆಯಾಗಿದೆ. ಹೆಚ್ಚಿನ ಪ್ರತಿರೋಧ ದೀರ್ಘ ಎನರ್ಜಿ ಬಳಕೆಯಾಗಿದೆ. ಟೈರ್ ರೋಲಿಂಗ್ ಸೌಂಡ್ ಎಮಿಷನ್ ಎಂದರೆ ವಾಹನವು ಚಲಿಸುವಾಗ ಟೈರ್‌ಗಳಿಂದ ಹೊರಸೂಸುವ ಶಬ್ದ. ಇದು ಅಧಿಕವಾಗಿದ್ದರೆ ಶಬ್ದ ಮಾಲಿನ್ಯಕ್ಕೆ ಕಾರಣವಾಗಬಹುದು. ವೆಟ್ ಬ್ರೇಕಿಂಗ್ ಎನ್ನುವುದು ನೀರು ಅಥವಾ ಆರ್ದ್ರ ಪ್ರದೇಶಗಳಲ್ಲಿ ಹೈಡ್ರೋಪ್ಲೇನಿಂಗ್ ಅನ್ನು (ಟೈರ್ ಮತ್ತು ರಸ್ತೆಯ ನಡುವಿನ ಘರ್ಷಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಸ್ಥಿತಿ) ತಡೆದುಕೊಳ್ಳಲು ಬೇಕಾದ ಬ್ರೇಕಿಂಗ್ ಫೋರ್ಸ್ ಆಗಿದೆ.

ಈ ಮೂರು ಮಾನದಂಡಗಳನ್ನು ಮತ್ತಷ್ಟು ಸುಧಾರಿಸಲು ಮತ್ತು ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಸರ್ಕಾರ ಟೈರ್ ತಯಾರಕರಿಗೆ ನಿರ್ದೇಶನ ನೀಡಲಿದೆ.

ಈ ಮಾನದಂಡಗಳನ್ನು ಈಗಾಗಲೇ ಯುರೋಪಿಯನ್ ರಾಷ್ಟ್ರಗಳು ಕಡ್ಡಾಯಗೊಳಿಸಿವೆ. ಹೊಸದಾಗಿ ಪರಿಚಯಿಸಲಾದ ಟೈರ್ ಮಾದರಿಗಳಿಗಾಗಿ ಈ ಹೊಸ ಮಾನದಂಡಗಳು 2021ರ ಅಕ್ಟೋಬರ್​ನಿಂದ ಜಾರಿಗೆ ಬರಲಿವೆ. ಅಸ್ತಿತ್ವದಲ್ಲಿರುವ ಮಾದರಿಗಳನ್ನು 2022ರ ಅಕ್ಟೋಬರ್​ನಿಂದ ಜಾರಿಗೆ ತರಲು ಸರ್ಕಾರ ನಿರ್ದೇಶಿಸುತ್ತದೆ.

ಈ ಹೊಸ ನಿಯಮಗಳೊಂದಿಗೆ ಟೈರ್ ಗುಣಮಟ್ಟದ ದೃಷ್ಟಿಯಿಂದ ರೇಟಿಂಗ್ ವ್ಯವಸ್ಥೆಯನ್ನು ತರಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರಿಂದ ಗ್ರಾಹಕರಿಗೆ ಖರೀದಿಸಲು ಸುಲಭವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.