ETV Bharat / business

100 ರೂ. ಕೋವಿಡ್​ ಲಸಿಕೆ ದರ ಇಳಿಕೆ ಬಳಿಕ ಮತ್ತೊಂದು ಸಿಹಿ ಸಮಾಚಾರ - ಕೋವಿಡ್ ವ್ಯಾಕ್ಸಿನೇಷನ್

ಲಸಿಕೆಗಳನ್ನು ಖರೀದಿಸುವಲ್ಲಿ ರಾಜ್ಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಕೇಂದ್ರವು ಇತ್ತೀಚೆಗೆ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ರಾಜ್ಯಗಳು ಮತ್ತು ಖಾಸಗಿ ಕೇಂದ್ರಗಳು ಉತ್ಪಾದಕರಿಂದ ನೇರವಾಗಿ ಲಸಿಕೆಗಳನ್ನು ಸಂಗ್ರಹಿಸಬಹುದು. ತಯಾರಕರು ತಮ್ಮ ಉತ್ಪನ್ನದ ಶೇ 50ರಷ್ಟು ರಾಜ್ಯಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.

COVID-19 vaccines
COVID-19 vaccines
author img

By

Published : Apr 29, 2021, 2:58 PM IST

ನವದೆಹಲಿ: ಕೊರೊನಾ ಲಸಿಕೆ ಬೆಲೆಗಳ ಬಗ್ಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರವು ನಿರ್ಣಾಯಕ ನಿರ್ಧಾರಕ್ಕೆ ಸಜ್ಜಾಗಿದೆ. ಸಾರ್ವಜನಿಕರ ಮೇಲಿನ ಖರ್ಚಿನ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಲಸಿಕೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತೆಗೆದುಹಾಕುವ ಸಾಧ್ಯತೆಯಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಇದರ ಪರಿಣಾಮವಾಗಿ ಲಸಿಕೆ ಬೆಲೆ ಕುಸಿದರೆ, ಹೆಚ್ಚಿನ ಜನರು ಖಾಸಗಿಯಾಗಿ ಲಸಿಕೆ ನೀಡಲು ಪ್ರಾರಂಭಿಸುತ್ತಾರೆ ಎಂದು ಕೇಂದ್ರ ಸರ್ಕಾರ ಆಶಿಸಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಲಸಿಕೆಗಳನ್ನು ಖರೀದಿಸುವಲ್ಲಿ ರಾಜ್ಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು ಕೇಂದ್ರವು ಇತ್ತೀಚೆಗೆ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ರಾಜ್ಯಗಳು ಮತ್ತು ಖಾಸಗಿ ಕೇಂದ್ರಗಳು ಉತ್ಪಾದಕರಿಂದ ನೇರವಾಗಿ ಲಸಿಕೆಗಳನ್ನು ಸಂಗ್ರಹಿಸಬಹುದು. ತಯಾರಕರು ತಮ್ಮ ಉತ್ಪನ್ನದ ಶೇ 50ರಷ್ಟು ರಾಜ್ಯಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಸೀರಮ್ ಮತ್ತು ಭಾರತ್ ಬಯೋಟೆಕ್ ಇತ್ತೀಚೆಗೆ ತಮ್ಮ ಲಸಿಕೆಗಳ ಬೆಲೆಗಳನ್ನು ಅಧಿಕೃತವಾಗಿ ಪ್ರಕಟಿಸಿವೆ.

ಕೋವ್‌ಶೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಕ್ಕೆ 400 ರೂ., ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ನೀಡಲು ಸೀರಮ್ ನಿಗದಿಪಡಿಸಿತ್ತು. ಎರಡು ಡೋಸ್​ನ ಬೆಲೆ1200 ರೂ. ಆಗಲಿದೆ ಎಂದು ದೇಶಾದ್ಯಂತ ವ್ಯಾಪಕ ಟೀಕೆಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಸೀರಮ್ ಕಂಪನಿ ತನ್ನ ಬೆಲೆಯನ್ನು ಕಡಿತಗೊಳಿಸಿ ಪ್ರತಿ ಡೋಸ್‌ಗೆ 300 ರೂ. ನಿಗದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.