ETV Bharat / business

ಕೊರೊನಾಘಾತ: ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್​ ನೀಡಿದ ಕೇಂದ್ರ!

author img

By

Published : May 1, 2021, 9:11 PM IST

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈಗ ವಿಳಂಬಿತ ರಿಟರ್ನ್ ಸಲ್ಲಿಸುವ ಸಮಯ ಮಿತಿಯನ್ನು ಮತ್ತು 2020-21ರ ಮೌಲ್ಯಮಾಪನ ವರ್ಷಕ್ಕೆ ಪರಿಷ್ಕೃತ ರಿಟರ್ನ್ ಅನ್ನು 2021ರ ಮಾರ್ಚ್ 31ರಿಂದ 2021ರ ಮೇ 31ರವರೆಗೆ ಎರಡು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್‌ಗೆ ಉತ್ತರವಾಗಿ ಏಪ್ರಿಲ್​ 1ರೊಳಗೆ ತೆರಿಗೆ ಸಲ್ಲಿಸಬೇಕು. ಅದಾಗದಿದ್ದರೆ ಆ ನೋಟಿಸ್​ನಲ್ಲಿ ನೀಡಲಾದ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕಾಗಿತ್ತು. ಅದೆರಡೂ ಆಗದೇ ಇದ್ದರೆ ಮೇ 31ರ ಒಳಗೆ ಸಲ್ಲಿಸಬಹುದು ಎಂದಿದೆ.

tax
tax

ನವದೆಹಲಿ: ತೀವ್ರವಾದ ಕೋವಿಡ್ -19 ಸಾಂಕ್ರಾಮಿಕ ನಡುವೆ ತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು ಮತ್ತು ಇತರ ಪಾಲುದಾರರು ಸಲ್ಲಿಸಿದ ಮನವಿಗಳನ್ನು ಗಮನದಲ್ಲಿ ಇಟ್ಟುಕೊಂಡು ತೆರಿಗೆದಾರರಿಗೆ ನಾನಾ ಸಮಯದ ಗಡುವು ವಿಸ್ತರಿಸುವ ಮೂಲಕ ಹೆಚ್ಚಿನ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈಗ ವಿಳಂಬಿತ ರಿಟರ್ನ್ ಸಲ್ಲಿಸುವ ಸಮಯ ಮಿತಿಯನ್ನು ಮತ್ತು 2020-21ರ ಮೌಲ್ಯಮಾಪನ ವರ್ಷಕ್ಕೆ ಪರಿಷ್ಕೃತ ರಿಟರ್ನ್ ಅನ್ನು 2021ರ ಮಾರ್ಚ್ 31ರಿಂದ 2021ರ ಮೇ 31ರವರೆಗೆ ಎರಡು ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್‌ಗೆ ಉತ್ತರವಾಗಿ ಏಪ್ರಿಲ್​ 1ರೊಳಗೆ ತೆರಿಗೆ ಸಲ್ಲಿಸಬೇಕು. ಅದಾಗದಿದ್ದರೆ ಆ ನೋಟಿಸ್​ನಲ್ಲಿ ನೀಡಲಾದ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕಾಗಿತ್ತು. ಅದೆರಡೂ ಆಗದೇ ಇದ್ದರೆ ಮೇ 31ರ ಒಳಗೆ ಸಲ್ಲಿಸಬಹುದು ಎಂದಿದೆ.

ಸಿಬಿಡಿಟಿ ಆಯುಕ್ತರ ಮುಂದೆ ಮೇಲ್ಮನವಿ ಸಲ್ಲಿಸಲು (ಮೇಲ್ಮನವಿ) 2021ರ ಮೇ 31ರವರೆಗೆ ವಿಸ್ತರಣೆ ನೀಡಿದೆ. ಕಾಯಿದೆಯ ಸೆಕ್ಷನ್ 144 ಸಿ ಅಡಿ ವಿವಾದ ಪರಿಹಾರ ಸಮಿತಿಗೆ (ಡಿಆರ್‌ಪಿ) ಆಕ್ಷೇಪಣೆ ಸಲ್ಲಿಸಲು ಇದೇ ರೀತಿಯ ವಿಸ್ತರಣೆ ನೀಡಲಾಗಿದೆ.

ಸೆಕ್ಷನ್ 194-ಐಎ, ಸೆಕ್ಷನ್ 194-ಐಬಿ ಮತ್ತು ಕಾಯಿದೆಯ ಸೆಕ್ಷನ್ 194 ಎಂ ಅಡಿ ಕಡಿತಗೊಳಿಸಲಾದ ತೆರಿಗೆ ಪಾವತಿಗೆ 2021 ಮೇ 31ರವರೆಗೆ ಎರಡು ತಿಂಗಳವರೆಗೆ ಅನುಸರಣೆ ಗಡುವು ಸಡಿಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.