ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ಭಾರತ ಮಹತ್ವದ ಬದಲಾವಣೆ ತಂದಿತ್ತು. ಭಾರತದಲ್ಲಿ ನೇರವಾಗಿ ಹೂಡಿಕೆ ಮಾಡಲು ಮುಂದಾಗಿದ್ದ ಚೀನಾಗೆ ಇದರಿಂದ ಕಡಿವಾಣ ಬಿದ್ದಿತ್ತು. ಸರ್ಕಾರದ ಅನುಮತಿ ಮೂಲಕ ಹೂಡಿಕೆ ಮಾಡಲು 12,000 ಕೋಟಿ ರೂ. ಪ್ರಸ್ತಾವನೆ ಇರಿಸಿದೆ.
ಭಾರತದ ಜೊತೆಗೆ ಭೂಗಡಿ ಹೊಂದಿರುವ ರಾಷ್ಟ್ರಗಳು ಇಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ಭಾರತ ಸರ್ಕಾರದ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ಏಪ್ರಿಲ್ನಲ್ಲಿ ಜಾರಿಗೆ ತಂದಿತ್ತು. ನಿಯಮ ಅನುಷ್ಠಾನವಾದ ಏಪ್ರಿಲ್‌ನಿಂದ ಸುಮಾರು 12,000 ಕೋಟಿ ರೂ. ಮೌಲ್ಯದ 120ಕ್ಕೂ ಹೆಚ್ಚು ಚೀನಾದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಸ್ತಾಪಗಳನ್ನು ಸರ್ಕಾರ ಸ್ವೀಕರಿಸಿ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಎಫ್‌ಡಿಐ ನಿಯಮದ ಅನ್ವಯ, ಚೀನಾದ ಎಫ್‌ಡಿಐ ಪ್ರಸ್ತಾಪಗಳಿಗೆ ಯಾವುದೇ ಭಾರತದಲ್ಲಿನ ವಲಯದಲ್ಲಿ ಹೂಡಿಕೆ ಮಾಡಲು ಸರ್ಕಾರದ ಅನುಮೋದನೆ ಬೇಕಿದೆ. ಈ ಪ್ರಸ್ತಾಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸರ್ಕಾರವು ಅಂತರ್ ಸಚಿವಾಲಯ ಸಮಿತಿ ರಚಿಸಿದೆ.
3ನೇ ಹಂತದ ಪ್ರಯೋಗ: 13,000 ಸ್ವಯಂಸೇವಕರ ನೇಮಿಸಿಕೊಂಡ ಭಾರತ್ ಬಯೋಟೆಕ್
ನಾವು ಚೀನಾದಿಂದ 120-130 ಎಫ್‌ಡಿಐ ಪ್ರಸ್ತಾಪಗಳನ್ನು ಸ್ವೀಕರಿಸಿದ್ದೇವೆ. ಇದರ ಮೌಲ್ಯ ಸುಮಾರು 12,000 - 13,000 ಕೋಟಿ ರೂ.ಯಷ್ಟಿದೆ ಎಂದು ಮೂಲಗಳು ಹೇಳಿವೆ.
2000ರ ಏಪ್ರಿಲ್ ಮತ್ತು 2020ರ ಸೆಪ್ಟೆಂಬರ್ ನಡುವೆ ಭಾರತವು ಚೀನಾದಿಂದ 2.43 ಬಿಲಿಯನ್ ಡಾಲರ್ (15,526 ಕೋಟಿ ರೂ.) ಮೌಲ್ಯದ ಎಫ್‌ಡಿಐ ಪಡೆಯಿತು. ಚೀನಾದ ಕೆಲವು ಕಂಪನಿಗಳು ಸರ್ಕಾರಿ ಒಪ್ಪಂದಗಳಲ್ಲಿ ಬಿಡ್ಡಿಂಗ್ ಮಾಡಲು ನೋಂದಣಿಗಾಗಿ ಅರ್ಜಿ ಸಲ್ಲಿಸಿವೆ. ಆ ಪ್ರಸ್ತಾಪಗಳನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಹುಪಕ್ಷೀಯ ಸಂಸ್ಥೆಗಳಿಂದ ಧನಸಹಾಯ ಪಡೆಯುವ ಯೋಜನೆಗಳಲ್ಲಿ ಬಿಡ್ಡಿಂಗ್ ಮಾಡಲು ಚೀನಾದ ಸಂಸ್ಥೆಗಳಿಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಹೇಳಿದರು.